Shantinagara Elections : ಶಾಂತಿನಗರದ ಜನರಿಗೆ ಶಾಂತಿ ನೀಡದ ನೂರಾರು ಸಮಸ್ಯೆಗಳಿಗೆ ಸಿಗುತ್ತಾ ಮುಕ್ತಿ?

ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಶಾಂತಿನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್ ಎ ಹ್ಯಾರಿಸ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ವಸುದೇವ ಮೂರ್ತಿ 18205 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಶಾಂತಿನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಾಂತಿನಗರ ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಚುರುಕಾದ ವ್ಯಾಪಾರಕ್ಕೆ ಕೊಡುಗೆ ನೀಡುವ ಹಲವಾರು ಮಾಲ್‌ಗಳು ಮತ್ತು ವ್ಯಾಪಾರಿಗಳು ಇಲ್ಲಿದ್ದಾರೆ. ಈವರೆಗೆ ಶಾಂತಿನಗರದಲ್ಲಿ ಘಟಾನುಘಟಿಗಳು ಸ್ಪರ್ಧಿಸಿ, ಗೆಲುವು ಕಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಜೆಎನ್‌ಪಿ ಸೇರಿದಂತೆ ಹಲವು ಪಕ್ಷಗಳಿಗೆ ಈ ಕ್ಷೇತ್ರ ಗೆಲುವು ಮತ್ತು ಸೋಲಿನ ರುಚಿ ಉಣ್ಣಿಸಿದೆ. ಕೆಲವು ಅಭಿವೃದ್ಧಿಗಳು, ಹಲವು ಸಮಸ್ಯೆಗಳ ಬಗ್ಗೆ ತಿಳಿಯೋಣ.

shanthinagar map

ರಾಜ್ಯ ಕಂಡ ಹಿರಿಯ ರಾಜಕಾರಣಿಗಳಾದ ಆರಗ ಜ್ಞಾನೇಂದ್ರ, ಕೋಣಂದೂರು ಲಿಂಗಪ್ಪ, ಡಿಬಿ ಚಂದ್ರೇಗೌಡ, ಕಿಮ್ಮನೆ ರತ್ನಾಕರ್ ಮುಂತಾದವರು ಇಲ್ಲಿಂದ ಹಿಂದೆ ಸ್ಪರ್ಧಿಸಿದ್ದರು. ಶಾಂತಿನಗರದಲ್ಲಿ ಹಲವು ಧರ್ಮದ ಜನ, ಹಲವು ಭಾಚೆಯ ಜನರಿದ್ದಾರೆ. ವಣ್ಣಾರ್ ಪೇಟೆ, ಔಗುಪಾಳ್ಯ, ಶಾಂತಲಾ ನಗರ, ನೀಲಸಂದ್ರ, ದೊಮ್ಮಲೂರು,ಶಾಂತಿನಗರ ಮತ್ತು ಅಗರ ಎಂಬ ಏಳು ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿದೆ.

ಈ ಬಾರಿ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಮೊನ್ನೆಯಷ್ಟೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಎನ್.ಎ. ಹ್ಯಾರಿಸ್‌ಗೆ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಆರವತ್ತು ಸಾವಿರ ಮತಗಳನ್ನು ಪಡೆದು ಗೆದ್ದ ಶಾಸಕ ಎನ್‌ಎ ಹ್ಯಾರಿಸ್‌ಗೇ ಈ ಬಾರಿ ಕಾಂಗ್ರೆಸ್ ಮಣೆ ಹಾಕಿದೆ. ಶಾಂತಿನಗರದ ಶಾಸಕ ನಲಪಾಡ್ ಅಹಮದ್ ಹ್ಯಾರಿಸ್ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಜೊತೆಗೆ ಪಕ್ಷದ ಶ್ರೀಮಂತ ನಾಯಕರಲ್ಲಿ ಒಬ್ಬರು. ಭಾರತದ ಜಪ್ರಿಯ ಉದ್ಯಮಿಯಾಗಿರುವ ಇವರು ಬರೀ ರಾಜಕಾರಣಿಯಲ್ಲ. ಉದ್ಯಮ, ಕ್ರೀಡಾ ಕ್ಷೇತ್ರಗಳಲ್ಲಿಯೂ ತಮ್ಮ ಹೆಸರು ದಾಖಲಿಸಿದ್ದಾರೆ. 2008 ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಶಾಂತಿ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

n h haris

ಈ ಬಾರಿ ಗೆಲುವು ಯಾರಿಗೆ ಎಂಬ ಪ್ರಶ್ನೆಗೆ ಶಾಂತಿನಗರದ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯವಾಗಿ ಹ್ಯಾರಿಸ್ ವ್ಯಾಯಾಮ ಶಾಲೆ, ಕಟ್ಟಡ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಪುತ್ರ ಮೊಹಮ್ಮದ್ ನಳಪಾಡ್ ಗಲಾಟೆ ಹ್ಯಾರಿಸ್ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಂತಾಗಿದ್ದು ಸುಳ್ಳಲ್ಲ.

ಈ ಬಾರಿ ಬಿಜೆಪಿ ಟಿಕೆಟ್ ಯಾರಿಗೆ?

ಇನ್ನೂ ಬಿಜೆಪಿ ಈವರೆಗೂ ಯಾವುದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೇ ಹೋದರು ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ವಾಸುದೇವ ಮೂರ್ತಿ ಈ ಬಾರಿಯೂ ಟಿಕೆಟ್ ಬಯಸಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಮಂಜುನಾಥ್ , ಎಸ್‌ಆರ್‌ ಶ್ರೀಧರ್ ರೆಡ್ಡಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಕೆ ಮಥಾಯ್ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಾತ್ರಿಯಾಗಿದೆ.

bjp jds congress

ಕ್ಷೇತ್ರದಲ್ಲಿ ಒಟ್ಟು ಮತದಾರರು 2,25,000ರಷ್ಟಿದ್ದು, ಮುಸ್ಲಿಂ ಹಾಗೂ ಇತರೇ ಭಾಷಿಕರ ವೋಟ್‌ಗಳೇ ನಿರ್ಣಾಯಕವಾಗಿದೆ. ಇಲ್ಲಿ ಮುಸ್ಲಿಂ - 45,000 ವೋಟ್‌ಗಳಿದ್ದರೆ, ತಮಿಳು 35,000 ವೋಟ್‌ಗಳಿವೆ. ಇನ್ನು ಕುರುಬ 25,000, ಎಸ್‌ಸಿ-ಎಸ್‌ಟಿ 20,000, ತೆಲುಗು ಭಾಷಿಕರು 20000, ಮಲಯಾಳಿ ಭಾಷಿಕರು 15000 ಇದ್ದಾರೆ. ಇನ್ನು ಬ್ರಾಹ್ಮಣ 15,000, ಲಿಂಗಾಯತ 8,000, ದೇವಾಂಗ 4000 ಹಾಗೂ ಒಕ್ಕಲಿಗರು - 3,000ದಷ್ಟಿದ್ದಾರೆ.

Shanti Nagara Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎನ್ ಎ ಹ್ಯಾರಿಸ್(ಕಾಂಗ್ರೆಸ್) 60,009 ವಸುದೇವ ಮೂರ್ತಿ(ಬಿಜೆಪಿ) 41,804
2013 ಎನ್ ಎ ಹ್ಯಾರಿಸ್(ಕಾಂಗ್ರೆಸ್) 54,342 ವಸುದೇವ ಮೂರ್ತಿ(ಬಿಜೆಪಿ) 34,137
2008 ಎನ್ ಎ ಹ್ಯಾರಿಸ್(ಕಾಂಗ್ರೆಸ್) 42,423 ಡಿ.ಯು. ಮಲ್ಲಿಕಾರ್ಜುನ(ಬಿಜೆಪಿ) 28,626

ಮತದಾರರ ಸಂಖ್ಯೆ:

ಒಟ್ಟು ಮತದಾರರು 2,25,000

ಮುಸ್ಲಿಂ-45,000

ತಮಿಳು ಭಾಷಿಕರು-35,000

ಕುರುಬ-25,000

ಎಸ್‌ಸಿ-ಎಸ್‌ಟಿ 20,000

ತೆಲುಗು ಭಾಷಿಕರು-20,000

ಮಲಯಾಳಿ ಭಾಷಿಕರು-15,000

ಬ್ರಾಹ್ಮಣ-15,000

ಲಿಂಗಾಯತ-8,000

ಇತರೇ-8,000

ಶಾಂತಿನಗರದ ಜನರಿಗೆ ಶಾಂತಿ ನೀಡದ ನೂರಾರು ಸಮಸ್ಯೆಗಳು

ಹೆಸರಿಗೆ ಮಾತ್ರ ಇದು ಶಾಂತಿನಗರ. ಆದರೆ ಸ್ಥಳೀಯರಿಗೆ ಮಾತ್ರ ಇಲ್ಲಿನ ನೂರಾರು ಸಮಸ್ಯೆಗಳಿಂದಾಗಿ ಶಾಂತಿಯೇ ಇಲ್ಲ. ಬಡವರು ವಾಸಿಸುವ ಪ್ರದೇಶಗಳನ್ನು ಸ್ಥಳೀಯ ಶಾಸಕರು ನಿರ್ಲಕ್ಷ್ಯಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ನೈರ್ಮಲ್ಯ ಕೊರತೆಯ ಸಮಸ್ಯೆ ಹೆಚ್ಚಾಗಿದೆ. ಸರಿಯಾದ ತ್ಯಾಜ್ಯ ವಿಲೇವಾರಿ ಕೊರತೆ, ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ಡಂಪ್ ಯಾರ್ಡ್‌ಗಳು ಮತ್ತು ದೋಷಪೂರಿತ ಚರಂಡಿಗಳಾಗಿ ಪರಿಗಣಿಸುವುದು. ಈ ಕ್ಷೇತ್ರವು ಬೆಂಗಳೂರಿನ ಮೊದಲ ಕಸದ ತೊಟ್ಟಿ ಪ್ರಯೋಗವನ್ನು ಜಾರಿಗೆ ತಂದಿದ್ದು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+