Geetha Shivarajkumar: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‌ಗೆ ಶಿವಮೊಗ್ಗ ಜನತೆಯ ಪ್ರಶ್ನೆಗಳು!
ಶಿವಮೊಗ್ಗ, ಮಾರ್ಚ್ 13: ಲೋಕಸಭೆ ಚುನಾವಣೆ 2024ಕ್ಕೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಏಳು ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿದೆ. ಮೊದಲ ಪಟ್ಟಿಯಲ್ಲಿ ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿತ್ತು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬೆಂಗಳೂರಿನಿಂದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ) ಶಿವಮೊಗ್ಗದಿಂದ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಗೀತಾ ಶಿವರಾಜಕುಮಾರ್ ಮುಂಬರುವ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಚುನಾವಣೆಗೂ ಮುನ್ನವೇ ಗೀತಾ ಶಿವರಾಜ್‌ಕುಮಾರ್‌ಗೆ ಸಂಕಷ್ಟ!
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು, ದೊಡ್ಮನೆ ಸೊಸೆಯಾಗಿರುವ ಗೀತಾ ಶಿವರಾಜ್ ಕುಮಾರ್ ಕೆಲ ವರ್ಷಗಳ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಜೊತೆಗೆ ಸೇರಿಕೊಂಡಿದ್ದಾರೆ. ಈ ಬಾರಿ ಮತ್ತೆ ಶಿವಮೊಗ್ಗದಿಂದಲೇ ಕಣಕ್ಕೆ ಇಳಿಯುತ್ತಿದ್ದಾರೆ. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ, ತಾವು ಚುನಾವಣಾ ತಯಾರಿ ಮಾಡಿಕೊಂಡಿದ್ದು, ಕೆಲ ವರ್ಷಗಳ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿ ಸಣ್ಣಪುಟ್ಟ ತಪ್ಪುಗಳಿಂದ ಸೋತಿದ್ದೆ . ಈ ಬಾರಿ ತಾನು ಸೋಲುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದ ಜನತೆ ನಾಲ್ಕು ಗಂಭೀರ ಪ್ರಶ್ನೆಗಳನ್ನು ಹಾಕಿದ್ದು, ಇವುಗಳಿಗೆ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ. ಗೆಲ್ಲುವ ವಿಶ್ವಾಸದಲ್ಲಿರುವ ಗೀತಾ ಅವರಿಗೆ ಇವು ಮುಳುವಾಗಬಹುದು. ಕ್ಷೇತ್ರದ ಜನತೆ ಕೇಳಿರುವ ಪ್ರಶ್ನೆಗಳನ್ನು ಫೋಸ್ಟರ್‌ಗಳನ್ನಾಗಿಸೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದ ಜನತೆಯ ಪ್ರಶ್ನೆಗಳು ಹೀಗಿವೆ
* ಕೊನೆಯ ಚುನಾವಣೆಯಲ್ಲಿ ಸೋತು ಬೆಂಗಳೂರಿಗೆ ತೆರಳಿದ ಮೇಲೆ ಶಿವಮೊಗ್ಗಕ್ಕೆ ಎಷ್ಟು ಬಾರಿ ಬ೦ದಿದ್ದೀರಿ.. ?
* ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಅವರ ಕೊಡುಗೆ ಏನು..?
* ಶಿವಮೊಗ್ಗದ ಯಾವ ಹಳ್ಳಿಗಳಿಗೆ ಭೇಟಿ ನೀಡಿದ್ದೀರಿ..?
* ಶಿವಮೊಗ್ಗದ ಜನರ ಕಷ್ಟವನ್ನು ಎಂದಾದರೂ ಕೇಳಿದ್ದಾರಾ..?
ಈ ನಾಲ್ಕು ಪ್ರಶ್ನೆಗಳನ್ನು ಇಟ್ಟುಕೊಂಡು ಜನರು ಗೀತಾ ಶಿವರಾಜ್‌ಕುಮಾರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಾನು ಶಿವಮೊಗ್ಗದ ಜೊತೆಗೆ ಸಂಬಂಧ ಕಡಿದುಕೊಂಡಿಲ್ಲ ಎಂದು ಅವರು ಹಲವು ಬಾರಿ ಹೇಳಿದ್ದಾರೆ. ಆದರೆ, ಅಲ್ಲಿನ ಜನ ಮಾತ್ರ ಚುನಾವಣೆಯಲ್ಲಿ ಸೋತು ಬೆಂಗಳೂರಿಗೆ ಹೋದ ಮೇಲೆ ಶಿವಮೊಗ್ಗಕ್ಕೆ ಎಷ್ಟು ಸಲಿ ಬಂದಿದ್ದಿರಿ ಎಂದು ಚಾಟಿ ಬೀಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ನೀವು ಶಿವಮೊಗ್ಗ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಿರಿ...? ಶಿವಮೊಗ್ಗದ ಯಾವುದಾದರೂ ಹಳ್ಳಿಗೆ ಭೇಟಿ ನೀಡಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಜನರ ಕಷ್ಟ ಕೇಳಿದ್ದಿರಾ ಎಂದು ಕಿಡಿಕಾರಿದ್ದಾರೆ. ಇದು ಗೀತಾ ಶಿವರಾಜ್ ಕುಮಾರ್ ಅವರಿಗೆ ಚುನಾವಣೆಗೂ ಮುನ್ನವೆ ಸಂಕಷ್ಟ ತಂದಿದೆ.
ಚುನಾವಣೆಯಲ್ಲಿ ಈ ಬಾರಿ ಗೀತಾ ಗೆಲ್ಲಬೇಕು ಅವರನ್ನು ಎಂಪಿ ಆಗಿ ನೋಡುವ ಆಸೆಯಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. ತಮ್ಮ ಹೆಂಡತಿ ಪರವಾಗಿ ಪ್ರಚಾರ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ, ಜನ ಯಾವಗಲೂ ಒಮ್ಮೆ ಚುನಾವಣಾ ಸಮಯದಲ್ಲಿ ಬಂದು ಹೋಗುವ ಅಭ್ಯರ್ಥಿಗೆ ಮತ ನೀಡುವುದಿಲ್ಲ ಎಂಬುದು ಅವರ ಈ ಪ್ರಶ್ನೆಗಳಿಂದ ತಿಳಿಯುತ್ತಿದೆ.












Click it and Unblock the Notifications