Shivamogga: ಅಕ್ಕಮಹಾದೇವಿಯ ಕಂಚಿನ ಪ್ರತಿಮೆ ಅನಾವರಣಗೊಳಿಸಲಿರುವ ಸಿಎಂ- 'ಕೈ' ಕಿಡಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ 65 ಅಡಿ ಎತ್ತರದ ಅಕ್ಕಮಹಾದೇವಿಯ ಕಂಚಿನ ಪ್ರತಿಮೆಯನ್ನು ಇಂದು ಉದ್ಘಾಟನೆ ಮಾಡಲಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ಇದರ ಬೆನ್ನಲ್ಲೆ ಪ್ರಬಲ ಪಕ್ಷಗಳು ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುವ ಹಾಗೂ ಉದ್ಘಾಟನೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ 65 ಅಡಿ ಎತ್ತರದ ಅಕ್ಕಮಹಾದೇವಿಯ ಕಂಚಿನ ಪ್ರತಿಮೆಯನ್ನು ಇಂದು ಉದ್ಘಾಟನೆ ಮಾಡಲಿದ್ದಾರೆ.

ಹನ್ನೆರಡನೇ ಶತಮಾನದ ವಚನ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಶರಣೆ ಅಕ್ಕಮಹಾದೇವಿಯ 51 ಅಡಿ ಎತ್ತರದ ಬೃಗತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದ್ದು ಇಂದು ಸಿಎಂ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.
ರಾಜ್ಯ ಸರ್ಕಾರ 69 ಕೋಟಿ ವೆಚ್ಚದಲ್ಲಿ ಉಡುತಡಿಯ ಪರಿಸರವನ್ನು ದೆಹಲಿಯ ಅಕ್ಷರ ಧಾಮದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅಕ್ಕಮಹಾದೇವಿಯ ಪ್ರತಿಮೆ ನಿರ್ಮಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶಿವಮೊಗ್ಗದ ಶಿಲ್ಪಿ ಶ್ರೀಧರಮೂತ್ಇ ಈ ಪ್ರತಿಮೆಯನ್ನು ಕಾಂಕ್ರೀಟ್‌ನಿಂದ ರೂಪಿಸಿದ್ದು, ಇಷ್ಟಲಿಂಗ ಹಿಡಿದು ಕುಳಿತಿರುವ ಭಂಗಿಯ ಅಕ್ಕಮಹಾದೇವಿಯ ಪ್ರತಿಮೆ ಕಂಚಿನ ಬಣ್ಣದಲ್ಲಿ ಒಡಮೂಡಿದೆ. ಪ್ರತಿಮೆಯನ್ನು 14 ಅಡಿಯ ಸ್ತಂಭದ ಮೇಲೆ ಪ್ರತಿಷ್ಠಾಪಿಸಲಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಚನಕಾರ್ತಿ ಅಕ್ಕಮಹಾದೇವಿಯ ದೊಡ್ಡ ಪ್ರಮಾಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಉಡುತಡಿಯ ಅಕ್ಕಮಹಾದೇವಿಯ ಸಮಿತಿಯ ಅಧ್ಯೆಕ್ಷೆ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ತಿಳಿಸಿದರು.
ಅಪೂರ್ಣ ಪುತ್ಥಳಿ ಅನಾವರಣಕ್ಕೆ ಸಿಎಂ ಆಗಮನ- 'ಕೈ'ಕಿಡಿ
ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಮಾಜಿ ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿ ನಾನಾ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿದ್ದು ಎಲ್ಲವೂ ಅರೆಬರೆ ಮುಗಿದಿವೆ. ಒಂದೂ ಪೂರ್ಣವಾಗಿಲ್ಲ. ಚುನಾವಣೆ ಘೋಷಣೆ ಮುನ್ನಾ ಫಲಕದಲ್ಲಿ ಹೆಸರು ಬರಬೇಕೆಂದು ಅಕ್ಕಮಹಾದೇವಿ ಪುತ್ಥಳಿ ಕೂಡ ಲೋಕಾರ್ಪಣೆ ಮಾಡುತ್ತಿದ್ದಾರೆ. ದುರಂತ ಎಂದರೆ ಸಿಮೆಂಟ್ ಕಾಂಕ್ರಿಟ್‌ಗಾಗಿ ಅಳವಡಿಸಿರುವ ರಾಡ್‌ಗಳನ್ನೂ ತೆಗೆದಿಲ್ಲ ಎಂದು ಕಾಂಗ್ರೆಸ್ ಮುಖಂಡ ದರ್ಶನ್ ಉಳ್ಳಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಬೆಳಗ್ಗೆ ಸಿಎಂ ಬೊಮ್ಮಾಯಿ ಶಿಕಾರಿಪುರಕ್ಕೆ ಆಗಮಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಜೊತೆಗೆ ಉದ್ಘಾಟನೆ ಮಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಇನ್ನೂ ಪೂರ್ಣಗೊಂಡಿರದ ಕಾಮಗಾರಿಗಳನ್ನ ಚುನಾವಣಾ ಹೊತ್ತಿನಲ್ಲಿ ಕೇವಲ ಹೆಸರಿಗೋಸ್ಕರ ಉದ್ಘಾಟನೆಗೆ ಬರ್ತಿದ್ದಾರೆ. ಶಿವಶರಣರ ನಾಡು ಶಿಕಾರಿಪುರ, ಇಲ್ಲಿನ ಉಡುತಡಿಯಲ್ಲಿ ದೆಹಲಿ ಅಕ್ಷರಧಾಮದ ಶೈಲಿಯಲ್ಲಿ ಸುಮಾರು 69 ಕೋಟಿ ವೆಚ್ಚದಲ್ಲಿ ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಯ ಪುತ್ತಳಿ ನಿರ್ಮಾಣವಾಗುತ್ತಿದೆ ಆದರೆ ಪೂರ್ಣವಾಗಿಲ್ಲ.
ಅಪೂರ್ಣ ಪುತ್ಥಳಿ ಅನಾವರಣ ಮಾಡಲು ಸಿಎಂ ಆಗಮಿಸುತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ಈತನಕ ಕಾಮಗಾರಿ ಪೂರ್ಣಗೊಂಡಿಲ್ಲ. ಇಂದಿಗೂ ಆ ಪ್ರತಿಮೆಗೆ ಹಾಕಿರುವ ಸರಳುಗಳನ್ನು ತೆಗೆದಿಲ್ಲ. ಸುಮಾರು ಒಂದುವರೆ ವರ್ಷ ಆಗುವಷ್ಟು ಕಾಮಗಾರಿ ಬಾಕಿ ಉಳಿದಿದೆ. ಉದ್ಯಾನವನವು ಕೂಡ ಸಿದ್ಧವಾಗಿಲ್ಲ. ಬಿಜೆಪಿ ನಾಯಕರು ಸೋಲಿನ ಭೀತಿಯಲ್ಲಿ ತರಾತುರಿಯಲ್ಲಿ ಈ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದರ್ಶನ್ ಉಳ್ಳಿ ಕಿಡಿಕಾರಿದ್ದಾರೆ.












Click it and Unblock the Notifications