Bhadra Dam Leakage: ಮಳೆಗಾಲದಲ್ಲೇ ಡ್ಯಾಂನ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥ, ಭಾರೀ ಆಕ್ರೋಶ

ಶಿವಮೊಗ್ಗ, ಜುಲೈ 05: ಕರ್ನಾಟಕದಲ್ಲಿ ಮಲೆನಾಡು ಇನ್ನಿತರ ಕಡೆ ಭಾರೀ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗುತ್ತವೆ. ಮುಂದಿನ ಬೇಸಿಗೆವರೆಗೂ ನೀರು ಬೇಕಿರುವ ಕಾರಣ ಮಳೆ ನೀರನ್ನು ಸಂಗ್ರಹಿಟ್ಟುಕೊಳ್ಳಲಾಗುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಈ ಭದ್ರಾ ಆಣೆಕಟ್ಟಿನ ನೀರು ಪೋಲಾಗುತ್ತಿದೆ.

ಹೌದು, ಸರ್ಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದಕ್ಕೆ ಜಿಲ್ಲೆಯ ರೈತರು, ಜಲಾಯನಯನ ಪ್ರದೇಶಗಳ ನಿವಾಸಿಗಳು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bhadra Dam Water Leakage from last one week farmer Sparks Outrage

ಭದ್ರಾ ಜಲಾಶಯದ ಸ್ಲೂಯಿಸ್ (ರಿವರ್) ಗೇಟ್ ನಿಂದ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿರುವ ಪೋಟೋ-ವಿಡಿಯೋಗಳು ಹರಿದಾಡುತ್ತಿವೆ. ಮಳೆಗಾಲದಲ್ಲೂ ಸಹ ಅನಗತ್ಯವಾಗಿ ನದಿಗೆ ಈ ಆಣೆಕಟ್ಟಿನ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಬೇಸಿಗೆಯಲ್ಲಿ ಪರದಾಡುವ ಸ್ಥಿತಿ?

ಇದು ಹೀಗೆ ಮುಂದುವರಿದರೆ, ಮಳೆ ಸರಿಯಾಗಿ ಭಾರದಿದ್ದ ಕೆಲವೇ ವಾರಗಳಲ್ಲಿ ಡ್ಯಾಂ ನೀರಿನ ಮಟ್ಟ ಇಳಿಕೆಯಾಗುತ್ತದೆ. ಮುಂದೆ ಬೇಸಿಗೆಯಲ್ಲಿ ಮಲೆನಾಡಿನ ಜನರು ಪರದಾಡಬೇಕಾಗುತ್ತದೆ. ಆದ್ದರಿಂದ ಸ್ಲೂಯಿಸ್ (ರಿವರ್) ಗೇಟ್ ಅನ್ನು ಸರಿಯಾಗಿ ದುರಸ್ತಿ ಮಾಡಬೇಕು. ಇದನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಕ್ಕೆ ಹೀಗೆ ನೀರು ಪೋಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಒಂದು ವಾರದಿಂದ ನೀರು ಪೋಲು: ರೈತರಲ್ಲಿ ಆತಂಕ

ಡ್ಯಾಂನ ಒಂದು ಗೇಟ್‌ನಿಂದ ಪೋಲಾಗುತ್ತಿರುವ ಭಾರಿ ಪ್ರಮಾಣದ ನೀರನ್ನು ಕಂಡು ರೈತರು ಆತಂಕಗೊಂಡಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹರಿದು ಹೋಗುತ್ತಿದೆ. ಸೂಕ್ತ ಗೇಟನ್ನು ಕೂರಿಸಲಾಗದೆ ಒದ್ದಾಡುತ್ತಿರುವ ಡ್ಯಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒದ್ದಾಡುತ್ತಿದ್ದಾರೆ. ಲಕ್ಷಾಂತರ ರೂ. ಗೇಟ್ ಅನ್ನು ದುರಸ್ತಿ ಮಾಡಲು ಮುಂದಾಗಿಲ್ಲ ಎಂಬ ದೂರು ಕೇಳಿ ಬಂದಿವೆ.

Bhadra Dam Water Leakage from last one week farmer Sparks Outrage

ತೀರ್ಥಹಳ್ಳಿ ಮೂಲದ ಜಿಪಿಎಸ್ ಕನ್ಸ್ಟ್ರಕ್ಷನ್ ಕಂಪನಿ ಡ್ಯಾಂನ ಗೇಟ್ ಅನ್ನು ಕೂರಿಸುವ ಕಾರ್ಯದ ಗುತ್ತಿಗೆ ಪಡೆದಿದೆ. ತಾಂತ್ರಿಕ ಅನುಭವ ಇಲ್ಲದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗೇಟ್ ಅನ್ನು ಕೂರಿಸಿರುವುದೇ ಇದಕ್ಕೆಲ್ಲ ಕಾರಣ ಎಂದು ತಿಳಿದು ಬಂದಿದೆ.

ಬೇಸಿಗೆಯಲ್ಲಿ ಡ್ಯಾಂ ಗೇಟ್ ದುರಸ್ತಿ ಮಾಡದೇ ನಿರ್ಲಕ್ಷ್ಯ

ಸಾಮಾನ್ಯವಾಗಿ ಜಲಾಶಯಗಳ ದುರಸ್ತಿ ಕೆಲಸವನ್ನು ಬೇಸಿಗೆ ಕಾಲದಲ್ಲಿ ನೀರಿಲ್ಲದ ಸಂದರ್ಭದಲ್ಲಿ ಮಾಡುತ್ತಾರೆ. ಆದರೆ ಈ ಅಧಿಕಾರಿಗಳು ಬೇಸಿಗೆ ವೇಳೆ ಸುಮ್ಮನಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈಗ ನೀರು ಪೋಲಾಗುವಾಗ ಅಧಿಕಾರಿಗಳು ಓಡಾಡುತ್ತಿದ್ದಾರೆ. ಇದು ಅಧಿಕಾರಿಗಳು ಆಡಳಿತ ವೈಫಲ್ಯ ಎಂದು ತಿಳಿದು ಬಂದಿದೆ.

ಈ ಭಾಗದಲ್ಲಿ ಭದ್ರಾ ಡ್ಯಾಂನಲ್ಲಿ ಸಂಗ್ರಹಿಸಿಟ್ಟ ನೀರಿಟ್ಟ ಬೇಸಿಗೆಯಲ್ಲಿ ಕುಡಿಯುವ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ನೀರು ಮಳೆಗಾದಲ್ಲೇ ಸ್ಲೋಯಿಸ್ ಗೇಟ್ ಮೂಲಕ ಹರಿದು ಹೋಗುತ್ತಿದೆ. ತುರ್ತು ಸಂದರ್ದಲ್ಲಿ ತೆರೆಯಬೇಕಾಗಿದ್ದ ಗೇಟ್ ಅನ್ನು ಈಗಲೇ ಅಧಿಕಾರಿಗಳು ತೆರೆದಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+