ಬಿಜೆಪಿ ಪ್ರಚಂಡ ಬಹುಮತ, ಶಿವಮೊಗ್ಗದಲ್ಲಿ 1 ಲಕ್ಷ ಲಾಡು ಹಂಚಿಕೆ

ಶಿವಮೊಗ್ಗ, ಮೇ 28 : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಆದ್ದರಿಂದ, ಶಿವಮೊಗ್ಗ ನಗರದಲ್ಲಿ ಪ್ರತಿ ಮನೆಗೆ ಲಡ್ಡು ಹಂಚಲು ತೀರ್ಮಾನಿಸಲಾಗಿದೆ.

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಈ ಕುರಿತು ಮಾಹಿತಿ ನೀಡಿದರು. ಕೆ.ಎಸ್.ಈಶ್ವರಪ್ಪ ಅವರ ಶಿವಮೊಗ್ಗದ ನಿವಾಸದಲ್ಲಿ ಲಡ್ಡು ತಯಾರಿ ನಡೆಯುತ್ತಿದೆ. 1 ಲಕ್ಷ ಲಡ್ಡು ತಯಾರಾಗುತ್ತಿದ್ದು, ಪ್ರತಿ ಮನೆಗೆ ಹಂಚಲಾಗುತ್ತದೆ.

ಕೆ.ಎಸ್.ಈಶ್ವರಪ್ಪ ಅವರ ಉಸ್ತುವಾರಿಯಲ್ಲಿಯೇ 50 ಬಾಣಸಿಗಲು ಲಡ್ಡು ತಯಾರಿಯಲ್ಲಿ ತೊಡಗಿದ್ದಾರೆ. ನಾಲ್ಕು ದಿನದಿಂದ ಲಡ್ಡು ಮಾಡುವ ಕಾರ್ಯ ನಡೆಯುತ್ತಿದ್ದು, ಮೇ 30ರಂದು ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನ ಲಡ್ಡುವನ್ನು ಹಂಚಲಾಗುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2,23,360 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆದ್ದರಿಂದ, ಸಂಭ್ರಮಾಚರಣೆ ಮಾಡಲು ಲಡ್ಡು ಹಂಚಿಕೆ ಮಾಡಲಾಗುತ್ತಿದೆ.

ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

'ನರೇಂದ್ರ ಮೋದಿ ಅವರು ಮೇ 30ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದೇ ದಿನ ಬೆಳಗ್ಗೆ ಶಿವಮೊಗ್ಗ ನಗರದ ಪ್ರತಿ ಮನೆಗೂ ಲಡ್ಡು ಹಂಚಲಾಗುತ್ತದೆ. ಮುಖ್ಯ ರಸ್ತೆಯಲ್ಲಿರುವ ಪ್ರತಿ ಅಂಗಡಿಗೂ ಹೋಗಿ ನಾವೇ ಲಡ್ಡು ಹಂಚುತ್ತೇವೆ' ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಮೂರು ಕಡೆ ಲಾಡು ತಯಾರಿಕೆ

ಮೂರು ಕಡೆ ಲಾಡು ತಯಾರಿಕೆ

ಕೆ.ಎಸ್.ಈಶ್ವರಪ್ಪ ಮನೆ ಹೊರತುಪಡಿಸಿ ನಗರದ ಇನ್ನೂ ಎರಡು ಕಡೆಗಳಲ್ಲಿ ಲಡ್ಡು ತಯಾರಿಸಲಾಗುತ್ತಿದೆ. ಗೋಪಾಳ ಮತ್ತು ವೆಂಕಟೇಶ ನಗರದಲ್ಲಿ ಲಡ್ಡು ತಯಾರಿಕೆ ಬಿರುಸಿನಿಂದ ಸಾಗಿದೆ. ಲಡ್ಡುಗಳ ಪ್ಯಾಕಿಂಗ್‌ ಕೆಲಸವೂ ಸಾಗುತ್ತಿದೆ.

ಲಡ್ಡು ಪ್ಯಾಕೇಟ್‌ ಮೇಲೆ ಮೋದಿ ಚಿತ್ರ

ಲಡ್ಡು ಪ್ಯಾಕೇಟ್‌ ಮೇಲೆ ಮೋದಿ ಚಿತ್ರ

ಕೆ.ಎಸ್.ಈಶ್ವರಪ್ಪ ಅವರ ಮನೆ ಹೊರತುಪಡಿಸಿ ನಗರದ ಉಳಿದ ಎಲ್ಲಾ ಮನೆಗೂ ಲಡ್ಡು ಹಂಚಲಾಗುತ್ತದೆ. ಲಡ್ಡು ಪ್ಯಾಕೇಟ್‌ ಮೇಲೆ ಕೆ.ಎಸ್.ಈಶ್ವರಪ್ಪ ಮತ್ತು ನರೇಂದ್ರ ಮೋದಿ ಅವರ ಚಿತ್ರವಿದೆ. ಬಿಜೆಪಿಯ ಲೋಗೋ ಸಹ ಇದೆ.

ಬಿ.ವೈ.ರಾಘವೇಂದ್ರ ಗೆಲುವು

ಬಿ.ವೈ.ರಾಘವೇಂದ್ರ ಗೆಲುವು

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ಸಹ ಗೆಲುವು ಸಾಧಿಸಿದ್ದಾರೆ. ಆದ್ದರಿಂದ, ವಿಜಯೋತ್ಸವ ಆಚರಣೆ ಮಾಡಲು ಲಡ್ಡು ಹಂಚಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ರಾಘವೇಂದ್ರ ಅವರು 110928 ಲೀಡ್ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+