ಶಿವವೊಗ್ಗ ನೆರೆ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೇಟಿ: ಹೊಸ ಕುಡಿಯುವ ನೀರಿನ ಯೋಜನೆ ಭರವಸೆ
ಶಿವಮೊಗ್ಗ, ಜುಲೈ 28: ನಿರಂತರ ಮಳೆಗೆ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಪ್ರವಾಹ ನೆರೆ ಹಾನಿ ಉಂಟಾಗಿದೆ. ಭೂ ಕುಸಿತಗಳು ಸಂಭವಿದಿದ್ದು, ಜನರು ಆತಂಕದಲ್ಲಿ ಜೀವಿಸುತ್ತಿದ್ದಾರೆ. ಈ ಪ್ರದೇಶಗಳಿಗೆ ಭಾನುವಾರ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಮಾನಾಡಿದರು. ಜನರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಪಾದಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಯವರ ಹಗರಣಗಳು ಬೇಕಾದಷ್ಟಿದ್ದು, ಅವು ಹೊರಬರುತ್ತವೆ. ಸದನದಲ್ಲಿ ಬಿಲ್ ಪಾಸ್ ಮಾಡುವ ವೇಳೆ ಬಿಜೆಪಿ ಶಾಸಕರು ಕೂಗಿಕೊಳ್ಳುತ್ತಿರುತ್ತಾರೆ. ಅವರಿಗೆ ಸದನದಲ್ಲಿ ಹೇಗಿರಬೇಕೆಂಬುದೇ ಗೊತ್ತಿಲ್ಲ ಎಂದರು.

ಅಧಿವೇಶನದಲ್ಲಿ ಬಿಜೆಪಿ ನಾಯಕರು ಪಕ್ಷದವರು ನೀರಿಲ್ಲದ ಬಾವಿ ಬಂದು ಬೀಳೋದು ಸರಿಯಲ್ಲ, ವಿಧಾನಸಭೆಯಲ್ಲಿ ಕಲಾಪ ನಡೆಯಲು ವಿರೋಧ ಪಕ್ಷದವರು ಬಿಡಲಿಲ್ಲ. ಪದೇ ಪದೇ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಿಜೆಪಿಯವರ ನಡೆ ಸರಿಯಿಲ್ಲ.
ಜಿಲ್ಲೆಯಲ್ಲಿ ಸಚಿವರು ಫುಲ್ ಅಲರ್ಟ್
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಅಲರ್ಟ್ ಆಗಿರುವ ಸಚಿವರು, ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಮಂಡ್ಲಿ, ಸವಾಯಿಪಾಳ್ಯ, ಇಮಾಂಬಾಡ, ಸೀಗೆಹಟ್ಟಿ, ವಿದ್ಯಾನಗರ, ಭೋವಿ ಕಾಲೋನಿಗೆ ಭೇಟಿ ನೀಡಿ, ಅಹವಾಲು ಸ್ವೀಕಾರ ಸ್ವೀಕರಿಸಿದರು. ಜನರು ಪ್ರತಿ ವರ್ಷ ಮಳೆಗಾಲದಲ್ಲಿ ಈ ರೀತಿ ಸಮಸ್ಯೆ ತಲೆದೋರುತ್ತದೆ ಎಂದು ಅಳಲು ತೋಡಿಕೊಂಡರು. ಸಮಸ್ಯೆಗಳ ಪರಿಹಾರಕ್ಕೆ ಮನವಿ ಪತ್ರ ಸಲ್ಲಿಸಿದರು. ನೆರಪೀಡಿತ ಪ್ರದೇಶಳಿಗೆ ನಿರಂತರವಾಗಿ ನಾವು ಭೇಟಿ ಕೊಡುತ್ತಿದ್ದೇವೆ. ಈ ಮೂಲಕ ವಿಪಕ್ಷ ಬಿಜೆಪಿಯವರ ಬಾಯಿ ಮುಚ್ಚುವಂತೆ ಮಾಡಲಾಗಿದೆ.
ಸೊರಬ ತಾಲೂಕಿಗೆ ಹೊಸ ಕುಡಿಯುವ ನೀರು ಯೋಜನೆ
ಕಾಂಗ್ರೆಸ್ ಸರ್ಕಾರ ಬಂದರೆ ರಾಜ್ಯದಲ್ಲಿ ಬರಗಾಲ ಬರುತ್ತದೆ ಎನ್ನುತ್ತಿದ್ದರು. ಆದರೆ ಈಗ ಉತ್ತಮ ಮಳೆಯಾಗಿದೆ. ಈಗ ರಾಜ್ಯದ ಎಲ್ಲಾ ಜಲಾಶಯ ಭರ್ತಿಯಾಗಿವೆ. ಕುಡಿಯುವ ನೀರಿನ ಬಳಕೆಗೆ ಶರಾವತಿ ಜಲಾಶಯ ದ ನೀರು ಬಳಸಬಹುದು. ಸೊರಬ ತಾಲೂಕಿಗೆ ಈ ಸಲ ಹೊಸ ಯೋಜನೆ ತಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

ಬಂಗಾರಪ್ಪನವರ ಶ್ರಮದಿಂದ ತುಂಗಾ ಜಲಾಶಯ
ತುಂಗಾ ಜಲಾಶಯದಲ್ಲಿ ಹೂಳು ತೆಗೆಯುವ ಬಗ್ಗೆ ಅಧಿಕಾರಿಗಳ ಬಳಿ ಕೇಳಿದೆ. ಆದರೆ ಅವರು ಅಸಾಧ್ಯ ಎಂದು ಹೇಳಿದ್ದಾರೆ. ಸದ್ಯಕ್ಕೆ ಜಲಾಶಯ ದ ಸಣ್ಣಪುಟ್ಟ ರಿಪೇರಿ ಕಾರ್ಯ ಇದೆ. ಅದು ಮುಂದುವರಿಯಲಿದ್ದು, ಹೂಳು ತೆಗೆಯುವ ಬಗ್ಗೆ ಸುಮ್ಮನೆ ಹೂಳು ತೆಗೆಯೋ ಬಗ್ಗೆ ಮಾತಾನಾಡೋದು ಸರಿಯಲ್ಲ. ಜಲಾಶಯ ನಿರ್ಮಾಣ ಮಾಡಿದ್ದು ಬಂಗಾರಪ್ಪ ನವರು. ಅವತ್ತು ತುಂಗಾ ಜಲಾಶಯ ಮಾಡಿದೇ ಇದ್ದಿದ್ದರೆ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಇರುತ್ತಿರಲಿಲ್ಲ ಎಂದು ತಂದೆಯ ಕಾರ್ಯ ನೆನಪಿಸಿದರು.
ಮೆಗ್ಗಾನ್ ಆಸ್ಪತ್ರೆಗೆ ಅನುದಾನ
ಹೊಸನಗರ ಆಸ್ಪತ್ರೆಯಲ್ಲಿ ಅವ್ಯವಸ್ಥೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಸಚಿವರು ಬಂದಾಗ ಈ ಬಗ್ಗೆ ಗಮನಕ್ಕೆ ತಂದು ವಿಶೇಷ ಅನುದಾನ ಕೊಡುವಂತೆ ಮನವಿ ಮಾಡುತ್ತೇನೆ. ಜಿಲ್ಲೆ ಯ ಎಲ್ಲಾ ಆಸ್ಪತ್ರೆ ಗೆ ಆರೋಗ್ಯ ಸಚಿವರನ್ನು ಕರೆದುಕೊಂಡು ಬರುತ್ತೇನೆ. ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆ ಗೆ ಅನುದಾನ ಕೇಳಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಈ ಹಿಂದೆ ಮಾಡಿರುವ ಯೋಜನೆಗಳಲ್ಲಿ ಕೆಲವು ಕಾನೂನು ತೊಡಕಿದ್ದು. ಶರಾವತಿ ಸಂತ್ರಸ್ತರಿಗೆ ಸಹಕಾರ ನೀಡುವ ಕೆಲಸವಾಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂತ್ರಸ್ತರಿಗೆ ಅನ್ಯಾಯ ಆಗಿರುವ ಬಗ್ಗೆ ಸರ್ಕಾರ ಕೇಸ್ ನಡೆಸಲಿದೆ ಎಂದರು.












Click it and Unblock the Notifications