ರಾಮನಗರಕ್ಕೆ ಮೆಟ್ರೋ ಸೇವೆ ವಿಸ್ತರಣೆಯಿಂದ ಏನೆಲ್ಲ ಪ್ರಯೋಜನೆಗಳಿವೆ?-ಡಾ.ಸಿನ್.ಮಂಜುನಾಥ್ ಹೇಳಿದ್ದೇನು?
Bengaluru Metro: ಬೆಂಗಳೂರಿನ ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದಲ್ಲಿ ಬಹುತೇಕ ಮಂದಿ ಕಾರ್, ಬೈಕ್, ಬಸ್ ವ್ಯವಸ್ಥೆಯಿದ್ದರೂ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಈ ಹಿನ್ನೆಲೆ ಮೆಟ್ರೋ ರೈಲು ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಹಾಗೆಯೇ ಇದೀಗ ಈ ಸೇವೆಯ ವಿಸ್ತರಣೆ ಬಗ್ಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಡಾ.ಸಿ.ಎನ್.ಮಂಜುನಾಥ್ ಅವರು ಮಹತ್ವದ ಸುಳಿವೊಂದನ್ನ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಸೇವೆಯನ್ನು ಈ ನಗರಕ್ಕೂ ವಿಸ್ತರಣೆ ಮಾಡುವ ಕುರಿತು ಮಹತ್ವದ ಮಾಹಿತಿಯೊಂದನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕಯಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರು ಹೊರಹಾಕಿದ್ದು, ರೇಷ್ಮೇಮಗರಿ ರಾಮನಗರದ ರೋಹಳ್ಳಿ ಕೈಗಾರಿಕಾ ಕೇಂದ್ರಕ್ಕೆ ನಮ್ಮ ಮೆಟ್ರೋ ಸೇವೆಗಳ ವಿಸ್ತರಣೆ ಆಗಬೇಕಿದೆ ಎಂದು ಪ್ರಸ್ತಾಪ ಮಾಡಿದ್ದಾರೆ.

ಹಾರೋಹಳ್ಳಿವರೆಗೂ ನಮ್ಮ ಮೆಟ್ರೋ ವಿಸ್ತರಣೆ ಮಾಡುವಂತೆ ನಾನು ಬಲವಾಗಿ ಒತ್ತಾಯಿಸಿದ್ದೇನೆ. ಅಲ್ಲದೆ ಹಾರೋಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡುವುದರಿಂದ ಈ ಪ್ರದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆಯೂ ಆದಾಂತಾಗುತ್ತದೆ. ಜೊತೆ ಒಂದೇ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಯ ಹಂತ 2ಗೆ 19 ಆಗಸ್ಟ್ 2008ರಂದು ಅನುಮೋದನೆ ನೀಡಲಾಗಿತ್ತು. KIADBಯ ಪ್ರಸ್ತಾವನೆಯು ಹಾರೋಹಳ್ಳಿ ಕೈಗಾರಿಕಾ ಪಾರ್ಕ್‌ನ ಹಂತ 2 ಮತ್ತು 3ರ ಸಂಯೋಜಿತ ಅಭಿವೃದ್ಧಿಯ ಭಾಗವಾಗಿ ಸುಮಾರು 904.86 ಹೆಕ್ಟೇರ್‌ಗಳನ್ನು ಒಳಗೊಂಡಿರುವ ಬಹು-ಉತ್ಪನ್ನ ಕೈಗಾರಿಕಾ ಉದ್ಯಾನವನ ಇದೆ. ಆದ್ದರಿಂದ ಹಾರೋಹಳ್ಳಿ ಔದ್ಯೋಗಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ ಎನ್ನಲಾಗಿದೆ.
ಮೆಟ್ರೋ ಯೋಜನೆ ಬಗ್ಗೆ ಜನರು ಹೇಳೋದೇನು?: ಇನ್ನು ಬೆಂಗಳೂರಿನಿಂದ ಮೈಸೂರಿನವರೆಗೂ ಮೆಟ್ರೋ ತರುವುದಾಗಿ ಸಂಸದ ಪ್ರತಾಪ್ ಸಿಂಹ ಕೂಡ ಹೇಳಿದ್ದರು. ಸರ್ಕಾರ ಕೂಡ ಮೈಸೂರುವರೆಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ಮುಂದಾಲೋಚನೆ ಇಲ್ಲದೆ ಕೈಗೊಂಡಿದ್ದಾರೆ ಎನ್ನುವ ಕೂಗುಗಳು ಕೂಡ ಎದ್ದಿವೆ.
ಮೈಸೂರನ್ನು ಬೆಂಗಳೂರಿನ ಜೊತೆಗೆ ಹೋಲಿಕೆ ಮಾಡೋದು ಬೇಡ. ಏಕೆಂದರೆ ಸಾಂಸ್ಕೃತಿಕ ನಗರಿಯಲ್ಲಿ ಟ್ರಾಫಿಕ್ ಜಾಮ್ ಅಂತೂ ಇಲ್ವೆ ಇಲ್ಲ. ಈಗಿರುವ ವಾತಾವರಣವೇ ತುಂಬಾ ಚೆನ್ನಾಗಿದೆ. ಅಭಿವೃದ್ಧಿ ಮಾಡುತ್ತೇವೆ ಎಂದು ಮೆಟ್ರೋ ತಂದು ನಗರವನ್ನು ಹಾಳು ಮಾಡಬೇಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.
ಸುತ್ತಮುತ್ತಲಿನ ನಗರ, ಜಿಲ್ಲೆಗಳಿಂದ ಇಲ್ಲಿಗೆ ಬರಬೇಕೆಂದರೆ ರೈಲುಗಳ ವ್ಯವಸ್ಥೆಯಲ್ಲಿ ಏನು ಕೊರತೆಯಿಲ್ಲ. ಪ್ರತಿ ಗಂಟೆಗೊಂದರಂತೆ ರೈಲುಗಳಿವೆ. ಇಲ್ಲಿ ರಾಜಮಹರಾಜರ ಕಾಲದ ಪ್ರಸಿದ್ಧ ಸುಂದರ ಪ್ರವಾಸಿ ತಾಣಗಳಿದ್ದು, ಪ್ರತಿನಿತ್ಯವೂ ಸಾವಿರಾರು ಜನರು ರೈಲಿನ ಮೂಲಕವೇ ಬರುತ್ತಿರುತ್ತಾರೆ. ಆದ್ದರಿಂದ ಮೆಟ್ರೋ ಅವಶ್ಯಕತೆ ಇಲ್ಲ. ಒಂದು ವೇಳೆ ಮೆಟ್ರೋ ತರುವ ಯೋಚನೆ ಇದ್ದರೆ ಅದನ್ನು ಇಲ್ಲಿಗೆ ಕೈಬಿಟ್ಟುಬಿಡಿ ಅಂತಿದ್ದಾರೆ ಇಲ್ಲಿನ ಜನರು.












Click it and Unblock the Notifications