ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ
ರಾಮನಗರ, ಜೂನ್ 17: ರಾಜ್ಯದ ಪ್ರತೀ ಮನೆಗಳಿಗೆ ಜಲಧಾರೆ' ಯೋಜನೆ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ತಿಳಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನತಾ ದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದರು.
ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಭಾಗಗಳ ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆ ಜಾರಿಗೆಗೊಂಡಿದ್ದು ಸುಮಾರು 548 ಕೋಟಿ ರೂಗಳ ವೆಚ್ಚದಲ್ಲಿ ಕಾವೇರಿ ನದಿ ಮೂಲದಿಂದ ಇಗ್ಗಲೂರು ಬ್ಯಾರೇಜ್ಗೆ ನೀರು ಹರಿಸಿ, ಕಣ್ವ, ವೈಜಿ ಗುಡ್ಡ, ಮಂಚನಬೆಲೆ ಜಲಾಶಯಗಳಿಗೆ ನೀರು ಹರಿಸಿ ಕೆರೆಗಳಿಗೆ ನೀರು ತುಂಬುವ ಶಾಶ್ವತ ಯೋಜನೆ ಜಾರಿಗೊಂಡಿದೆ ಎಂದರು.

ಚನ್ನಪಟ್ಟಣದಲ್ಲಿ ಜನತಾ ದರ್ಶನ ನಡೆಸಿದ ಕುಮಾರಸ್ವಾಮಿ, ಹಲವರು ಸಾರ್ವಜಿಕರನ್ನು ಭೇಟಿಯಾಗಿ ಅವರ ಅವಹಾಲುಗಳನ್ನು ಸ್ವೀಕರಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಅಗಮಿಸಿದ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಸ್ತೆಯುದ್ದಕ್ಕೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಮಳೂರು ಮಾರ್ಗವಾಗಿ ಆಗಮಿಸಿದ ಮುಖ್ಯಮಂತ್ರಿಗಳನ್ನು ಪ್ರತಿ ಹಳ್ಳಿಗಳಲ್ಲಿ ಮಾವಿನ ತೋರಣ ಹಾಗೂ ಬಾಳೆ ಕಂಬದ ಅಲಂಕಾರದೊಂದಿಗೆ ಹೂ ಮಾಲೆ ಹಾಕಿ ಸ್ವಾಗತಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿಯವರನ್ನು ಭೇಟಿಯಾದ ಹಿರಿಯರು, ಮಕ್ಕಳು ವಯೋವೃದ್ದರು ಅಹವಾಲುಗಳನ್ನು ಸಲ್ಲಿಸಿ ವಿಚಾರ ವಿನಿಮಯ ಮಾಡಿಕೊಂಡರು. ಸ್ಥಳೀಯ ಮುಖಂಡರು ಮುಖ್ಯಮಂತ್ರಿಯವರಿಗೆ ಹೂಗುಚ್ಚ ಸಮರ್ಪಿಸಿದರು.












Click it and Unblock the Notifications