• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ; ಶಾಸಕ ಅಶೋಕ್‌ ನಾಯ್ಕ್‌ಗೆ ಕೋವಿಡ್ ಸೋಂಕು

|

ಶಿವಮೊಗ್ಗ, ಅಕ್ಟೋಬರ್ 05: ಬಿಜೆಪಿ ಶಾಸಕ ಕೆ. ಬಿ. ಅಶೋಕ್ ನಾಯ್ಕ್‌ಗೆ ಕೋವಿಡ್ ಸೋಂಕು ತಗುಲಿದೆ. ವೈದ್ಯರ ಸಲಹೆಯಂತೆ ಶಾಸಕರು ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಕೆ. ಬಿ. ಅಶೋಕ್‌ ನಾಯ್ಕ್‌ಗೆ ಕೋವಿಡ್ ಸೋಂಕು ತಗುಲಿದೆ. ಸೋಮವಾರ ಶಾಸಕರು ಈ ಕುರಿತು ಫೇಸ್‌ ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ; 7 ದಿನದಲ್ಲಿ 65,185 ಹೊಸ ಕೋವಿಡ್ ಪ್ರಕರಣ ದಾಖಲು!

ಭಾನುವಾರ ಆರೋಗ್ಯದಲ್ಲಿ ಏರು ಪೇರಾದ ಹಿನ್ನಲೆಯಲ್ಲಿ ಶಾಸಕರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಮಾದರಿಗಳನ್ನು ನೀಡಿದ್ದರು. ವರದಿ ಸೋಮವಾರ ಬಂದಿದ್ದು, ಪಾಸಿಟಿವ್ ಎಂದು ಬಂದಿದೆ.

ಶಿವಮೊಗ್ಗ; ಬೈಪಾಸ್ ನಲ್ಲಿ ವಾಹನ ದಟ್ಟಣೆ ತಪ್ಪಿಸಲು ಮತ್ತೊಂದು ನೂತನ ಸೇತುವೆ ನಿರ್ಮಾಣ

"ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ 2ನೇ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ಕೊರೊನಾ ಪಾಸಿಟಿವ್ ಬಂದಿದೆ" ಎಂದು ಶಾಸಕರು ಫೇಸ್‌ ಬುಕ್ ಪೋಸ್ಟ್ ಹಾಕಿದ್ದಾರೆ.

ಮಾರಕವಾಗಬಹುದು ಕೋವಿಡ್ ಸ್ವ್ಯಾಬ್ ಟೆಸ್ಟ್: ಇರಲಿ ಈ ಎಚ್ಚರಿಕೆ

"ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ" ಎಂದು ಶಾಸಕರು ಮನವಿಯನ್ನು ಮಾಡಿದ್ದಾರೆ.

ಭಾನುವಾರದ ಮಾಹಿತಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ 279 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17,414ಕ್ಕೆ ಏರಿಕೆಯಾಗಿತ್ತು. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2758. ಜಿಲ್ಲೆಯಲ್ಲಿ ಇದುವರೆಗೂ 307 ಜನರು ಮೃತಪಟ್ಟಿದ್ದಾರೆ.

English summary
Shivamogga rural seat BJP MLA Ashok Naik tested positive for COVID 19. MLA in home quarantine as per doctor advice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X