• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಸುತ್ತುವರೆದು ರೈತರು ಹೋರಾಡಿ; ಟಿಕಾಯತ್ ಕರೆ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಮಾರ್ಚ್ 21: "ನವದೆಹಲಿಯ ಮಾದರಿಯ ರೈತ ಹೋರಾಟ ಕರ್ನಾಟಕದಲ್ಲಿಯೂ ನಡೆಯಬೇಕು. ಬೆಂಗಳೂರನ್ನು ಸುತ್ತುವರೆದು ರೈತರು ಹೋರಾಟ ನಡೆಸಿ" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ಕರೆ ನೀಡಿದರು.

ದಕ್ಷಿಣ ಭಾರತದ ಮೊದಲ ಕಿಸಾನ್ ಮಹಾ ಪಂಚಾಯತ್ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಶನಿವಾರ ನಡೆಯಿತು. ಈ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕರ್ನಾಟಕದಲ್ಲಿಯೂ ಧ್ವನಿ ಮೊಳಗಿತು.

ಮಾ.22ಕ್ಕೆ ರೈತ ಸಂಯುಕ್ತ ಹೋರಾಟದಿಂದ ಬೃಹತ್ ವಿಧಾನಸೌಧ ಚಲೋ

ಮೊದಲ ಕಿಸಾನ್ ಮಹಾ ಪಂಚಾಯತ್‌ಗೆ ಭಾರತೀಯ ಕಿಸಾನ್ ಯೂನಿಯನ್ ನಾಯಕರು ಭತ್ತದ ಕಸೂತಿ ತೋರಣವನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು. ನೂರಾರು ರೈತರು ಸಮಾವೇಶಕ್ಕೆ ಸಾಕ್ಷಿಯಾದರು.

ವಾಣಿವಿಲಾಸ ಜಲಾಶಯದ ನೀರಿಗೆ ರೈತ ಸಂಘದ ನಡುವೆ ಜಿದ್ದಾಜಿದ್ದಿ!

ನವದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ಚಳವಳಿಯ ನೇತೃತ್ವ ವಹಿಸಿಕೊಂಡಿರುವ ರಾಕೇಶ್ ಟಿಕಾಯತ್, ಯುದ್ದವೀರ ಸಿಂಗ್ ಮತ್ತು ಡಾ. ದರ್ಶನ್ ಪಾಲ್ ಅವರು ಶಿವಮೊಗ್ಗದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್‌ನಲ್ಲಿ ಪಾಲ್ಗೊಂಡಿದ್ದರು.

ರೈತ ಚಳವಳಿಗಾಗಿ, ಕಾಳಜಿಯ ಮತ್ತು ಸೆಕ್ರೆಟೇರಿಯಲ್ ಜಾಬ್ ಮಾಡೋವ್ರೇ ಲೀಡರ್‌ಗಳಂತೆ!

ಬಡವರ ರೊಟ್ಟಿ ತಿಜೋರಿಗೆ

ಬಡವರ ರೊಟ್ಟಿ ತಿಜೋರಿಗೆ

ರಾಕೇಶ್ ಟಿಕಾಯತ್ ಮಾತನಾಡಿ, "ಬಡವರ ರೊಟ್ಟಿಯನ್ನು ತಿಜೋರಿಯಲ್ಲಿ ಲಾಕ್ ಮಾಡಿ ಇಡಲು ಬಂಡವಾಳಶಾಹಿಗಳು ಯೋಜಿಸುತ್ತಿದ್ದಾರೆ. ಅದಕ್ಕಾಗಿಯೇ ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ" ಎಂದು ದೂರಿದರು.

ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು

ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು

"ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಮಾದರಿಯಲ್ಲಿ ದೇಶಾದ್ಯಂತ ಹೋರಾಟ ಮಾಡಬೇಕು. ಕರ್ನಾಟಕದ ರೈತರು ಬೆಂಗಳೂರನ್ನು ದೆಹಲಿ ಮಾಡಿಕೊಳ್ಳಬೇಕು. ಬೆಂಗಳೂರಿನ ಗಡಿಯನ್ನು ಬಂದ್ ಮಾಡಿ ಹೋರಾಟ ಮಾಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಈ ಹೋರಾಟದಲ್ಲಿ ಯುವ ಸಮುದಾಯ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು" ಎಂದು ರಾಕೇಶ್ ಟಿಕಾಯತ್ ಮನವಿ ಮಾಡಿದರು.

ದಕ್ಷಿಣ ರೈತರು ಏನು ಮಾಡುತ್ತಿದ್ದಾರೆ?

ದಕ್ಷಿಣ ರೈತರು ಏನು ಮಾಡುತ್ತಿದ್ದಾರೆ?

ಡಾ. ದರ್ಶನ್ ಪಾಲ್ ಮಾತನಾಡಿ, "ಉತ್ತರ ಭಾರತದಲ್ಲಿ ಹೋರಾಟ ನಡೆಸುತ್ತಿರುವ ರೈತರು, ದಕ್ಷಿಣ ಭಾರತದ ರೈತರು ನಮ್ಮ ಬೆಂಬಲಕ್ಕಿದ್ದಾರೆಯೇ? ಎಂದು ಯೋಚಿಸುತ್ತಿದ್ದರು. ಮಹಾ ಪಂಚಾಯತ್ ಮೂಲಕ ನಿಮ್ಮ ಬೆಂಬಲವನ್ನು ಸೂಚಿಸಿದ್ದೀರಿ. ಸ್ವಾತಂತ್ರ್ಯ ನಂತರ ಇದು ರೈತರ ದೊಡ್ಡ ಚಳವಳಿಯಾಗಿದೆ. ದೆಹಲಿಯ ಹೋರಾಟದ ಕಿಚ್ಚು ದೇಶಾದ್ಯಂತ ವ್ಯಾಪಿಸಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದೆ ಇದ್ದರೆ ರೈತರ ಆಕ್ರೋಶದ ಜ್ವಾಲೆಯಲ್ಲಿ ಮೋದಿ ಸರ್ಕಾರ ಸುಟ್ಟು ಹೋಗಲಿದೆ" ಎಂದರು.

ವಿವಿಧ ಜಿಲ್ಲೆಯಿಂದ ರೈತರು

ವಿವಿಧ ಜಿಲ್ಲೆಯಿಂದ ರೈತರು

ಕರ್ನಾಟಕದ ಮೊದಲ ಕಿಸಾನ್ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಲು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ರೈತರು ಆಗಮಿಸಿದ್ದರು. ಬಂದಿದ್ದ ರೈತರಿಗೆ ಪ್ರತಿಯೊಬ್ಬರಿಗೂ ನೀರಿನ ಬಾಟಲಿಯ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ, ಹಣ್ಣು ಮತ್ತು ಮಂಡಕ್ಕಿ ಪೂರೈಸಲಾಯಿತು.

ಶೋಭಾ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಕೆ. ಟಿ. ಗಂಗಾಧರ್, ಹೆಚ್. ಆರ್. ಬಸವರಾಜಪ್ಪ, ಚುಕ್ಕಿ ನಂಜುಂಡಸ್ವಾಮಿ, ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಪ್ರಮುಖರು ಮಹಾ ಪಂಚಾಯತ್‌ನಲ್ಲಿ ಭಾಗವಹಿಸಿದ್ದರು.

English summary
Farmers in Karnataka should protests similar to Delhi and gherao Bengaluru called Bharatiya Kisan Union (BKU) leader Rakesh Tikait. He addressed farmer's kisan mahapanchayat in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X