ಚನ್ನಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಬೈಕ್- ಕಾರು ಅಪಘಾತ; ಇಬ್ಬರು ಯುವಕರ ಸಾವು

ಚನ್ನಪಟ್ಟಣ, ಜನವರಿ 31: ಬೆಳ್ಳಂಬೆಳಿಗ್ಗೆ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಶಿವಳ್ಳಿ ಹೋಟೆಲ್ ಮುಂಭಾಗ ನಡೆದಿದೆ.

ರಾಹುಲ್ (18) ಮತ್ತು ಅಭಿಷೇಕ್ (20) ಮೃತಪಟ್ಟ ದುರ್ದೈವಿಗಳು. ಇಬ್ಬರು ಯುವಕರು ಸಮೀಪದ ಸೀನನಹಳ್ಳಿ ಗ್ರಾಮದವರು. ಗಂಭೀರವಾಗಿ ಗಾಯಗೊಂಡ ಓರ್ವ ಪಾದಚಾರಿ ಮತ್ತು ಕಾರಿನಲ್ಲಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿ 275ರಲ್ಲಿ ಮತ್ತೀಕೆರೆ ಗ್ರಾಮದ ಬಳಿಯ ಶಿವಳ್ಳಿ ಹೋಟೆಲ್ ಮುಂಭಾಗ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಗುದ್ದಿ ಪಕ್ಕದ ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Two Youths Killed In Accident In Bengaluru Mysuru Highway Channapatna

ಆಸ್ಪತ್ರೆಗೆ ಭೇಟಿ ನೀಡಿದ ಎಎಸ್ಪಿ ರಾಮರಾಜನ್ ಮೃತರನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಮೃತನ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ಇದೇ ಅಪಘಾತವನ್ನೇ ಉದಾಹರಣೆ ಕೊಟ್ಟು ಹೆಲ್ಮೆಟ್ ಮಹತ್ವದ ಬಗ್ಗೆ ತಿಳಿಹೇಳಿದರು. "ಹೆಲ್ಮೆಟ್ ಹಾಕಿಕೊಳ್ಳುವಂತೆ ಹೇಳಿದರೆ ಇಲ್ಲದ ಸಬೂಬು ಹೇಳುತ್ತೀರಿ. ಅಪಘಾತ ನಡೆದಾಗ ಮೊದಲು ಪೆಟ್ಟು ಬೀಳುವುದು ತಲೆಗೆ. ಇಂದು ಸಾವನ್ನಪ್ಪಿದ ಈ ಯುವಕರು ಹೆಲ್ಮೆಟ್ ಧರಿಸಿದ್ದರೆ ಅವರ ಜೀವ ಉಳಿಯುತಿತ್ತು" ಎಂದು ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+