ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಗ ಜಲಪಾತದ ಬಂಡೆಗಳ ನಡುವೆ ಸಿಲುಕಿದ್ದ ಕೋತಿರಾಮನ ರಕ್ಷಣೆ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 28 : ಜೋಗ ಜಲಪಾತದಲ್ಲಿ ಇಳಿದು ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಕೋತಿರಾಮ ಅಲಿಯಾಸ್ ಜೋತಿರಾಜ್ ಬುಧವಾರ ಪತ್ತೆಯಾಗಿದ್ದಾರೆ.

ಬೆಂಗಳೂರಿನ ಯುವಕ ಜೋಗ ಜಲಪಾತದಲ್ಲಿ ಬಿದ್ಟು ಮೃತಪಟ್ಟಿರಬಹುದು ಎಂಬ ಶಂಕೆಯಲ್ಲಿ ಶೋಧಕ್ಕಿಳಿದಿದ್ದ ಕೋತಿರಾಮ ನಾಪತ್ತೆಯಾಗಿದ್ದರು. ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ 2.30 ರ ಹೊತ್ತಿಗೆ ಜಲಪಾತಕ್ಕೆ ಇಳಿದ ಚಿತ್ರದುರ್ಗದ ಜೋತಿರಾಜ್ ರಾತ್ರಿ 9 ಗಂಟೆಯಾದರೂ ವಾಪಾಸ್ ಬಂದಿರಲಿಲ್ಲ. ಸ್ಥಳದಲ್ಲಿ ಸಿದ್ದಾಪುರ ಮತ್ತು ಜೋಗ ಠಾಣೆ ಪೊಲೀಸರು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿದ್ದರು.

Jothiraj found in Jogfalls after a day

ಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆ

ರಾಜಾ ಫಾಲ್ಸ್ ಗೆ ಇಳಿದಿದ್ದ ಜೋತಿರಾಜ್ ಅಲ್ಲಿಯೇ ನಿತ್ರಾಣಗೊಂಡಿದ್ದಾರೆ. ಪೆಟ್ಟುಬಿದ್ದು ಜಲಪಾತದ ಬಂಡೆಗಳ ನಡುವೆ ಸಿಲುಕಿದ್ದ ಜೋತಿರಾಜ್ ಅವರನ್ನು ರಕ್ಷಿಸಲಾಗಿದೆ. ಡ್ರೋನ್ ಕ್ಯಾಮರಾ ಬಳಸಿ ಜೋತಿರಾಜ್ ನ್ನು ಪತ್ತೆ ಮಾಡಲಾಗಿದೆ. ಈಗ ಕಾರ್ಯಾಚರಣೆ ಪಡೆ ಅವರನ್ನು ಜಲಪಾತದ ಸ್ಥಳದಿಂದ ಮೇಲಕ್ಕೆ ಕರೆದುಕೊಂಡು ಬರುತ್ತಿದ್ದಾರೆ.

English summary
After mysterious one and half day mission in Jogfalls, Jotiraj found in unconscious status on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X