ಯಡಿಯೂರಪ್ಪ ಹಸಿರು ಶಾಲು ಹಾಕಲು ಬಿಡೋಲ್ಲ : ಬೇಳೂರು

ಶಿವಮೊಗ್ಗ, ಡಿಸೆಂಬರ್ 03 : 'ಬಿ.ಎಸ್ ಯಡಿಯೂರಪ್ಪ ಅವರು ರೈತರ ಪ್ರತೀಕವಾಗಿರುವ ಹಸಿರು ಶಾಲು ಹಾಕಲು ನಾವು ಬಿಡುವುದಿಲ್ಲ' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಯಡಿಯೂರಪ್ಪ ಅವರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವುದನ್ನು ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕ ಬೇಳೂರು ಗೋಪಾಲಕೃಷ್ಣ ಮುಂದುವರೆಸಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಅವರು, 'ರೈತನಾಯಕ ಎಂದು ಹೇಳುವ ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ' ಎಂದರು.

'ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹಾಕಿಕೊಳ್ಳಲು ಬಿಡಬಾರದು. ಸುಳ್ಳು ಹೇಳುವುದರಲ್ಲಿ ಅಪ್ಪ-ಮಕ್ಕಳು ಸದಾ ಮುಂದು. ತಾಕತ್ ಇದ್ದರೆ ನನ್ನ ಮುಂದೆ ಯಡಿಯೂರಪ್ಪ ಬರಲಿ, ಅವರ ಬಂಡವಾಳ ನನ್ನ ಬಳಿ ಇದೆ. ನನ್ನ ಮುಂದೆಯೇ ಐನೂರಕ್ಕೂ ಹೆಚ್ಚು ಜನರಿಗೆ ಎಂಎಲ್ಸಿ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

Belur Gopalakrishna attacks on Yeddyurappa on farmers issue

'ಯಡಿಯೂರಪ್ಪ ಪ್ರತಿ ಅಮಾವಾಸ್ಯೆಗೆ ಕೇರಳಕ್ಕೆ ಹೋಗುತ್ತಾರೆ. ಅವರು ಚಿಕಿತ್ಸೆಗಾಗಿ ಹೋಗುವುದಿಲ್ಲ. ಅವರು ಸರ್ಕಾರವನ್ನು ಬೀಳಿಸಲು ಮಾಟ ಮಂತ್ರ ಮಾಡಿಸಲು ಹೋಗುತ್ತಾರೆ. ಶೋಭಾ ಕರಂದ್ಲಾಜೆ ಜೊತೆಗೆ ಯಡಿಯೂರಪ್ಪ ಹಲವಾರು ಬಾರಿ ಕೇರಳಕ್ಕೆ ಹೋಗಿದ್ದಾರೆ' ಎಂದು ಆರೋಪಿಸಿದರು.

ಹುಚ್ಚು ಹಿಡಿದಿದೆ : 'ಹನುಮ ದೇವರು ದಲಿತ ಸಮುದಾಯಕ್ಕೆ ಸೇರಿದವರು' ಎಂಬ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೇಳೂರು ಗೋಪಾಲಕೃಷ್ಣ ಅವರು, 'ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯನಾಥ್‌ ಅವರಿಗೆ ಹುಚ್ಚು ಹಿಡಿದಿದೆ. ಆಂಜನೇಯ ದಲಿತರ ದೇವರು ಎಂದು ಹೇಳುತ್ತಾರೆ. ಅಧಿಕಾರದಲ್ಲಿ ಇದ್ದರೆ ಏನು ಬೇಕಾದರೂ ಹೇಳಿಕೆ ನೀಡಬಹುದಾ?' ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+