• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಕೋವಿಡ್‌ಗೆ ಬಲಿ

|

ಶಿವಮೊಗ್ಗ, ಸೆಪ್ಟೆಂಬರ್ 03: ಕೋವಿಡ್ ಸೋಂಕು ತಗುಲಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ. ಜೆ. ಅಪ್ಪಾಜಿ ಗೌಡ ವಿಧಿವಶರಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ. ಕೆ. ಸಂಗಮೇಶ್ವರ ವಿರುದ್ಧ ಅವರು ಸೋಲು ಕಂಡಿದ್ದರು.

   MJ Appaji Gowda JDS ಶಕ್ತಿ ಭದ್ರಾವತಿ ಶಾಸಕ ಇನ್ನಿಲ್ಲ | Oneindia Kannada

   ಬುಧವಾರ ಸಂಜೆ ಎಂ. ಜೆ. ಅಪ್ಪಾಜಿ ಗೌಡ (69) ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

   ವಿಡಿಯೋ : ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಸಂದರ್ಶನ

   ಎರಡು ಬಾರಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿತ್ತು. ಮೂರು ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿತ್ತು.

   ಜೆಡಿಎಸ್ ನಾಯಕರಾಗಿದ್ದ ಎಂ. ಜೆ. ಅಪ್ಪಾಜಿ ಗೌಡ 2013ರ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಬಿ. ಕೆ. ಸಂಗಮೇಶ್ವರ ವಿರುದ್ಧ ಸೋಲು ಕಂಡಿದ್ದರು.

   ಕೊರೊನಾ ತಡೆಗೆ ಭದ್ರಾವತಿ ಭಾಗದ ಗ್ರಾಮಗಳು ತೆಗೆದುಕೊಂಡ ಕ್ರಮ

   ಭದ್ರಾವತಿ ಕ್ಷೇತ್ರದ ಚುನಾವಣೆ ಎಂದರೆ ಎಂ. ಜೆ. ಅಪ್ಪಾಜಿ ಗೌಡ ಮತ್ತು ಬಿ. ಕೆ. ಸಂಗಮೇಶ್ವರ ನಡುವಿನ ಹೋರಾಟ. ಒಮ್ಮೆ ಅಪ್ಪಾಜಿ ಗೌಡರು ಗೆದ್ದರೆ ಮತ್ತೊಂದು ಬಾರಿ ಬಿ. ಕೆ. ಸಂಗಮೇಶ್ವರ ಗೆಲವು ಸಾಧಿಸುತ್ತಿದ್ದರು. 2018ರ ಚುನಾವಣೆಯಲ್ಲಿ ಅಪ್ಪಾಜಿ ಗೌಡರು 64,155 ಮತಗಳನ್ನು ಪಡೆದು ಸೋಲು ಕಂಡಿದ್ದರು.

   2013ರ ಚುನಾವಣೆಯಲ್ಲಿ ಎಂ. ಜೆ. ಅಪ್ಪಾಜಿ ಗೌಡರು 78,370 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿ. ಕೆ. ಸಂಗಮೇಶ್ವರ ಅವರು 34,271 ಮತಗಳನ್ನು ಪಡೆದಿದ್ದರು.

   2008ರ ಚುನಾವಣೆಯಲ್ಲಿ ಬಿ. ಕೆ. ಸಂಗಮೇಶ್ವರ ಮತ್ತು ಎಂ. ಜೆ. ಅಪ್ಪಾಜಿ ಗೌಡ ನಡುವೆ ಭಾರಿ ಪೈಪೋಟಿ ನಡೆದಿತ್ತು. ಬಿ. ಕೆ. ಸಂಗಮೇಶ್ವರ 53,257 ಮತ ಪಡೆದು ಗೆದ್ದಿದ್ದರು. ಅಪ್ಪಾಜಿ ಗೌಡರು 52,770 ಮತ ಪಡೆದು ಸೋತಿದ್ದರು.

   English summary
   JD(S) leader and Bhadravati assembly seat former MLA M. J. Appaji Gowda (69) no more. He tested positive for Covid 19 on September 2, 2020. Appaji Gowda lost 2018 election against B.K.Sangameshwara.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X