ಚಿತ್ರಗಳು : ಕವಿಶೈಲಕ್ಕೆ ಅಮಿತ್ ಶಾ ಭೇಟಿ
ಶಿವಮೊಗ್ಗ, ಮಾರ್ಚ್ 26 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಕವಿ ಕುವೆಂಪು ಅವರ ನಿವಾಸ ಕವಿಶೈಲಕ್ಕೆ ಸೋಮವಾರ ಭೇಟಿ ನೀಡಿದರು.
ಸೋಮವಾರ ಮಧ್ಯಾಹ್ನ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಸಮೀಪದ ಗಡಿಕಲ್ಲು ಎಂಬಲ್ಲಿನ ಹೆಲಿಪ್ಯಾಡ್‌ಗೆ ಅಮಿತ್ ಶಾ ಆಗಮಿಸಿದರು. ಮೊದಲು ರಾಷ್ಟ್ರಕವಿ ಕುವೆಂಪು ಅವರ ಸಮಾಧಿಗೆ ನಮಿಸಿ ನಂತರ ಕುವೆಂಪು ಅವರ ಮನೆಗೆ ತೆರಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ, ಸಚಿವ ಅನಂತ ಕುಮಾರ್, ಆರಗ ಜ್ಞಾನೇಂದ್ರ, ಶಾಸಕ ಜೀವರಾಜ್, ಎಂಎಲ್‌ಸಿ ಕೋಟಾ ಶ್ರೀನಿವಾಸ್ ಪೂಜಾರಿ, ಕರ್ನಾಟಕ ಮುರಳೀಧರ ರಾವ್ ಮೊದಲಾದ ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಅಮಿತ್ ಶಾ, 'ಕುವೆಂಪು ಸ್ಮಾರಕಕ್ಕೆ ಭೇಟಿ ನೀಡಿ ಆನಂದವಾಗಿದೆ. ಕನ್ನಡ ಸಾಹಿತ್ಯಕ್ಕೆ ಕುವೆಂಪು ಕೊಟ್ಟ ಕೊಡಿಗೆ ಅಪಾರ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ಅವರ ದೇಶದ ಸಾಹಿತ್ಯಕ್ಕೂ ಅಮೂಲ್ಯ ವಾದ ಕೊಡುಗೆ ನೀಡಿದ್ದಾರೆ' ಎಂದು ಹೇಳಿದರು.
'ಕುವೆಂಪು ಅವರ ಸಾಹಿತ್ಯ ಕೃಷಿಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ನಾಡಗೀತೆಯಂತಹ ಕೊಡುಗೆಯನ್ನು ಯಾರು ಮರೆಯಲು ಸಾದ್ಯವಿಲ್ಲ' ಎಂದು ಅಮಿತ್ ಶಾ ಬಣ್ಣಿಸಿದರು.
'ವಿವೇಕಾನಂದರ ಪ್ರೇರಣೆಯಂತೆ ಏಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದದು. ಕರ್ನಾಟಕದ ಇಂದಿನ ಸ್ಥಿತಿಗತಿಗೆ ಕುವೆಂಪು ಅವರ ಸಂದೇಶ ಹೆಚ್ಚು ಪ್ರಸ್ತುತವಾಗಿದೆ' ಎಂದರು.

ಕವಿಶೈಲಕ್ಕೆ ಭೇಟಿ ನೀಡಿದ ಬಳಿಕ ಅಮಿತ್ ಶಾ ತೀರ್ಥಹಳ್ಳಿಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದರು.












Click it and Unblock the Notifications