ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ವಿಮಾನ ನಿಲ್ದಾಣ ಸಮೀಪ ಅಪಾರ ಪ್ರಮಾಣದ ಸ್ಫೋಟಕ ಪತ್ತೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ,ಮಾರ್ಚ್ 9; ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಭಾರಿ ಪ್ರಮಾಣದ ಸ್ಪೋಟಕ ತುಂಬಿದ್ದ ಎರಡು ವಾಹನಗಳು ಪತ್ತೆಯಾಗಿವೆ. ಇವುಗಳಲ್ಲಿ 904 ಕೆ.ಜಿ. ಜಿಲೆಟಿನ್ ಕಡ್ಡಿ, 3,267 ಡಿಟೊನೇಟರ್‌ಗಳು ಸೇರಿದಂತೆ ಹಲವರು ವಸ್ತುಗಳು ಪತ್ತೆಯಾಗಿವೆ.

ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಎರಡು ವಾಹನದಲ್ಲಿ ಸ್ಪೋಟಕಗಳು ಪತ್ತೆಯಾಗಿದೆ. ಟಾಟಾ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಪಿಕ್ ಅಪ್ ವಾಹನದಲ್ಲಿ 3,267 ಎಲೆಕ್ಟ್ರಾನಿಕ್ ಡಿಟೊನೇಟರ್‌ಗಳು ಸೇರಿದಧಂತೆ ಇತರೆ ವಸ್ತುಗಳು ಪತ್ತೆಯಾಗಿವೆ.

ಬೆಳಗಾವಿ; ಅಪಾರ ಪ್ರಮಾಣದ ಸ್ಪೋಟಕ ವಶ, ಮೂವರ ಬಂಧನ ಬೆಳಗಾವಿ; ಅಪಾರ ಪ್ರಮಾಣದ ಸ್ಪೋಟಕ ವಶ, ಮೂವರ ಬಂಧನ

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಆತಂಕ ದೂರವಾಗಿದೆ.

ಹುಣಸೋಡು ಸ್ಪೋಟದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಹುಣಸೋಡು ಸ್ಪೋಟದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಜನವರಿ ತಿಂಗಳಿನಲ್ಲಿ ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿರುವ ಎಸ್. ಎಸ್. ಕ್ರಷರ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಸ್ಪೋಟಗೊಂಡಿತ್ತು. ಈ ಘಟನೆ ನಡೆದ ಬಳಿಕ ಅಕ್ರಮವಾಗಿ ಸ್ಪೋಟಕಗಳನ್ನು ಸಾಗಾಟ ಮಾಡುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಸ್ಪೋಟಕ ಇಲ್ಲಿ ಬಂದಿದ್ದು ಹೇಗೆ? ಯಾಕೆ?

ಸ್ಪೋಟಕ ಇಲ್ಲಿ ಬಂದಿದ್ದು ಹೇಗೆ? ಯಾಕೆ?

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಮಗಾರಿ ಸ್ಥಳದಲ್ಲೇ ಕ್ವಾರಿ ಒದಗಿಸಲಾಗಿದೆ. ಇಲ್ಲಿಯೇ ಬಂಡೆ ಸ್ಪೋಟಿಸಿ, ಕಾಮಗಾರಿಗೆ ಜೆಲ್ಲಿ ಬಳಕೆ ಮಾಡಬಹುದಾಗಿದೆ. ಇದಕ್ಕೆ ಸ್ಪೋಟಕೆ ಪೂರೈಕೆ ಮಾಡುವಂತೆ ಚಿಕ್ಕಬಳ್ಳಾಪುರದ ಸ್ಪೋಟಕ ಪೂರೈಕೆ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಂಡೆ ಸ್ಪೋಟಿಸಲು ಈ ಕಂಪನಿಯವರು ಸ್ಪೋಟಕಗಳನ್ನು ತಂದಿದ್ದರು.

ಸ್ಪೋಟಕ ಬಿಟ್ಟು ಹೋಗಿದ್ದು ಏಕೆ?

ಸ್ಪೋಟಕ ಬಿಟ್ಟು ಹೋಗಿದ್ದು ಏಕೆ?

ಹುಣಸೋಡು ಕ್ವಾರಿಯಲ್ಲಿ ಸ್ಪೋಟ ಪ್ರಕರಣದ ಬಳಿಕ ಸ್ಪೋಟಕ ಬಳಕೆಗೆ ಕಡಿವಾಣ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೋಟಕ ಪೂರೈಕೆ ಕಂಪನಿಯವರು ಸ್ಪೋಟಕ ಬಳಕೆ ಬಗ್ಗೆ ಜಿಲ್ಲಾಧಿಕಾರಿ ಅವರ ಅನುಮತಿ ಕೇಳಿದರು. ಮಂಗಳೂರಿನಲ್ಲಿರುವ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಷನ್‌ನಿಂದ ಅನುಮತಿ ಪಡೆಯುವಂತೆ ಡಿಸಿ ಸೂಚಿಸಿದ್ದರು. ಅನುಮತಿಗಾಗಿ ಕೇಳಿದಾಗ ಸ್ಪೋಟಕ ಪೂರೈಕೆ ಕಂಪನಿಯವರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇದೆ ಗೊಂದಲದಿಂದ ಸ್ಪೋಟಕವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಉಲ್ಲಂಘನೆ ಆದ ನಿಯಮವೇನು?

ಉಲ್ಲಂಘನೆ ಆದ ನಿಯಮವೇನು?

ಬೇಕಾಬಿಟ್ಟಿಯಂತೆ ಸ್ಪೋಟಕವನ್ನು ಸಾಗಣೆ ಮಾಡುವಂತಿಲ್ಲ. 150 ಕಿ. ಮೀ. ಮಾತ್ರ ಸ್ಪೋಟಕ ಸಾಗಣೆ ಮಾಡಬಹುದು. ಆದರೆ, ಸ್ಪೋಟಕ ಪೂರೈಕೆ ಕಂಪನಿಯು ಚಿಕ್ಕಬಳ್ಳಾಪುರದಿಂದ ಶಿವಮೊಗ್ಗದವರೆಗೆ ಸ್ಪೋಟಕ ಪೂರೈಕೆ ಮಾಡಿ ನಿಯಮನ್ನು ಉಲ್ಲಂಘಿಸಿತ್ತು. ಅಲ್ಲಿ ಸ್ಪೋಟಕ ಬಳಕೆಗೆ ಅವಕಾಶವಿಲ್ಲ ಎಂದು ಮಂಗಳೂರಿನ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಷನ್‌ನಿಂದ ತಿಳಿದು ಬಂದಿತ್ತು. ಹಾಗಾಗಿ ಸ್ಪೋಟಕ ಪೂರೈಕೆ ಕಂಪನಿಯವರು ಸ್ಪೋಟಕಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಸ್ಫೋಟಕ ತಂದ ಆತಂಕ

ಸ್ಫೋಟಕ ತಂದ ಆತಂಕ

ವಾಹನದಲ್ಲಿ ಸ್ಪೋಟಕ ಇರುವ ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ನಿಗದಿತ ದೂರಕ್ಕಿಂತಲೂ ಹೆಚ್ಚು ದೂರ ಸ್ಪೋಟಕ ಸಾಗಣೆ ಮತ್ತು ಆ ಬಳಿಕ ಸ್ಪೋಟಕವನ್ನು ಕೊಂಡೊಯ್ಯದೆ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಸಂಬಂಧ, ಚಿಕ್ಕಬಳ್ಳಾಪುರದ ಸ್ಪೋಟಕ ಪೂರೈಕೆ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

English summary
Illegal transport explosives found near Shivamogga airport. 36 box gelatin sticks and detonator found in the vehicle. Tunga nagar police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X