ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯವರಿಂದ ಮತದಾರರ ಮಾಹಿತಿ ಕಳವು: ಚನ್ನಪಟ್ಟಣದಲ್ಲಿ ಎಚ್‌ಡಿಕೆ ಆಕ್ರೋಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್‌ 17: ಬಿಜೆಪಿ ವಿರುದ್ಧ ವೋಟರ್ ಐಡಿ ಅಕ್ರಮ ಆರೋಪದ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾ.ಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ನವರು ಮಾಡಿದ್ದ ಕೆಲಸವನ್ನೇ ಬಿಜೆಪಿಯವರು ಮಾಡಿದ್ದಾರೆ. ಸರ್ಕಾರದ ಹಣದಲ್ಲಿ ಚುನಾವಣಾ ಅಕ್ರಮ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಮಾಹಿತಿಯನ್ನು ಖಾಸಗಿಯವರಿಗೆ ಕೊಡಲಾಗುತ್ತಿದೆ.‌ ಇದನ್ನು ಮಲ್ಲೇಶ್ವರಂನಲ್ಲಿರುವ ಬೇನಾಮಿ ಹೆಸರಿನ ಮಂತ್ರಿಗಳ ಸಂಸ್ಥೆ ಮಾಡುತ್ತಿದೆ. ಈ ಹಿಂದೆ ಬಿಬಿಎಂಪಿಗೆ ಬೆಂಕಿ ಇಟ್ಟಿದ್ದರಲ್ಲ ಅದೇ ಕಂಪೆನಿಯವರು ಮತದಾರರ ಮಾಹಿತಿಯನ್ನು ಕದಿಯುತ್ತಿದ್ದಾರೆ. ಪಾಲಿಕೆಯಲ್ಲಿ ಅಕ್ರಮ ಮಾಡಿ ಮಧ್ಯರಾತ್ರಿ ಕಡತಗಳಿಗೆ ಬೆಂಕಿಹಾಕಿದ್ದು ಇದೇ ಕಂಪನಿಯವಾಗಿದ್ದಾರೆ. ಆದರೆ ಕಾಂಗ್ರೆಸ್‌ನವರು ಈ ಬಗ್ಗೆ ಈಗ ಚರ್ಚೆ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಮೈಸೂರಿನಲ್ಲಿ ಗುಂಬಜ್ ವಿವಾದ: ನನಗೆ ಕಿರುಕುಳ ಆಗುತ್ತಿದೆ ಎಂದ ಬಿಜೆಪಿ ಶಾಸಕ ರಾಮದಾಸ್ಮೈಸೂರಿನಲ್ಲಿ ಗುಂಬಜ್ ವಿವಾದ: ನನಗೆ ಕಿರುಕುಳ ಆಗುತ್ತಿದೆ ಎಂದ ಬಿಜೆಪಿ ಶಾಸಕ ರಾಮದಾಸ್

ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳೇ ಹೀಗೆ ಕಬಳಿಸುವುದಾಗಿದೆ. ಇವಿಎಂ ಇರುವವರೆಗೂ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ ಅಂತಾ ಮೊನ್ನೆ ತೆಲಂಗಾಣದ ಸಿಎಂ ಹೇಳಿದ್ದಾರೆ. ಬಿಜೆಪಿಯವರು ಯಾವುದೇ ಜನಪರ ಕೆಲಸವನ್ನು ಮಾಡುತ್ತಿಲ್ಲ. ಮಾಹಿತಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು ಇವತ್ತು ಆತಂಕ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ಸಹ ಮಾಡಿದ್ದು ಇದೇ ಕೆಲಸವಾಗಿದೆ. ಈ ಬಗ್ಗೆ ನಾನು ಹೆಚ್ಚು ತಲೆ ಕೆಡೆಸಿಕೊಳ್ಳಲು ಹೋಗುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಹೇಳಿದರು.

ಸರ್ಕಾರದ ಸಹಾಯದೊಂದಿಗೆ ಮತದಾರರ ಮಾಹಿತಿ ಕಳ್ಳತನ ಮಾಡಿದ ಎನ್‌ಜಿಒ: ತನಿಖೆಯಿಂದ ಬಹಿರಂಗಸರ್ಕಾರದ ಸಹಾಯದೊಂದಿಗೆ ಮತದಾರರ ಮಾಹಿತಿ ಕಳ್ಳತನ ಮಾಡಿದ ಎನ್‌ಜಿಒ: ತನಿಖೆಯಿಂದ ಬಹಿರಂಗ

ಅಶ್ವತ್ಥ್‌ ನಾರಾಯಣ್‌ ವಿರುದ್ಧ ಎಚ್‌ಡಿಕೆ ಕಿಡಿ

ಅಶ್ವತ್ಥ್‌ ನಾರಾಯಣ್‌ ವಿರುದ್ಧ ಎಚ್‌ಡಿಕೆ ಕಿಡಿ

ಇನ್ನು ಬಿಎಂಎಸ್ ಶಿಕ್ಷಣ ಸಂಖ್ಯೆ ಹಗರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಅಶ್ವತ್ಥ್‌ ನಾರಾಯಣ್ ವಿಚಾರದಲ್ಲಿ ನಾನೇಕೆ ಸಾಫ್ಟ್ ಆಗಲಿ? ಬಿಎಂಎಸ್ ಹಗರಣದಲ್ಲಿ ಸಿಎಂ ಫಲಾಯನವಾದ ಮಾಡಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಎಲ್ಲೂ ಹೋಗುವುದಿಲ್ಲ. ಎಷ್ಟೇ ಕುತಂತ್ರ ಮಾಡಿದರೂ ಸಹ ಮುಂದಿನ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನಾನು ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿದ್ದೇನೆ ಎಂದರು.

ಮುಂದಿನ ಬಾರಿ ಜೆಡಿಎಸ್​ ಅಧಿಕಾರಕ್ಕೆ ಬರಲಿದೆ

ಮುಂದಿನ ಬಾರಿ ಜೆಡಿಎಸ್​ ಅಧಿಕಾರಕ್ಕೆ ಬರಲಿದೆ

123 ಕ್ಷೇತ್ರಗಳ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಸರ್ಕಾರ ಯಾರು ರಚನೆ ಮಾಡುತ್ತಾರೆ ಅನ್ನುವುದು ವಿಧಿಲಿಖಿತವಾಗಿದೆ ಎಂದರು. ಮುಂದಿನ ಬಾರಿ ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ಎಲ್ಲ ಅಕ್ರಮಗಳನ್ನೂ ಬಯಲಿಗೆಳೆದು ಕ್ರಮ ಕೈಗೊಳ್ಳುವೆವು. ಎಂತಹದ್ದೇ ದುಷ್ಟ ಶಕ್ತಿಗಳು ಇದ್ದರೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರಾಜಿ ಇಲ್ಲದೇ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಗುಡುಗಿದರು.

ಮಾಧ್ಯಮದವರ ವಿರುದ್ಧ ಎಚ್‌ಡಿಕೆ ಗರಂ

ಮಾಧ್ಯಮದವರ ವಿರುದ್ಧ ಎಚ್‌ಡಿಕೆ ಗರಂ

ಸಿದ್ದರಾಮಯ್ಯ ಗೆಲುವಿನ ವಿಚಾರವಾಗಿ ಪ್ರತಿಕ್ರಿಸಿ, ಸಿದ್ದರಾಮಯ್ಯ ನನ್ನಿಂದ ಗೆದ್ದಿದ್ದಾರೆ ಎಂದು ನಾನು ಎಲ್ಲಿ ಹೇಳಿದ್ದೇನೆ? ಎರಡು ಬಾರಿ ನಾನು ರಾಜಕೀಯವಾಗಿ ತೆಗೆದುಕೊಂಡ ನಿರ್ಣಯ ತಪ್ಪಾಗಿದೆ ಎಂದಿದ್ದೇನೆ ಅಷ್ಟೇ. ನಾನು ಅವರನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಲ್ಲ. ಕೆಲವು ಮಾಧ್ಯಮಗಳು ರಾಜಕೀಯ ಜನ್ಮ ಕೊಟ್ಟೆ ಎಂದಿವೆ. ನಾನು ಕೊಟ್ಟ ಹೇಳಿಕೆ ವಿಡಿಯೋ ನಿಮ್ಮ ಬಳಿಯೇ ಇದ್ದು, ಅದರಲ್ಲಿ ನಾನು ಏನು ಹೇಳಿದ್ದೇನೆ ತೆಗೆಯಿರಿ. ಎರಡು ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪು ಮಾಡಿಕೊಂಡೆ. ಇದರಿಂದಾಗಿ ಅವರಿಗೆ ಅನುಕೂಲ ಆಯಿತು ಅಂದಿದ್ದೇನೆ ಅಷ್ಟೇ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.

ಎಚ್‌ಡಿಕೆಯಿಂದ ಸಿದ್ದರಾಮಯ್ಯಗೆ ಪ್ರಶ್ನೆ

ಎಚ್‌ಡಿಕೆಯಿಂದ ಸಿದ್ದರಾಮಯ್ಯಗೆ ಪ್ರಶ್ನೆ

ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದವರು ಅವರು. ಸ್ಪರ್ಧೆ ಮಾಡಲು ಅವರಿಗೆ ಬೇಕಾದಷ್ಟು ಸ್ಥಳಗಳಿವೆ. ಚುನಾವಣೆಗೆ ನಿಲ್ಲಲು ಏಕೆ ಗೊಂದಲ ಮಾಡಿಕೊಂಡಿದ್ದಾರೆ? ಒಂದು ಕ್ಷೇತ್ರವನ್ನು ಘೋಷಣೆ ಮಾಡಲಿ ಎಂದು ಹೇಳಿದ್ದೇನೆ. ನನ್ನ ರಾಜಕೀಯ ತೀರ್ಮಾನ ತಪ್ಪಾಗಿ ಅವರಿಗೆ ಅನುಕೂಲವಾಯಿತು. ಇದು ವಾಸ್ತವವಾಗಿ ಇರುವ ವಿಚಾರ ಆಗಿದೆ. ನಾನು 2006, 2018ರ ಚುನಾವಣೆ ಬಗ್ಗೆ ಹೇಳಿದ್ದು ಎಂದರು.

English summary
Former Chief Minister HD Kumaraswamy expressed outrage in Channapatna, voter information Theft by first Congress, now BJP, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X