BY Vijayendra Nomination: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್‌ ಕಾರು ಹತ್ತಿ ಹೊರಟ ಬಿಎಸ್ ಯಡಿಯೂರಪ್ಪ

ಶಿಕಾರಿಪುರ, ಏಪ್ರಿಲ್‌ 19: ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲಿರುವ ಅವರ ತಂದೆ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಬುಧವಾರ ತಮ್ಮ ಹಳೆಯ ಅಂಬಾಸಿಡಾರ್ ಕಾರು ಹತ್ತಿ ಹೊರಟರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಎಸ್‌ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಬುಧವಾರ ನಾಮಪತ್ರ ಸಲ್ಲಿಸಲಿರುವ ಅವರು ಬೆಳಗ್ಗೆ ತಮ್ಮ ತಂದೆಯ ಆಶೀರ್ವಾದ ಪಡೆದುಕೊಂಡರು. ಈ ವೇಳೆ ವಿಜಯೇಂದ್ರ ಅವರ ಪತ್ನಿ ಕೂಡ ಜೊತೆಗಿದ್ದರು.

BS Yediyurappa Rides in His Old Ambassador Car to Submit His Son Vijayendra’s Nomination

ಬಿಎಸ್‌ ಯಡಿಯೂರಪ್ಪ ಅವರು ಆಸ್ತಿಕರಾಗಿದ್ದು, ಪ್ರತಿ ಒಳ್ಳೆಯ ಕೆಲಸಗಳನ್ನು ಆರಂಭಿಸುವ ಮುನ್ನ ತಮ್ಮ ಇಷ್ಟ ದೇವರನ್ನು ನೆನೆಯುವುದು, ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಅವರ ಆದ್ಯತೆಯ ಕೆಲಸಗಳಾಗಿರುತ್ತದೆ. ಹೀಗಾಗಿ ಇಂದು ತಮ್ಮ ಪುತ್ರನ ನಾಮಪತ್ರ ಸಲ್ಲಿಕೆಗಾಗಿ ಶಿಕಾರಿಪುರಕ್ಕೆ ಬಂದಿದ್ದ ಅವರು ತಮ್ಮ ಹಳೆಯ ಅಂಬಾಸಿಡಾರ್‌ ಕಾರಿನಲ್ಲಿ ಹೊರಟಿದ್ದು ಎಲ್ಲರಲ್ಲು ಆಶ್ಚರ್ಯ ಮೂಡಿಸಿತು.

ತನಗೆ ಇಷ್ಟವಾದ ಲಕ್ಕಿ ಕಾರಿನಲ್ಲಿ ಅವರು ಹೊರಟಿದ್ದು, ಅವರಿಗೆ ಹೆಚ್ಚು ಇಷ್ಟವಾಯಿತು ಎಂದು ಅವರ ಮತ್ತೋರ್ವ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರು ಹೇಳಿದ್ದಾರೆ, ಬಿಎಸ್‌ ಯಡಿಯೂರಪ್ಪ ಅವರು ತಮ್ಮ ಇಂದು ಮನೆಯಿಂದ ತಮ್ಮ ನೆಚ್ಚಿನ ಅಂಬಾಸಿಡರ್ ಕಾರ್ ಸಿಕೆಆರ್ 45ರಲ್ಲಿ ಬಿಜೆಪಿ ಕಚೇರಿಗೆ ಪ್ರಯಾಣ ಬೆಳೆಸಿದರು ಎಂದು ಬಿವೈ ರಾಘವೇಂದ್ರ ಅವರು ಟ್ವೀಟ್‌ ಮಾಡಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ತಮ್ಮ ಇಷ್ಟ ವಸ್ತುಗಳನ್ನು ತಮಗೆ ಶ್ರೇಷ್ಟ ಎಂದು ಭಾವಿಸುತ್ತಾರೆ. ಅದನ್ನು ಅವರು ತಮ್ಮ ಲಕ್ಕಿ ಎಂದು ಕೂಡ ಭಾವಿಸಿ ಬಳಸುತ್ತಾರೆ. ಇಂದು ಪುತ್ರನ ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಹಳೆಯ ಕಾರು ಹತ್ತಿ ಮನೆಯಿಂದ ಹೊರಟ ಅವರು ಖುಷಿಯಿಂದ ಕಾರಿನಲ್ಲಿ ಕುಳಿತಿದ್ದರು, ಅವರು ಹಿಂಬದಿಯ ಸೀಟಿನಲ್ಲಿ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರು ಕುಳಿತಿದ್ದರು.

ದಾರಿಯುದ್ದಕ್ಕೂ ಅವರಿಗೆ ರಾಜ್ಯ ಭದ್ರತಾ ಪಡೆ ಹಿಂದೆ ಮುಂದೆ ಸಾಗುತ್ತಿದ್ದವು. ಯಡಿಯೂರಪ್ಪ ಅವರು ಮಧ್ಯೆ ತಮ್ಮ ಅಂಬಾಸಿಡಾರ್‌ ಕಾರಿನಲ್ಲಿ ಕುಳಿತು ಪ್ರಯಾಣಿಸಿದರು. ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿವೈ ವಿಜಯೇಂದ್ರ ಅವರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿ ಮಲ್ಲೇಶ್‌ ಅವರು ಕಣಕ್ಕೆ ಇಳಿಸಿದ್ದಾರೆ. ಇನ್ನು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಟರಾಜ್‌ ಗೌಡ ಅವರು ಟಿಕೆಟ್‌ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ನಟರಾಜ್‌ ಗೌಡ ಅವರು ಮಂಗಳವಾರ ನಾಮಪತ್ರ ಸಲ್ಲಿಸುವ ವೇಳೆ 2,000 ಅಧಿಕ ಮಂದಿ ಸೇರಿದ್ದರು. ಇಂದು ಬುಧವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆಗೆ ಹೋಗಿರುವ ಯಡಿಯೂರಪ್ಪ ಅವರ ಜೊತೆ ಸಾವಿರಾರು ಜನರು ಕೂಡ ಪಾಲ್ಗೊಂಡಿರುವುದು ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+