Get Updates
Get notified of breaking news, exclusive insights, and must-see stories!

ಮಂಗಳೂರು-ಶಿವಮೊಗ್ಗ-ಮಂತ್ರಾಲಯ ಬಸ್: ಸಮಯ, ಮಾರ್ಗದ ಮಾಹಿತಿ

ಶಿವಮೊಗ್ಗ, ಜನವರಿ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಮಂಗಳೂರು ವಿಭಾಗದಿಂದ ಜನವರಿ 14 ರಂದು ಮಂಗಳೂರು-ಉಡುಪಿ-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಸೌಲಭ್ಯವನ್ನು ಆರಂಭಿಸುತ್ತಿದೆ.

ಈ ಬಸ್ ಮಂಗಳೂರಿನಿಂದ ಸಂಜೆ 3.30ಕ್ಕೆ ಹೊರಟು ಉಡುಪಿ-ಕುಂದಾಪುರ-ಹಾಲಾಡಿ-ಸಿದ್ಧಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗಕ್ಕೆ ರಾತ್ರಿ 9.15ಕ್ಕೆ ತಲುಪುತ್ತದೆ.

ಶಿವಮೊಗ್ಗದಿಂದ 9.45ಕ್ಕೆ ಹೊರಟು ಚನ್ನಗಿರಿ-ಹೊಳಲ್ಕೆರೆ-ಚಿತ್ರದುರ್ಗ-ಚಳ್ಳಕೆರೆ-ರಾಂಪುರ-ಬಳ್ಳಾರಿ-ಅಲೂರು-ಅಧೋನಿ-ಮಾಧವರಂ ಮಾರ್ಗವಾಗಿ ಮಂತ್ರಾಲಯಕ್ಕೆ ಬುಧವಾರ ಬೆಳಿಗ್ಗೆ 6.20ಕ್ಕೆ ತಲುಪುವುದು.

 Mangaluru-Shivamogga-Mantralaya KSRTC Bus: Time And Route Information

ಅದೇ ರೀತಿ ಮಂತ್ರಾಲಯದಿಂದ ಮರು ಪ್ರಯಾಣ ಬೆಳೆಸುವ ಬಸ್ ಸಂಜೆ 5.30ಕ್ಕೆ ಹೊರಟು ಮಂಗಳೂರಿಗೆ ಮರುದಿನ ಬೆಳಗ್ಗೆ 8.40ಕ್ಕೆ ತಲುಪುವುದು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+