• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಕ್ರಶರ್ ಅವಘಡ; ಅಸ್ಸಾಂನ ಇಬ್ಬರು ಕಾರ್ಮಿಕರ ಸಾವು

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 02: ಶಿವಮೊಗ್ಗದ ಗೆಜ್ಜೇನಹಳ್ಳಿ ಕ್ರಶರ್ ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ಕೆಲಸಗಾರರು ಸಾವನ್ನಪ್ಪಿರುವ ಸಂಗತಿ ನಿನ್ನೆ ನಡೆದಿದೆ.

ಕ್ರಶರ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಹಾಗೂ ಕಲ್ಲುಗಳು ಇಬ್ಬರ ಮೇಲೆ ಬಿದ್ದು ದ್ವಿಖೊಲೊಂಗ್, ಫ್ಲೆಮಿಂಟೋನ್ ಎಂಬುವರು ಸಾವನ್ನಪ್ಪಿದ್ದಾರೆ. ಜೆಲ್ಲಿ ಕಲ್ಲುಗಳನ್ನು ತುಂಬಿಕೊಂಡ ಟ್ರ್ಯಾಕ್ಟರ್ ಅಲ್ಲಿ ಕಟ್ಟಲಾಗಿದ್ದ ಶೀಟ್ ಗೆ ತಾಗಿದ ಪರಿಣಾಮ ಶೀಟ್ ಮತ್ತು ಕಲ್ಲುಗಳು ಈ ಇಬ್ಬರ ಮೇಲೆ ಬಿದ್ದಿವೆ.

ಸ್ಟಾರ್ ನಟನ ಪೋಸ್ಟರ್ ಹಾಕಲು ಹೋಗಿ ಸಾವು ಕಂಡ 3 ಯುವಕರು

ದ್ವಿಖೊಲೊಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಫ್ಲೆಮಿಂಟೋನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಈ ಘಟನೆ ಲಕ್ಷ್ಮೀ ವೆಂಕಟೇಶ್ವರ ಕ್ರಶರ್ ನಲ್ಲಿ ನಡೆದಿದೆ. ಮಾಲೀಕ ಶಿವಕುಮಾರ್ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
Two Assam-based workers dies in Gejjenahalli Crusher at Shivamogga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X