ಯಡಿಯೂರಪ್ಪ ಅವರು ಹೈಕಮಾಂಡ್ ಮಾತು ಕೇಳ್ತಿಲ್ಲ: ಈಶ್ವರಪ್ಪ
ಬಿಜೆಪಿ ಹೈಕಮಾಂಡ್ ನೀಡಿರುವ ಯಾವುದೇ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪಾಲಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರು ನೇರವಾಗಿ ಆರೋಪಿಸಿದ್ದಾರೆ.
ಶಿವಮೊಗ್ಗ/ಬೆಂಗಳೂರು, ಏಪ್ರಿಲ್ 29: ಬಿಜೆಪಿ ಹೈಕಮಾಂಡ್ ನೀಡಿರುವ ಯಾವುದೇ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪಾಲಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರು ನೇರವಾಗಿ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಶನಿವಾರ(ಏಪ್ರಿಲ್ 29) ದಂದು ಮಾತನಾಡಿದ ಈಶ್ವರಪ್ಪ ಅವರು, ಕರ್ನಾಟಕ ಬಿಜೆಪಿಯ ಬಿಕ್ಕಟ್ಟಿಗೆ ಯಡಿಯೂರಪ್ಪ ಅವರೇ ನೇರ ಕಾರಣ ಎಂದರು. ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಬಣ ಹಾಗೂ ಬಿಜೆಪಿ ಸಂಘಟನೆ ಬಣ ಎಂಬ ಪ್ರತ್ಯೇಕ ಬಣಗಳಾಗಿವೆ.

ಹೈಕಮಾಂಡ್ ನಾಯಕರ ಮಾತೇ ಕೇಳದ ಯಡಿಯೂರಪ್ಪ ಅವರು ಇನ್ನು ನಮ್ಮ ಮಾತು ಕೇಳುತ್ತಾರಾ? ಪಕ್ಷದ ಸಂಘಟನೆಯ ಹೆಸರಿನಲ್ಲಿ ಬ್ರಿಗೇಡ್ ಸಭೆ ನಡೆಸಿದರೆ ತಪ್ಪು ಎಂದರೆ ನಮಗೆ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿದರು.












Click it and Unblock the Notifications