ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯಗೆ ಸೇರಿದ 100 ಕೋಟಿ ಮೌಲ್ಯ ಷೇರುಗಳು ಸರ್ಕಾರದ ವಶಕ್ಕೆ

By Mahesh
|
Google Oneindia Kannada News

ಬೆಂಗಳೂರು, ಸೆ. 18: ಸಾವಿರಾರು ಕೋಟಿ ಸಾಲ ಮಾಡಿಕೊಂಡು ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಮಲ್ಯ ಅವರ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ.

ಮಲ್ಯ ಈಗಲೂ ಸಾವಿರಾರು ಕೋಟಿ ರು ಒಡೆಯ: ಟೈಮ್ಸ್ ನೌ ಮಲ್ಯ ಈಗಲೂ ಸಾವಿರಾರು ಕೋಟಿ ರು ಒಡೆಯ: ಟೈಮ್ಸ್ ನೌ

ಭಾರತ ಬಿಟ್ಟು ಲಂಡನ್ನಿನಲ್ಲಿ ನೆಲೆಸಿರುವ ಮಲ್ಯ ಈಗಲೂ ಭಾರಿ ಶ್ರೀಮಂತ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಅವರಿಗೆ ಸೇರಿದ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್, ಯುಬಿಎಲ್ ಹಾಗೂ ಮೆಕ್ ಡೊವೆಲ್ ಹೋಲ್ಡಿಂಗ್ಸ್ ಲಿಮಿಟೆಡ್ ಗೆ ಸೇರಿದ 100 ಕೋಟಿ ಮೌಲ್ಯದ ಷೇರುಗಳನ್ನು ಸರ್ಕಾರದ ವಶಕ್ಕೆ ಸೇರಿಸಲಾಗಿದೆ.

Rs 100-crore Kingfisher Airlines shares transferred to central govt

ಲೇವಾದೇವಿ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ವಿಜಯ್ ಮಲ್ಯರ ಹಲವು ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ

ಐಡಿಬಿಐ ಬ್ಯಾಂಕಿಗೆ 900 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ವಿಜಯ್ ಮಲ್ಯ ಮೇಲೆ ಈ ಜಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ ಮುಂದಾಗಿದೆ.

ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!

ಮನಿಲಾಂಡ್ರಿಂಗ್ ತಡೆ ಕಾಯ್ದೆ(PMLA) ಸೆಕ್ಷನ್ 9ರ ಅಡಿಯಲ್ಲಿ ಮಲ್ಯ ಹೊಂದಿರುವ ಮದ್ಯದ ಸಂಸ್ಥೆಗಳ ಸುಮಾರು 4,000 ಕೋಟಿ ರು ಗೂ ಅಧಿಕ ಮೊತ್ತದ ಆಸ್ತಿ ಜಪ್ತಿ ಮಾಡುವಂತೆ ಷೇರುಗಳ ನಿಯಂತ್ರಕ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಗೆ ಎರಡು ತಿಂಗಳ ಹಿಂದೆಯೇ ಜಾರಿ ನಿರ್ದೇಶನಾಲಯ ಸೂಚಿಸಿತ್ತು.

English summary
The Enforcement Directorate (ED) has started the process of confiscating the assets of Vijay Mallya, chairman of the now-defunct Kingfisher Airlines Ltd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X