ಶಿವಮೊಗ್ಗ : ಶ್ರುತಿ ಮೋಟಾರ್ಸ್ ಮೇಲೆ ಐಟಿ ದಾಳಿ
ಶಿವಮೊಗ್ಗ, ಮಾರ್ಚ್ 28 : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಶಿವಮೊಗ್ಗದಲ್ಲಿಯೂ ಹಲವು ಕಡೆ ದಾಳಿ ನಡೆಸಿದ್ದಾರೆ. ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಕೆಲವು ಜೆಡಿಎಸ್ ನಾಯಕರ ಮನೆ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರುತಿ ಮೋಟಾರ್ಸ್ ಕಾರು ಶೋ ರೂಂ ಮೇಲೆ ದಾಳಿ ಮಾಡಲಾಗಿದೆ. ಇತರ ಎರಡು ವಾಣಿಜ್ಯ ಕಟ್ಟಡಗಳ ಮೇಲೆಯೂ ದಾಳಿಯನ್ನು ನಡೆಸಲಾಗಿದೆ.

ಆದಾಯ ತೆರಿಗೆ ದಾಳಿ ನಡೆದ ಬಳಿಕ ಶ್ರುತಿ ಮೋಟಾರ್ಸ್ ಶೋ ರೂಂ ಬಾಗಿಲು ಮುಚ್ಚಲಾಗಿದೆ. ಸರ್ವೀರ್ಸ್, ಸೇಲ್ಸ್‌ಗಳನ್ನು ಬಂದ್ ಮಾಡಲಾಗಿದೆ. ಶೃತಿ ಮೋಟಾರ್ಸ್ ಸಂಸ್ಥೆ ಡಿ.ಟಿ.ಪರಮೇಶ್ವರ್ ಎಂಬುವವರಿಗೆ ಸೇರಿದೆ.
ಗುರುವಾರ ಮಂಡ್ಯ, ಹಾಸನದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಶ್ರುತಿ ಮೋಟಾರ್ಸ್ ಮತ್ತು ಡಿ.ಟಿ.ಪೆಮೇಶ್ವರ್ ಅವರಿಗೆ ಸೇರಿದ ಮತ್ತೊಂದು ಕಾರು ಶೋ ರೂಂ ಮತ್ತು ಮನೆಯೊಂದರ ಮೇಲೆಯೂ ದಾಳಿ ನಡೆಸಲಾಗಿದೆ.
'ರಾಜ್ಯದಲ್ಲಿ ನಾಳೆ ಐಟಿ ದಾಳಿ ನಡೆಯಲಿದೆ. ಅಧಿಕಾರಿಗಳನ್ನು ವಿಮಾನ ನಿಲ್ದಾಣದಿಂದ ಪಿಕಪ್ ಮಾಡಲು ಕ್ಯಾಬ್ ವ್ಯವಸ್ಥೆಯೂ ಆಗಿದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಹೇಳಿದ್ದರು.
ಗುರುವಾರ ಐಟಿ ದಾಳಿ ನಡೆದಿದ್ದು ಇದು ಬಿಜೆಪಿ ಪ್ರೇರಿತ ದಾಳಿ ಎಂದು ಕಾಂಗ್ರೆಸ್-ಜೆಡಿಎಸ್ ಆರೋಪ ಮಾಡುತ್ತಿವೆ.












Click it and Unblock the Notifications