ಕಳ್ಳನಿಗೆ ಕೊರೊನಾ ವೈರಸ್ ಸೋಂಕು: ಶಿವಮೊಗ್ಗ ಪೊಲೀಸರಲ್ಲಿ ಆತಂಕ ಶುರು

ಶಿವಮೊಗ್ಗ, ಜುಲೈ 9: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದ ಪೊಲೀಸರಿಗೆ ಆತಂಕ ಶುರುವಾಗಿದೆ.

ಶಿಕಾರಿಪುರ ಪಟ್ಟಣ‌ ಪೊಲೀಸರು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಿ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆ ತಂದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕಳ್ಳನನ್ನು ಕೊರಾನಾ ವೈರಸ್ ತಪಾಸಣೆಗೆ ಒಳಪಡಿಸಿದ್ದರು. ಕೋವಿಡ್ ತಪಾಸಣೆ ಬಳಿಕ ಕಳ್ಳನಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಕಳ್ಳನನ್ನು ವಿಚಾರಣೆ ನಡೆಸಿದ್ದ 4 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪಿಎಸ್ಐ ಕೂಡಾ ತಾತ್ಕಾಲಿಕ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.

Coronavirus Infection For Thief: Anxiety In Shivamogga Police

ಶಿಕಾರಿಪುರ ಪಟ್ಟಣ ಠಾಣೆಯನ್ನು ಈಗಾಗಲೇ ‌ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ಕಳ್ಳನಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+