"ಯಡಿಯೂರಪ್ಪನವರ ಮಂತ್ರಿಮಂಡಲ ಹುಚ್ಚರ ಆಸ್ಪತ್ರೆ": ವಾಟಾಳ್ ನಾಗರಾಜ್ ಟೀಕೆ

ರಾಮನಗರ, ಆಗಸ್ಟ್ 27: ಯಡಿಯೂರಪ್ಪವರ ಮಂತ್ರಿಮಂಡಲ ಹುಚ್ಚಾಸ್ಪತ್ರೆಯಾಗಿದೆ ಎಂದು ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

Recommended Video

      ಇದು international ಕ್ರಿಕೆಟ್ ನಲ್ಲಿ ಕನ್ನಡಿಗನ ಸಾಧನೆ | Oneindia Kannada

      ನಗರದ ಐಜೂರು ವೃತ್ತದಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ರಾಜ್ಯ ಸರ್ಕಾರ ಕೋವಿಡ್-19 ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

      "ಸರ್ಕಾರ ಕೊರೊನಾ ವಿಚಾರದಲ್ಲಿ ಎಲ್ಲದರಲ್ಲೂ ಲೂಟಿ ಮಾಡುತ್ತಿದೆ. ಸಾವಿನ ಮನೆಯಲ್ಲೂ ಲೂಟಿ ನಡೆಯುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೂ ಕೊರೊನಾ ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಕೊರೊನಾ ಪಾಸಿಟಿವ್, ಮೂವರು ಆರೋಗ್ಯ ಸಚಿವರಿಗೂ ಕೊರೊನಾ ಪಾಸಿಟಿವ್ ಎಂದು ವ್ಯಂಗ್ಯವಾಡಿದರು.

      Ramanagar: Vatal Nagaraj Protests Alleging Government Negligence Towards Coronavirus

      ಕೊರೊನಾದಿಂದಾಗಿ ದಿನನಿತ್ಯ ನೂರಾರು ಜನರು ಸಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಅದರ ಬಗ್ಗೆ ಗಮನವೇ ಇಲ್ಲ. ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಕಳೆದ ಬಾರಿ ಪ್ರವಾಹದಲ್ಲಿ ಸಿಲುಕಿ ನೊಂದವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಆದರೆ ಯಡಿಯೂರಪ್ಪ ಬೆಳಗಾವಿ ನೆರೆ ವೀಕ್ಷಣೆಗೆ ಹೋಗಿದ್ದಾರೆ ಎಂದರು.

      ಯಡಿಯೂರಪ್ಪನವರು ಸಾಲ ಮಾಡಿ ಪರಿಹಾರ ಕೊಡ್ತೀನಿ ಅಂತಾರೆ, ಯಡಿಯೂರಪ್ಪನವರೇ ನೀವು ನಿಮ್ಮ ಮನೆಯಿಂದ ಸಾಲ ತಂದುಕೊಡ್ತೀರಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+