ವಿವಾದಾತ್ಮಕ ಹೇಳಿಕೆ, ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು
ಶಿವಮೊಗ್ಗ, ಡಿಸೆಂಬರ್ 27: ವಿವಾದಾತ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಕುಗ್ವೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಶಿವಾನಂದ್ ಕುಗ್ವೆ ಎನ್ನುವರು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಾತ್ಯಾತೀತರಂತೆ ಕರೆದುಕೊಳ್ಳುವವರು ಅಪ್ಪ- ಅಮ್ಮನ ರಕ್ತದ ಗುರುತು ಇಲ್ಲದವರು. ಜಾತ್ಯಾತೀತರು ಇತಿಹಾಸ ಗೊತ್ತಿಲ್ಲದ ಮೂರ್ಖರು," ಅಂತ ಇತ್ತೀಚೆಗೆ ಕೊಪ್ಪಳದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಜಾತ್ಯಾತೀತರಂತೆ ಕರೆದುಕೊಳ್ಳುವವರು ಅಪ್ಪ- ಅಮ್ಮನ ರಕ್ತದ ಗುರುತು ಇಲ್ಲದವರು ಎಂದು ನಿಂದನೆ ಮಾಡಿದ್ದಾರೆ. ಸಂವಿಧಾನದಲ್ಲಿರುವ ಜಾತ್ಯಾತೀತತೆ ಎನ್ನುವ ಪದವನ್ನು ನಿಂದನೆ ಮಾಡಿರುವುದು ದೇಶದ್ರೋಹಿ ಚಟುವಟಿಕೆಯಾಗಿರುತ್ತದೆ.
ಆದ್ದರಿಂದ ಆರೋಪಿ ವಿರುದ್ಧ ಅಪರಾಧಿಕ ಒಳಸಂಚು ಹಾಗೂ ದೇಶದ್ರೋಹಿ ಕೃತ್ಯ ಪ್ರಕರಣ ದಾಖಲಿಸಿ, ಆತನನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಶಿವಾನಂದ್ ಕುಗ್ವೆ ಅವರು ತಮ್ಮ ದೂರಿನಲ್ಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications