ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕ ಮುಷ್ಕರ: ಸರ್ಕಾರಕ್ಕೆ ಕನಿಷ್ಠ ತಿಳುವಳಿಕೆ ಇಲ್ಲವೆಂದ ಮಾಜಿ ಸಿಎಂ ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 24: ಕಾರ್ಮಿಕರು ಹಾಗೂ ಟೊಯೊಟೊ ಅಡಳಿತ ಮಂಡಳಿ ತಿಕ್ಕಾಟ 46 ದಿನ ಕಳೆದರೂ ಸರ್ಕಾರಕ್ಕೆ ಟೊಯೊಟೊ ಕಿರ್ಲೋಸ್ಕರ್ ಬಿಕ್ಕಟ್ಟು ಪರಿಹರಿಸುವ ಕನಿಷ್ಠ ತಿಳುವಳಿಕೆ ಇಲ್ಲ ಎಂದು ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಬಿಡದಿಯ ತಮ್ಮ ತೋಟದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ‌ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ ರವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಮಿಕರ ಮತ್ತು ಕಂಪನಿ ಮುಖ್ಯಸ್ಥರ ಸಭೆ ಕರೆಯಿರಿ, ನಮ್ಮನ್ನು ಕರೆಯಿರಿ ಚರ್ಚೆ ನಡೆಸಬೇಕು ಎಂದು ತಿಳಿಸಿ ತಿಂಗಳು ಕಳೆದಿದೆ. ಅವರು ನನ್ನ ಮಾತನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆ ಆರೋಪಿಸಿದರು.

ಹುಡುಗಾಟದ ನೈಟ್ ಕರ್ಫ್ಯೂ: ಮಾಜಿ ಸಿಎಂ ಎಚ್‌ಡಿಕೆ ಖಂಡನೆಹುಡುಗಾಟದ ನೈಟ್ ಕರ್ಫ್ಯೂ: ಮಾಜಿ ಸಿಎಂ ಎಚ್‌ಡಿಕೆ ಖಂಡನೆ

ಈಗಾಗಲೇ ಕಾರ್ಮಿಕರು ಮತ್ತು ಕಂಪನಿಯ ಮುಖ್ಯಸ್ಥರು ಪ್ರತ್ಯೇಕವಾಗಿ ಕರೆದು ಸಭೆ ನಡೆಸಿದ್ದೇನೆ. ಅದರೆ ಈ ಬಿಕ್ಕಟ್ಟನ್ನು ಕಂಪನಿಯ ಮುಖ್ಯಸ್ಥರು ಪ್ರತಿಷ್ಟೆಯಾಗಿ ತೆದುಕೊಂಡಿದ್ದಾರೆ. ಹಾಗಾಗೆ ನಾನು ಟ್ವೀಟ್ ಮಾಡಿ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ. ಟೊಯೊಟೊ ಬಿಕ್ಕಟ್ಟನ್ನು ಲಘುವಾಗಿ ಪರಿಗಣಿಸಬೇಡಿ. ನರಸಾಪುರದ ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಅನಾಹುತ ನೋಡಿದ್ದೀರಿ. ಇಲ್ಲಿ ಹೆಚ್ಚು ಕಮ್ಮಿ ಆದರೆ ಯಾರು ಇಲ್ಲಿ ಬಂದು ಬಂಡವಾಳ ತೊಡಗಿಸುತ್ತಾರೆ ಎಂದು ಸರ್ಕಾರವನ್ನು ಎಚ್‌ಡಿಕೆ ಪ್ರಶ್ನಿಸಿದರು.

Toyota Labor Strike: Former CM HD Kumaraswamy Says The Government Has No Understanding

ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ರವರಿಗೆ ಕಾರ್ಮಿಕರ ಸಮಸ್ಯೆ ಪರಿಹಾರಿಸಲು ಸಭೆ ಕರೆಯಲು ಸಮಯವಿಲ್ಲ. ಪಕ್ಷಾತೀತವಾಗಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗ್ರಾಮಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳಿಗೆ ನಿಮ್ಮ ಮತ ನೀಡಿ ಎಂದು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಜಿ ಸಿಎಂ ಹೇಳಿದರೂ ಸಭೆ ಕರೆಯುವ ಸೌಜನ್ಯವಿಲ್ಲ ಇಂತವರನ್ನು ಇಟ್ಟಿಕೊಂಡು ಮುಖ್ಯಮಂತ್ರಿಗಳು ಹೇಗೆ ಕೆಲಸ ಮಾಡುತ್ತಾರೊ ಎಂದು ಮಾಜಿ ಸಿಎಂ ವ್ಯಂಗ್ಯವಾಡಿದರು.

ಇಲ್ಲಗೆ ಬರುವ ಕಂಪನಿಗಳು ನಮ್ಮ ನೆಲ, ನೀರು ರಾಜ್ಯದ ತೆರಿಗೆಯಲ್ಲಿ ರಿಯಾಯಿತಿ ಪಡೆಯುತ್ತಾರೆ. ಅದರೆ ಹೊರ ರಾಜ್ಯದವರಿಗೆ ಖಾಯಂ ನೌಕರಿ ಕೊಡುತ್ತಾರೆ, ಕಂಪನಿಗಾಗಿ ಭೂಮಿ ಕಳೆದುಕೊಂಡ ಇಲ್ಲಿನವರಿಗೆ ಹೊರ ಗುತ್ತಿಗೆ ಅದಾರದಲ್ಲಿ ಕೆಲಸ ನೀಡುವ ಕೆಟ್ಟ ಪದ್ಧತಿ ರಾಜ್ಯದ ಬೇರೆ ಕಡೆಗೂ ಹಬ್ಬುತ್ತಿದೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು.

ಟೊಯೋಟೊ ಕಾರ್ಖಾನೆಯಲ್ಲಿ ಖಾಯಂ ನೌಕರರ ಸಮಜಾಯಿಷಿ ಕೇಳದೆ ಆಯ್ದ ನೌಕರರನ್ನು ಕೆಲಸದಿಂದ ತೆಗೆದು ಹಾಕಿತ್ತಿರವುದನ್ನು ಗಮನಿಸಿದರೆ ಕಂಪನಿಯ ಸ್ವೇಚ್ಚಾಚಾರ ತೋರಿಸುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಕಂಪನಿಯವರ ಮಾತಿಗೆ ಮರುಳಾಗದೇ ಯಾರ ತಪ್ಪಿದೆ ಎಂಬ ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದರು.

English summary
Former CM HD Kumaraswamy urged has for a meeting of Toyota workers and company heads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X