ರಾತ್ರೋರಾತ್ರಿ 50 ಕಡೆ ಚೆಕ್ ಪೋಸ್ಟ್ ನಿರ್ಮಿಸಿ ಭರ್ಜರಿ ತಪಾಸಣೆ

ಶಿವಮೊಗ್ಗ, ಜುಲೈ, 28: ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಶಿವಮೊಗ್ಗ ಪೊಲೀಸರು ಜುಲೈ 27ರ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ನಗರದ 50 ಕಡೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಹಾಗೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್‌: ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವವರು, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಗಾಂಜಾ ಸೇವನೆ ಮತ್ತು ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಕಾರ್ಯ ನಡೆಸಲಾಯಿತು. ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಂಬಂಧ 350 ಪ್ರಕರಣ, 93 ಲಘು ಪ್ರಕರಣಗಳನ್ನು ದಾಖಲು ಮಾಡಲಾಯಿತು.

ದಿಢೀರ್ ಮನೆಗಳ ತಪಾಸಣೆ: ಇನ್ನು ಅಪರಾಧ ಹಿನ್ನೆಲೆ ಉಳ್ಳವರ ಮನೆಗಳನ್ನು ಪೊಲೀಸರು ತಪಾಸಣೆ ನಡೆಸಿದರು. 30 ವರ್ಷದೊಳಗಿನ ಅಪರಾಧ ಹಿನ್ನೆಲೆ ಉಳ್ಳವರ ಮನೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, ವೈನ್ ಶಾಪ್ ಸುತ್ತಮುತ್ತ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಿದರು. ಪೊಲೀಸರ ಶೋಧ ಕಾರ್ಯಚರಣೆ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿವೆ. 1 ತಲ್ವಾರ್, 4 ಡ್ರ್ಯಾಗರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

Overnight 50 Checkposts Erected, Shivamogga Police Surprises With Sudden Operation

ಪರಿಶೀಲನೆ ವೇಳೆ 11 ಅಬಕಾರಿ ಪ್ರಕರಣ, 350 ಸಂಚಾರಿ ಉಲ್ಲಂಘನೆ ಪ್ರಕರಣ, 93 ಲಘು ಪ್ರಕರಣಗಳನ್ನು ದಾಖಲಿಸಲಾಗಿದ್ದು, 96 ತಂಬಾಕು ಪ್ರಕರಣ, 10 ಗಾಂಜಾ ಸೇವನೆ ಮಾಡಿದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Overnight 50 Checkposts Erected, Shivamogga Police Surprises With Sudden Operation

ಪೊಲೀಸರಿಂದ ಬೃಹತ್‌ ಕಾರ್ಯಾಚರಣೆ: ನಗರದ ವಿವಿಧೆಡೆ ಪೊಲೀಸರು ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿದರು. ಬೇರೆ ತಾಲೂಕುಗಳಿಂದಲೂ ಪೊಲೀಸರು, ಡಿಎಆರ್ ಸಿಬ್ಬಂದಿಯನ್ನು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹೀಗೆ ಶಿವಮೊಗ್ಗದಲ್ಲಿ ಪೊಲೀಸರಿಂದ ರಾತ್ರೋ ರಾತ್ರಿಯೇ ಭರ್ಜರಿ ಕಾರ್ಯಾಚರಣೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+