ಉದ್ಯೋಗದ ಹುಸಿ ಭರವಸೆ; ಶೂ ಪಾಲಿಶ್, ಹಣ್ಣು ಮಾರಿ ಪ್ರತಿಭಟನೆ
ಶಿವಮೊಗ್ಗ, ಸೆಪ್ಟೆಂಬರ್ 20: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಎನ್ ಎಸ್ ಯುಐ ಕಾರ್ಯಕರ್ತರು ಬಸ್ ನಿಲ್ದಾಣದ ವೃತ್ತದಲ್ಲಿ ಶೂ ಚಪ್ಪಲಿ ಪಾಲಿಶ್ ಮಾಡಿ, ಹಣ್ಣು ಮಾರಾಟ ಮಾಡಿ ವಿಭಿನ್ನ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಮೊದಲ ಅವಧಿಯಲ್ಲಿ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ 1 ಲಕ್ಷ ನಿರುದ್ಯೋಗಿಗಳಿಗೂ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಆರೋಪಿಸಿದರು. ಇಂದು ಶಿವಮೊಗ್ಗದ ಅಶೋಕ ವೃತ್ತದಲ್ಲಿ ಎನ್ ಎಸ್ ಯುಐ ಕಾರ್ಯಕರ್ತರು ಶೂ ಪಾಲಿಶ್ ಮಾಡುತ್ತಾ, ಚಪ್ಪಲಿ ಮಾರಾಟ, ಹಣ್ಣು, ಟೀ ಮಾರುವ ಮೂಲಕ ಗಮನ ಸೆಳೆಯುವಂತೆ ಪ್ರತಿಭಟನೆ ನಡೆಸಿದರು.

ಅಂಬಾನಿ, ಅದಾನಿಗಳಿಗೆ ಮಾತ್ರ ಈ ದೇಶದಲ್ಲಿ ಒಳ್ಳೆಯ ದಿನಗಳು ಬರುತ್ತಿವೆ. ಆದರೆ ಸಾಮಾನ್ಯ ನಾಗರಿಕರು ಉದ್ಯೋಗ ಇಲ್ಲದೆ ಪರಿತಪಿಸುವಂತಾಗಿದೆ. ಪದವೀಧರರು ಕೆಲಸಕ್ಕಾಗಿ ಅಲೆದಾಡುವುದು ತಪ್ಪಿಲ್ಲ. ಎಲ್ಲೆಲ್ಲೂ ಉದ್ಯೋಗ ಕಡಿತದ ಮಾತು ಕೇಳಿಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications