• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೂದುಗುಂಬಳದಿಂದ ಆಗ್ರಾಪೇಟಾ; ತೀರ್ಥಹಳ್ಳಿ ರೈತರ ನಷ್ಟ ನೀಗಿದ ಹೊಸ ಐಡಿಯಾ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಮೇ 02: ಲಾಭದ ನಿರೀಕ್ಷೆಯೊಂದಿಗೆ ಬೆಳೆ ಬೆಳೆದು ಕಾಯುತ್ತಿದ್ದ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದಿತ್ತಿದೆ. ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗದೇ, ಕನಿಷ್ಠ ಪಕ್ಷ ಹಾಕಿದ ಬಂಡವಾಳವೂ ವಾಪಸ್ ಬರದಂತಾಗಿ ನಷ್ಟದ ಕೂಪಕ್ಕೆ ಬೀಳುವಂತಾಗಿದೆ.

   ಟೊಮೆಟೊ ಬೆಳೆಗಾರರಿಗೆ ಧೈರ್ಯ ತುಂಬಿದ ರೇಣುಕಾಚಾರ್ಯ | Renukacharya | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಶಿವಮೊಗ್ಗದ ತೀರ್ಥಹಳ್ಳಿಯಲ್ಲೂ ಲಾಭದ ನಿರೀಕ್ಷೆಯಲ್ಲಿ ಹಲವು ರೈತರು ಬೂದುಗುಂಬಳಕಾಯಿ ಬೆಳೆದಿದ್ದರು. ಲಾಕ್ ಡೌನ್ ನಿಂದಾಗಿ ಈ ಬೂದುಗುಂಬಳಕ್ಕೆ ಮಾರುಕಟ್ಟೆಯಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ನಷ್ಟವಾಯಿತು ಎಂದು ಕೈಬಿಟ್ಟಿದ್ದ ಈ ಸಮಯದಲ್ಲಿ ಅವರಿಗೆ ಲಾಭದ ದಾರಿಯೂ ಕಂಡಿದೆ. ಅದು ಏನು? ಇಲ್ಲಿದೆ ಈ ಕುರಿತ ವಿವರ...

   ಮನೆ ಬಾಗಿಲಿಗೆ ಮಾವಿನ ಹಣ್ಣು; ಸರ್ಕಾರದಿಂದ ಹೊಸ ಸೇವೆ

    ಬೇರೆ ರಾಜ್ಯಗಳಿಗೆ ರಫ್ತಾಗುತ್ತಿದ್ದ ಬೂದುಗುಂಬಳ

   ಬೇರೆ ರಾಜ್ಯಗಳಿಗೆ ರಫ್ತಾಗುತ್ತಿದ್ದ ಬೂದುಗುಂಬಳ

   ಮಹಾರಾಷ್ಟ್ರ, ಗೋವಾ, ಪುಣೆಯಂತಹ ನಗರ ಪ್ರದೇಶಗಳಲ್ಲಿ ಬೂದುಗುಂಬಳಕ್ಕೆ ಭಾರೀ ಬೇಡಿಕೆ ಇದೆ. ಸಾಮಾನ್ಯವಾಗಿ ಇಲ್ಲಿಂದ ಬೂದುಗುಂಬಳ ಹೆಚ್ಚಾಗಿ ಆ ರಾಜ್ಯಗಳಿಗೆ ರವಾನೆಯಾಗುತ್ತಿದ್ದರಿಂದ ಹೆಚ್ಚಿನ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿ ತೀರ್ಥಹಳ್ಳಿಯಲ್ಲಿ ಅನೇಕ ರೈತರು ಬೂದುಗುಂಬಳ ಕಾಯಿಯನ್ನು ಬೆಳೆದಿದ್ದರು. ಆದರೆ ಅವರ ಲೆಕ್ಕಾಚಾರವೆಲ್ಲ ಈ ಬಾರಿ ತಲೆಕೆಳಗಾಗಿತ್ತು.

    ಲಾಕ್ ಡೌನ್ ತಂದ ಸಂಕಷ್ಟ

   ಲಾಕ್ ಡೌನ್ ತಂದ ಸಂಕಷ್ಟ

   ಆದರೆ ಈ ಕೊರೊನಾ ಮಹಾಮಾರಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಲಾಕ್‌ಡೌನ್‌ಗೆ ಸಿಲುಕಿ ಕುಂಬಳಕಾಯಿಗೆ ಮಾರುಕಟ್ಟೆ ಇಲ್ಲದಂತಾಯಿತು. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು. ಮುಂದೇನು ಎಂಬ ಯೋಚನೆಯೇ ರೈತರನ್ನು ಕಾಡುತ್ತಿತ್ತು. ಇದನ್ನರಿತು ಎಚ್ಚೆತ್ತ, ರೈತರ ಬಗ್ಗೆ ವಿಶೇಷ ಕಾಳಜಿಯುಳ್ಳ ತಹಶೀಲ್ದಾರ್ ಡಾ. ಶ್ರೀಪಾದ್ ಅವರು ಬೇರೆ ಸಾಧ್ಯತೆಗಳ ಕುರಿತು ಯೋಚಿಸಿದರು.

   "ನನಗೆ ಸಹಾಯ ಬೇಡ, ಈರುಳ್ಳಿ ಖರೀದಿಸಿ"; ವಿಡಿಯೋ ಮಾಡಿ ಮನವಿ ಮಾಡಿದ ಹಿರಿಯೂರು ರೈತ

    ಆಗ್ರಾಪೇಟಾ ತಯಾರಿಕೆಗೆ ಮುಂದಾದ ಕುಂಟವಳ್ಳಿ ವಿಶ್ವನಾಥ್

   ಆಗ್ರಾಪೇಟಾ ತಯಾರಿಕೆಗೆ ಮುಂದಾದ ಕುಂಟವಳ್ಳಿ ವಿಶ್ವನಾಥ್

   ಶ್ರೀಪಾದ್ ಅವರು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಲ್ಲಿ ವಿಷಯ ತಿಳಿಸಿ ಸಂಕಷ್ಟಕ್ಕೀಡಾದ ರೈತರ ಬಗ್ಗೆ ಚರ್ಚಿಸಿದ್ದಾರೆ. ತಕ್ಷಣ ಅವರಿಗೆ ನೆನಪಾಗಿದ್ದು ಮೇಳಿಗೆ ಸಮೀಪದ ಕುಂಟವಳ್ಳಿ ವಿಶ್ವನಾಥ್. ಆ ತಕ್ಷಣವೇ ‌ಅವರನ್ನು ಸಂಪರ್ಕಿಸಿದ್ದಾರೆ. ಈ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ರೈತರ ಈ ಸಂಕಷ್ಟ ತಿಳಿಯುತ್ತಿದ್ದಂತೆ ವಿಶ್ವನಾಥ್‌ ಅವರು ಸೌಟು ಬಾಣಲೆ ಹಿಡಿದು ಆಗ್ರಾ ಪೇಟಾ ತಯಾರಿಸಲು ಮುಂದಾಗಿದ್ದಾರೆ.

    ಬೂದುಗುಂಬಳ ಖರೀದಿಸಿ ಆಗ್ರಾಪೇಟಾ ತಯಾರಿಸಿದ ಉದ್ಯಮಿ

   ಬೂದುಗುಂಬಳ ಖರೀದಿಸಿ ಆಗ್ರಾಪೇಟಾ ತಯಾರಿಸಿದ ಉದ್ಯಮಿ

   ಆಗ್ರಾ ಪೇಟಾಕ್ಕೆ ರಾಜಸ್ಥಾನ, ಗುಜರಾತ್, ಗೋವಾ, ಮುಂಬೈ ಮತ್ತಿತರ ಕಡೆಗಳಲ್ಲಿ ವಿಶೇಷ ಬೇಡಿಕೆಯಿದೆ. ಇದನ್ನು ತಯಾರಿಸುವುದು ಕಷ್ಟಕರ ಕೆಲಸ. ವಿವಿಧ ಹಂತಗಳಲ್ಲಿ ಬೂದುಗುಂಬಳದಿಂದ ಆಗ್ರಾಪೇಟಾ ತಯಾರಿಸಬೇಕು. ಅದರಲ್ಲೀಗ ಉದ್ಯಮಿ ವಿಶ್ವನಾಥ್‌ ಅವರು ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿಯೇ ರೈತರು ಬೆಳೆದ ಒಂದು ಟನ್ ಬೂದುಗುಂಬಳಕಾಯಿಯನ್ನು ಖರೀದಿಸಿ, ಆಗ್ರಾಪೇಟಾ ತಯಾರಿಸಿದ್ದಾರೆ. ಅದರ ಒಂದು ಸ್ಯಾಂಪಲ್ ಅನ್ನು ನಿನ್ನೆ ತಾಲೂಕು ಕಚೇರಿಯಲ್ಲಿ ಶಾಸಕರ ಸಮ್ಮುಖದಲ್ಲಿ ನೀಡಿದ್ದಾರೆ. ಬೂದುಗುಂಬಳದಲ್ಲಿ ರೈತರಿಗೆ ಆಗುತ್ತಿದ್ದ ನಷ್ಟವನ್ನು ಈ ರೀತಿ ತುಂಬಲ ಪ್ರಯತ್ನಿಸಿರುವುದು ಶ್ಲಾಘನೀಯ ಪ್ರಯತ್ನವೇ ಸರಿ.

   English summary
   Businessman Kuntavalli Vishwanath prepared special Agra Peta to help farmers who grown ash gourd and suffered loss due to lockdown in teerthahalli of shivamogga district,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X