ಭದ್ರಾವತಿಯಲ್ಲಿ ಶಿಕ್ಷಕ ಅನುಮಾನಾಸ್ಪದ ಸಾವು: ಕೊಲೆ ಶಂಕೆ!
ಶಿವಮೊಗ್ಗ, ಜುಲೈ.06 : ಜಿಲ್ಲೆಯ ಭದ್ರಾವತಿ ನಗರದ ಹೊಸಮನೆ ಬಡಾವಣೆಯಲ್ಲಿ ಶಿಕ್ಷಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪಿದ್ದು , ಕೊಲೆ ಶಂಕೆ ಮೂಡಿದೆ.
ಭದ್ರಾವತಿಯ ಭದ್ರಾ ಕಾಲೋನಿಯ ಭದ್ರಾ ಫ್ರೌಢ ಶಾಲೆ ಶಿಕ್ಷಕರಾಗಿದ್ದ ಶಿವಕುಮಾರ್ (42) ತಮ್ಮ ಮನೆಯ ಹಿಂಬಂದಿಯ ಆವರಣದಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದು, ಶಿವಕುಮಾರ್ ಕುತ್ತಿಗೆ ಹಾಗೂ ಮೈಮೇಲೆ ಗಾಯದ ಗುರುತುಗಳಿವೆ .
ಶಿವಕುಮಾರ್ ಕುಟುಂಬದವರು ಕೆಲ ದಿನದ ಹಿಂದೆ ಸಂಬಂಧಿಕರ ಮನೆಗೆ ಹೋಗಿದ್ದರು. ನಿನ್ನೆಯಿಂದ ಶಿವಕುಮಾರ್ ಮೊಬೈಲ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರು ನಿನ್ನೆ ಮನೆಗೆ ಮರಳಿದಾಗ ಮನೆಯ ಹಿಂಭಾಗ ಶಿವಕುಮಾರ್ ಶವ ಪತ್ತೆಯಾಗಿದೆ.

ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಮನೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ
ಕಲಬುರಗಿಯಲ್ಲಿ ಮೊನ್ನೆ ನಗರದ ಎಂಎಸ್‌ಕೆ ಮಿಲ್‌ನ ಹುಸೇನಿ ಗಾರ್ಡನ್ ಕಾಲೋನಿಯ ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಅಕ್ಬರ್ (37), ಶನ್ನು (35) ಮಕ್ಕಳಾದ ಮಹ್ಮದ್ ಯಾಸಿನ್ (13) ಹಾಗೂ ಸಾನಿಯಾ (10) ಗಂಭೀರವಾಗಿ ಗಾಯಗೊಂಡವರು. ನಾಲ್ವರಿಗೂ ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿದ್ದು, ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಸಿಲಿಂಡರ್ ಸ್ಫೋಟದಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.












Click it and Unblock the Notifications