ಕೊರೊನಾ ಪರಿಹಾರಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಕೊಟ್ರು 4 ತಿಂಗಳ ವೇತನ
ಶಿವಮೊಗ್ಗ, ಮಾರ್ಚ್ 28: ಇಡೀ ವಿಶ್ವವೇ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದ್ದು, ಕೊರೊನಾ ಪರಿಹಾರ ನಿಧಿಗೆ ಮುಖ್ಯಮಂತ್ರಿಗಳು ನೆರವಾಗಲು ಮನವಿ ಮಾಡಿದ್ದಾರೆ.
ಜನ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ನೆರವು ನೀಡಲು ಮುಂದಾಗುತ್ತಿದ್ದು, ಇಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ ಕಾಂತೇಶ್ ತಮ್ಮ ನಾಲ್ಕು ತಿಂಗಳ ವೇತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಸಚಿವ ಕೆ.ಎಸ್ ಈಶ್ವರಪ್ಪನವರ ನಾಲ್ಕು ತಿಂಗಳ ವೇತನವನ್ನು ನೀಡಿದ್ದು, ಕೆ.ಇ ಕಾಂತೇಶ್ ಅವರ ನಾಲ್ಕು ತಿಂಗಳ ಜಿಲ್ಲಾ ಪಂಚಾಯತ್ ಸದಸ್ಯರ ವೇತನ- 20 ಸಾವಿರ ರೂಪಾಯಿಯ ಚೆಕ್ ಅನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಿದರು.












Click it and Unblock the Notifications