ಭಾರತದ ತಂಟೆಗೆ ಯಾರಾದ್ರೂ ಬಂದ್ರೆ, ಭಾರತ ಸುಮ್ಮನಿರಲ್ಲ- ಈಶ್ವರಪ್ಪ
ಶಿವಮೊಗ್ಗ, ಜೂನ್ 17: ಭಾರತ ಯಾರ ತಂಟೆಗು ಹೋಗುವುದಿಲ್ಲ, ಆದರೆ, ಭಾರತದ ತಂಟೆಗೆ ಯಾರಾದರೂ ಬಂದರೆ, ಭಾರತ ಸುಮ್ಮನಿರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಅಟ್ಟಹಾಸ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಚೀನಾ ಕೊರೊನಾ ವೈರಸ್ ಸಮಸ್ಯೆಗಳನ್ನು ಮುಚ್ಚಿ ಹಾಕಲು, ಆ ಸುದ್ದಿಗಳನ್ನು ತಣ್ಣಗೆ ಮಾಡಲು ಈ ರೀತಿ ಮಾಡುತ್ತಿದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಈ ಬಗ್ಗೆ ಮಾತನಾಡಿದ್ದಾರೆ.
ಚೀನಾ ಗಡಿಯಲ್ಲಿ ಭಾರತ ಸುಸಜ್ಜಿತ ರಸ್ತೆ ನಿರ್ಮಿಸಿದ್ದರಿಂದ ಭಾರತ ಯುದ್ದಕ್ಕಾಗಿ ಈ ರಸ್ತೆ ನಿರ್ಮಿಸಿದೆ ಎಂದು ಚೀನಾ ಭಾವಿಸಿರಬಹುದು. ಚೀನಾ ವಸ್ತುಗಳನ್ನು ಭಾರತ ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಇನ್ನು ಮುಂದೆ ತನ್ನ ವಸ್ತುಗಳನ್ನು ಭಾರತೀಯರು ಬಳಕೆ ಮಾಡುವುದಿಲ್ಲ ಎಂದು ಚೀನಾ ಗಾಬರಿಗೆ ಬಿದ್ದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ತನ್ನ ತಂಟೆಗೆ ಬಂದರೆ, ಭಾರತ ಸುಮ್ಮನಿರುವುದಿಲ್ಲ ಎನ್ನುವ ವಿಷಯ ಈಗಾಗಲೇ ಪಾಕಿಸ್ತಾನ ಹಾಗೂ ಚೀನಾಗೆ ತಿಳಿದಿದೆ. ಒಂದು ವೇಳೆ ಚೀನಾ ಯುದ್ದಕ್ಕೆ ಬಂದರೆ, ಭಾರತ ಸರಿಯಾದ ಪಾಠ ಕಲಿಸಲಿದೆ ಎಂದಿದ್ದಾರೆ ಈಶ್ವರಪ್ಪ.
ಚೀನಾ ಈಗ ಒಂಟಿಯಾಗಿದೆ. ಆದರೆ, ಭಾರತದೊಂದಿಗೆ ವಿಶ್ವದ ಎಲ್ಲ ದೇಶಗಳು ಇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಭಾರತ ಸೈನಿಕರಿಗೆ ಸಂಪೂರ್ಣ ಅಧಿಕಾರ ನೀಡಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications