ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು
ಶಿವಮೊಗ್ಗ, ಫೆಬ್ರವರಿ 28: ತಿರುಪತಿ ತಿಮ್ಮಪಪ್ನ ದರ್ಶನಕ್ಕೆಂದು ತೆರಳುವ ಭಕ್ತರಿಗೊಂದು ಸಹಿಸುದ್ದಿ ಇದೆ. ಶಿವಮೊಗ್ಗ-ತಿರುಪತಿ ಎಕ್ಸ್‌ಪ್ರೆಸ್ ರೈಲು ಸಂಚಾರ ಶೀಘ್ರ ಆರಂಭವಾಗಲಿದೆ.
ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ದಿಆರಂಭವಾದ ಬೆನ್ನಲ್ಲೇ ಶಿವಮೊಗ್ಗದಿಂದ ತಿರುಪತಿಗೆ ನೇರ ರೈಲು ಸಂಚಾರ ಆರಂಭವಾಗಲಿದೆ.
ಶಿವಮೊಗ್ಗ-ಬೀರೂರು-ಚಿಕ್ಕಜಾಜೂರು-ಚಿತ್ರದುರ್ಗ-ಗುಂತಕಲ್ ಮಾರ್ಗವಾಗಿ ತಿರುಪತಿಗೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿಗೆ ಇಲಾಖೆಯಿಂದ ಅನುಮೋದನೆ ದೊರೆತಿದೆ.

ಈ ರೈಲು ವಾರದಲ್ಲಿ ಎಷ್ಟು ದಿನ ಸಂಚರಿಸಲಿದೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಬೇಕಿದೆ. ಮಾರ್ಚ್ ಮೊದಲ ವಾರ ಅಥವಾ ಎರಡನೇ ವಾರದಿಂದ ರೈಲು ಸಂಚಾರ ಆರಂಭವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಎರಡೂ ಕಡೆಯಿಂದ ಸಂಚಾರ ಆರಂಭಿಸಬೇಕೆನ್ನುವ ಬೇಡಿಕೆ ಇದೆ ಅದು ಚರ್ಚೆಯ ಹಂತದಲ್ಲಿದೆ.












Click it and Unblock the Notifications