Lakshmi Hebbalkar- ತುಂಬಿದ ಭದ್ರೆಯ ಮಡಿಲಿಗೆ ಬಾಗಿನ ಅರ್ಪಣೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ
ಶಿವಮೊಗ್ಗ ಆಗಸ್ಟ್ 11: ಭದ್ರೆಗೆ ಬಾಗಿನ ಅರ್ಪಿಸಿದ್ದೇವೆ. ತುಂಬಾ ಸಂತೋಷವಾಯ್ತು ಎಂದು ಶಿವಮೊಗ್ಗದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಮಳೆ ಜಾಸ್ತಿಯಾಗಿದೆ. ಬಹಳಷ್ಟು ಮಳೆಯಾಗಿ ಹಳ್ಳ ಕೊಳ್ಳ ಜಲಾಶಯ ತುಂಬಿ ಹರಿಯುತ್ತಿವೆ. ರಾಜ್ಯ ಸಮೃದ್ದಿಯಾಗಿದೆ. ಮಲೆನಾಡು ನೋಡಿ ತುಂಬಾ ಸಂತೋಷವಾಯ್ತು ಎಂದು ಭದ್ರೆಗೆ ಬಾಗಿನ ಅರ್ಪಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ತುಂಗಾಭದ್ರಾ ಗೇಟ್ ಓಪನ್ ವಿಚಾರವಾಗಿ ಮಾತನಾಡಿದ ಅವರು, 'ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ನೀರಾವರಿ ಸಚಿವರು ಈಗಾಗಲೇ ಅಲ್ಲಿಗೆ ಹೋಗಿದ್ದಾರೆ. ಎಲ್ಲಾ ರೀತಿಯ ಪ್ರಯತ್ನ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ಮಾಡ್ತಾ ಇದ್ದಾರೆ. ಪ್ರತಿಯೊಂದಕ್ಕೂ ಕರ್ತವ್ಯ ಲೋಪ ಅಂತಾ ಹೇಳೊಕೆ ಆಗೋಲ್ಲ. ಚೆಕ್ ಮಾಡಬೇಕು, ಕಳೆದ ಬಾರಿ ಬರಗಾಲ ಆಗಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ. ಡ್ಯಾಂ ಭರ್ತಿಯಾಗಿವೆ ಎಂದರು.
ಕಾಂಗ್ರೆಸ್ ನವರು 50 ವರ್ಷದಲ್ಲಿ ಏನು ಮಾಡಿದ್ದಾರೆ. ಡ್ಯಾಂ ಕಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ, ಡ್ಯಾಂ ದುರಸ್ತಿ ಆಗಬೇಕಿದೆ. ಎಲ್ಲಾ ಡ್ಯಾಂ ನಲ್ಲೂ ಸಣ್ಣ ಪುಟ್ಟ ಲೋಪ ಇವೆ. ಮುಂಜಾಗ್ರತಾ ಕ್ರಮ ಏನ್ ಆಗಬೇಕು ಅದು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಭದ್ರಾವತಿ ತಾಲೂಕಿನ ಬಿಆರ್ ಪಿಯಲ್ಲಿರುವ ಭದ್ರೆಗೆ ಬಾಗಿನ ಅರ್ಪಣೆ ವೇಳೆ ಸಚಿವ ಮಧುಬಂಗಾರಪ್ಪ, ಭದ್ರಾವತಿ ಶಾಸಕ ಸಂಗಮೇಶ್ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕರು ಒಗ್ಗೂಡಿ ಭದ್ರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ತರೀಕೆರೆ, ಶಿವಮೊಗ್ಗ ಜಿಲ್ಲೆಯ ವಿವಿಧ ನಾಯಕರು ಭಾಗಿಯಾಗಿದ್ದರು. ಶಾಸಕ ಜಿ.ಹೆಚ್.ಶ್ರೀನಿವಾಸ್, ಸಂಗಮೇಶ್ ಸೇರಿದಂತೆ ವಿವಿಧ ನಾಯಕರು ಬಾಗಿನ ಅರ್ಪಣೆ ಭಾಗಿಯಾಗಿದ್ದರು.

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
ಒಳ ಹರಿವು : 6827 ಕ್ಯೂಸೆಕ್
ಹೊರ ಹರಿವು : 8841 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.4 ಅಡಿ
ಒಟ್ಟು : 71.5 TMC
ಇಂದು : 64.57 TMC
ತುಂಗಾ ಜಲಾಶಯ ಇಂದಿನ ನೀರಿನ ಮಟ್ಟ
ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಇದಾಗಿದೆ.
ಒಳ ಹರಿವು : 12502 ಕ್ಯೂಸೆಕ್
ಹೊರ ಹರಿವು : 12502 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
ಹಾಸನ ತಾಲ್ಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯ ನೀಡಿನ ಮಟ್ಟ
ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ - 37.103 ಟಿಎಂಸಿ
ಸದ್ಯ ಜಲಾಶಯದಲ್ಲಿರುವ ನೀರು - 36.475 ಟಿಎಂಸಿ
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ - 2922.00 ಅಡಿ
ಇಂದಿನ ನೀರಿನ ಮಟ್ಟ - 2921.35 ಅಡಿ
ಒಳಹರಿವು - 9247 ಕ್ಯೂಸೆಕ್
ಹೊರಹರಿವು - 16475 ಕ್ಯೂಸೆಕ್












Click it and Unblock the Notifications