ಶಿವಮೊಗ್ಗ: ಹೊಟ್ಟೆ ಬಿರಿಯುವಷ್ಟು ತಿನ್ನಿ, ಇಷ್ಟ ಬಂದಷ್ಟು ಹಣ ಕೊಡಿ

ತೀರ್ಥಹಳ್ಳಿ, ಆಗಸ್ಟ್ 25: ಎಷ್ಟಾದರೂ ಊಟ ಮಾಡಿ ನಿಮ್ಮ ಬಳಿ ಇದ್ದಷ್ಟು ಹಣ ಪಾವತಿಸಿ!. ಅನ್ನದಾನದ ಜತೆಗೆ ಹೋಟೆಲ್ ಉದ್ಯಮ ನಡೆಸುವ ವಿಭಿನ್ನ ಕಲ್ಪನೆಯ ಶ್ರೀ ಅನ್ನಲಕ್ಷ್ಮಿ ಹೋಟೆಲ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ವರಮಹಾಲಕ್ಷ್ಮಿಯಂದು ಉದ್ಘಾಟನೆಗೊಂಡಿದೆ.

ವಿನೂತನ ಹೊಟೆಲ್ ಇದಾಗಿದ್ದು, ಈ ಹೋಟೆಲ್‌ನಲ್ಲಿ ನಿಮ್ಮ ಬಳಿ ಇದ್ದಷ್ಟು ಹಣ ಪಾವತಿಸಿ ಊಟ ಮಾಡಬಹುದಾಗಿದೆ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದಲ್ಲಿರುವ ಸಿರಿಬೈಲ್ ಕಾಂಪ್ಲೆಕ್ಸ್ ನಲ್ಲಿ ಈ ಹೋಟೆಲ್ ಆರಂಭವಾಗಿದೆ.

ಈ ಹೊಟೆಲ್‌ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಮಾತುಗಳು ಕೇಳಿಬಂದಿದ್ದು. ಕೆಲವು ಮೀಮ್‌ಗಳು ಸಹ ಹರಿದಾಡುತ್ತಿವೆ.

Eat how much you want, pay how much you want to pay

ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ತಿನಿಸು, ಚಾಟ್ಸ್, ಚೈನೀಸ್ ಫುಡ್ ಕೂಡ ಹೊಟೆಲ್‌ನಲ್ಲಿ ಲಭ್ಯವಿದೆ. ಪ್ರತಿ ನಿತ್ಯ 12:30ರಿಂದ 2:30ರವರೆಗೆ ಅನ್ನಲಕ್ಷ್ಮಿ ಹೋಟೆಲ್‌ನಲ್ಲಿ ಎಷ್ಟು ಊಟ ಬೇಕೋ ಅಷ್ಟು ಮಾಡಿ ಇಷ್ಟವಾದಷ್ಟು ಹಣ ಪಾವತಿಸಬಹುದು.

Eat how much you want, pay how much you want to pay

ಒನ್ ಇಂಡಿಯಾ ಜೊತೆ ಮಾತನಾಡಿದ ಹೋಟೆಲ್ ವ್ಯವಸ್ಥಾಪಕರು, ಸೇವಾ ಮನೋಭಾವನೆ ಜತೆಗೆ ಉದ್ಯಮ ನಡೆಸುವ ಗುರಿ ಹೊಂದಿರುವ ಕಾರಣ ಈ ವಿನೂತನ ಪ್ರಯತ್ನಕ್ಕಾಗಿ ಮುಂದಾಗಿದ್ದಾಗಿ ಹೇಳಿದರು. ಹಣ ಕಡಿಮೆ ಇರಲಿ ಅಥವಾ ಇಲ್ಲದಿರಲಿ ನಮ್ಮ ಹೊಟೆಲ್‌ನಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+