ಜೀವನದ ಕಷ್ಟ ಕಾಲದಲ್ಲಿ ಕೈಹಿಡಿದ 'ನರೇಗಾ' ಯೋಜನೆ
ಶಿವಮೊಗ್ಗ,ಡಿಸೆಂಬರ್ 01: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಥವ ನರೇಗಾ ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರಿಗೆ ಆರ್ಥಿಕ ಬಲವನ್ನು ತುಂಬಿದೆ. ಯೋಜನೆಯ ಯಶಸ್ಸಿನ ಕಥೆಗಳನ್ನು ಹುಡುಕುತ್ತಾ ಹೋದರೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಬಡ ಕುಟುಂಬಕ್ಕೆ ಯೋಜನೆ ಹೇಗೆ ಅನುಕೂಲವಾಗಿದೆ? ಎಂಬ ವಿವರ ಸಿಗುತ್ತದೆ. ಇಂತಹ ಒಂದು ಯಶಸ್ಸಿನ ಕಥೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಿಕ್ಕಿದೆ, ವಿವರಗಳು ಇಲ್ಲಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ನಿವಾಸಿ ತಬಸ್ಸುಮ್ ಅವರು ನರೇಗಾ ಯೋಜನೆಯನ್ನು ಸ್ಮರಿಸುತ್ತಾರೆ. "ಜೀವನದ ಕಷ್ಟ ಕಾಲದಲ್ಲಿ ಕೈಹಿಡಿದಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ತಮ್ಮ ಪತಿಯ ಅಕಾಲಿಕ ಮರಣದ ನಂತರ ಜೀವನ ನಿರ್ವಹಣೆಗೆ ಸಹಕಾರಿಯಾದದ್ದು ಯೋಜನೆ" ಎಂದು ಅವರು ಹೇಳಿದ್ದಾರೆ.

ಪತಿಯ ಅಕಾಲಿಕ ಮರಣ: ತಬಸ್ಸುಮ್ ಪತಿ ಸೈಯದ್ ನಿಸಾರ್ ಅಕಾಲಿಕ ಮರಣದ ನಂತರ ಸಂಸಾರ ನಿರ್ವಹಣೆಯ ಜವಾಬ್ದಾರಿ ಸಂಪೂರ್ಣವಾಗಿ ಇವರ ಮೇಲೆ ಬಿತ್ತು. ಮನೆ ನಿರ್ವಹಣೆ ಹಾಗೂ ಮಗನನ್ನು ಓದಿಸಲು, ಆತನ ಭವಿಷ್ಯ ರೂಪಿಸಲು ಇವರು ಏನಾದರೂ ಕೆಲಸ ಮಾಡಬೇಕಿತ್ತು. ಹೆಚ್ಚು ಓದದ, ಊರಿನಲ್ಲಿ ಕೃಷಿ ಜಮೀನೂ ಇಲ್ಲದ ತಬಸ್ಸುಮ್ ಅವರಿಗೆ ಆಸರೆಯಾದದ್ದು ನರೇಗಾ ಯೋಜನೆಯಡಿ ಸಿಗುವ ಕೂಲಿ ಕೆಲಸ.
ಊರಿನಲ್ಲಿ ಸಿಗುವ ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡು ಉಳಿದ ದಿನಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಕೆಲಸ ಮಾಡುತ್ತಿದ್ದಾರೆ. ಸಕ್ರಿಯ ಕೆಲಸ ನಿರ್ವಹಣೆಯಿಂದ ಗ್ರಾಮ ಪಂಚಾಯಿತಿಯವರು ಈಕೆಯನ್ನು ಕಾಯಕಬಂಧುವಾಗಿ ನೇಮಿಸಿದ್ದಾರೆ. ಕಾಯಕ ಬಂಧುವಾದ ಇವರು ಕೂಲಿ ಕೆಲಸ ನಿರ್ವಹಿಸುತ್ತಾ ತನ್ನಂತೆ ಇತರರು ಉದ್ಯೋಗ ಖಾತ್ರಿ ಕೆಲಸ ಪಡೆಯುವಂತೆ ಪ್ರೇರಣೆ ನೀಡುತ್ತಿದ್ದಾರೆ.
ಸುಮಾರು 13 ರಿಂದ 14 ವರ್ಷದಿಂದ ನರೇಗಾ ಅಡಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಾ ಬಂದಿರುವ ತಬಸ್ಸುಮ್ ಕೂಲಿ ಹಣವನ್ನು ಸ್ವಸಹಾಯ ಸಂಘದಲ್ಲಿ ತೊಡಗಿಸುತ್ತಿದ್ದು, ಸ್ವಸಹಾಯ ಸಂಘದ ಸದಸ್ಯರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿ ಕೆಲಸ ನಿರ್ವಹಿಸುವಂತೆ ಮತ್ತು ವೈಯಕ್ತಿಕ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ ಉದ್ಯೋಗಖಾತ್ರಿ ಕೆಲಸ ಪಡೆಯಲು ಹಾಗೂ ಅವರಿಗೆ ಕಾಮಗಾರಿ ಸ್ಥಳದಲ್ಲಿ ಬೇಕಾದ ಸೌಲಭ್ಯಗಳನ್ನು ಪಂಚಾಯಿತಿಯಿಂದ ಒದಗಿಸಲು ನೆರವಾಗುತ್ತಿದ್ದಾರೆ. ಜೊತೆಗೆ ತಾವೂ ಅಕುಶಲ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. 2023-24ನೇ ಸಾಲಿನಲ್ಲಿ 100 ದಿನ ಕೆಲಸ ಪೂರೈಸಿ ರೂ. 30,900 ಗಳಿಸಿದ್ದರೆ ಪ್ರಸಕ್ತ ಸಾಲಿನಲ್ಲಿ ದಿನಗೂಲಿ ಮೊತ್ತ ರೂ.349 ಇದ್ದು ಈವರೆಗೆ 90 ದಿನ ಕೆಲಸ ಮಾಡಿ ರೂ. 31,410 ಗಳಿಸಿದ್ದಾರೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್ ಮಾತನಾಡಿ, "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಾವುದೇ ಗ್ರಾಮೀಣ ವಯಸ್ಕ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ನೂರು ದಿನಗಳ ಉದ್ಯೋಗಕ್ಕಾಗಿ ಕಾನೂನುಬದ್ಧ ಭರವಸೆ ನೀಡುತ್ತದೆ. ಕನಿಷ್ಠ ವೇತನದಲ್ಲಿ ಸಾರ್ವಜನಿಕ ಕೆಲಸಕ್ಕೆ ಸಂಬಂಧಿಸಿದ ಅಕುಶಲ ಕೆಲಸಗಳನ್ನು ನೀಡಲಾಗುವುದು. ತಬಸ್ಸುಮ್ ರೀತಿಯ ಅನೇಕ ಮಹಿಳೆಯರು, ನಿರುದ್ಯೋಗಿಗಳು, ಅಕಶುಲ ಕೆಲಸಗಾರರು ನರೇಗಾ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ" ಎಂದರು.
ಮಂಡಗದ್ದೆಯ ಕಾಯಕ ಬಂಧು ತಬಸ್ಸುಮ್ ಮಾತನಾಡಿ, "ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನನ್ನ ಕೈಹಿಡಿದಿದೆ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳ ಸೌಲಭ್ಯವನ್ನು ಸಹ ಪಡೆಯುತ್ತಿದ್ದು, ಈ ಯೋಜನೆಗಳಿಂದಾಗಿ ತಮ್ಮ ಕುಟುಂಬ ನಿರ್ವಹಣೆ, ಮಗನ ವಿದ್ಯಾಭ್ಯಾಸಕ್ಕೆ ಬಹಳ ಸಹಾಯವಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರದ ಈ ಯೋಜನೆಗಳು ಬೆನ್ನೆಲುಬಾಗಿ ನಿಂತಿವೆ" ಎಂದು ಹೇಳಿದ್ದಾರೆ.
ಮಂಡಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮಾತನಾಡಿ, "ತಬಸ್ಸುಮ್ ಅನೇಕ ವರ್ಷಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇವರನ್ನು ಗ್ರಾಮ ಪಂಚಾಯಿತಿಯ ಕಾಯಕ ಬಂಧುವಾಗಿ ಗುರುತಿಸಿ ಗುರುತಿನ ಚೀಟಿ ನೀಡಿದ್ದು, ಇವರು ಇತರರೂ ನರೇಗಾ ಯೋಜನೆಯಡಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸಲು ಪ್ರೇರೇಪಿಸುತ್ತಿದ್ದಾರೆ. ಇಂತಹ ಮಹಿಳೆಯರ ಸ್ವಾವಲಂಬನೆ ಬದುಕು ಮಾದರಿಯಾಗಿದೆ" ಎಂದರು.
ಮಂಡಗದ್ದೆ ಪಿಡಿಓ ಸುಧಾ ಮಾತನಾಡಿ, "ತಬಸ್ಸುಮ್ ಅವರು ಏಕಪೋಷಕರಾಗಿದ್ದು ಅನೇಕ ವರ್ಷಗಳಿಂದ ನರೇಗಾ ಯೋಜನೆಯಡಿ ಕೂಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾ, ಪಂಚಾಯಿತಿ ಇವರನ್ನು ಕಾಯಕ ಬಂಧುವಾಗಿ ಗುರುತಿಸಿದ್ದು ಈ ಕೆಲಸವನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರಿಗೆ ಉತ್ತಮ ಕಾಯಕ ಬಂಧು ಪ್ರಶಸ್ತಿ ಸಹ ಬಂದಿದೆ" ಎಂದು ಹೇಳಿದರು.
ಬರಹ ಕೃಪೆ: -ಭಾಗ್ಯ ಎಂ. ಟಿ., ವಾರ್ತಾ ಸಹಾಯಕರು, ವಾರ್ತಾ ಇಲಾಖೆ
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications