ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರಣಿ ನಿರತ 39 ನೌಕರರನ್ನು ಅಮಾನತ್ತು ಮಾಡಿದ ಟೊಯೋಟಾ ಕಂಪನಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 15: ಟೊಯೋಟಾ ಕಾರ್ಖಾನೆಯ ಕಾರ್ಮಿಕ ವಿರೋಧಿ ನಡುವಳಿಕೆ ಖಂಡಿಸಿ ಕಳೆದ ಏಳು ದಿನಗಳಿಂದ ಟೊಯೋಟಾ ನೌಕರರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಧರಣಿ ನಿರತ 39 ಜನ ನೌಕರರನ್ನು ಅಮಾನತ್ತು ಮಾಡಿರುವ ಬಗ್ಗೆ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಪ್ರಕಟಣೆ ಬಿಡುಗಡೆ ಮಾಡಿದೆ.

ಟಿಕೆಎಂ ನವೆಂಬರ್ 10 ರಂದು ಬಿಡದಿಯ ತನ್ನ ಎರಡೂ ಸ್ಥಾವರಗಳಲ್ಲಿ "ಲಾಕೌಟ್' ಘೋಷಿಸಬೇಕಾಯಿತು. ಟಿಕೆಎಂ ವರ್ಕರ್ಸ್ ಯೂನಿಯನ್ ಮತ್ತು ಅದರ ಸದಸ್ಯರು ಕರೆದ ನಿಯಮಬಾಹಿರ ಮುಷ್ಕರದ ಹಿನ್ನೆಲೆಯಲ್ಲಿ ಲಾಕೌಟ್ ಘೋಷಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದುಷ್ಕೃತ್ಯಗಳ ವ್ಯವಸ್ಥಿತ ದಾಖಲೆಯನ್ನು ಹೊಂದಿದ್ದ ನೌಕರ

ದುಷ್ಕೃತ್ಯಗಳ ವ್ಯವಸ್ಥಿತ ದಾಖಲೆಯನ್ನು ಹೊಂದಿದ್ದ ನೌಕರ

ದುಷ್ಕೃತ್ಯಗಳ ವ್ಯವಸ್ಥಿತ ದಾಖಲೆಯನ್ನು ಹೊಂದಿರುವ ಮತ್ತು ಕಾರ್ಖಾನೆಯ ಆವರಣದಲ್ಲಿ ಶಿಸ್ತು ಉಲ್ಲಂಘನೆ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯಲ್ಲಿ ಭಾಗಿಯಾಗಿದ್ದ ಒಬ್ಬ ನೌಕರನನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಮುಷ್ಕರವನ್ನು ಕಾರ್ಮಿಕರು ಮಾಡುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ.

ಟೊಯೋಟಾ ನೌಕರರ ಧರಣಿ 6ನೇ ದಿನಕ್ಕೆ, ಸರ್ಕಾರ ಮಧ್ಯ ಪ್ರವೇಸುವಂತೆ ಕಾರ್ಮಿಕರ ಆಗ್ರಹಟೊಯೋಟಾ ನೌಕರರ ಧರಣಿ 6ನೇ ದಿನಕ್ಕೆ, ಸರ್ಕಾರ ಮಧ್ಯ ಪ್ರವೇಸುವಂತೆ ಕಾರ್ಮಿಕರ ಆಗ್ರಹ

ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘನೆ

ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘನೆ

ಇನ್ನೂ 'ಧರಣಿ ಮುಷ್ಕರ'ದ ಒಂದು ಭಾಗವಾಗಿ, ತಂಡದ ಸದಸ್ಯರು ಕಾನೂನು ಬಾಹಿರವಾಗಿ ಕಂಪನಿಯ ಆವರಣದಲ್ಲಿ ಉಳಿದುಕೊಂಡು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಇದರಿಂದಾಗಿ ಕಾರ್ಖಾನೆಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗುತ್ತಿತ್ತು. ಇದು ಟಿಕೆಎಂ ಅಧಿಕಾರಿಗಳು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಬಿಡದಿಯಲ್ಲಿನ ತನ್ನ ಸ್ಥಾವರದಲ್ಲಿ ಲಾಕೌಟ್ ಘೋಷಿಸಬೇಕಾಯಿತು.

ಅಮಾನತುಗೊಳಿಸಿ ವಿಚಾರಣೆ

ಅಮಾನತುಗೊಳಿಸಿ ವಿಚಾರಣೆ

ಲಾಕೌಟ್ ಘೋಷಣೆಯಾದ ನಂತರ ಯೂನಿಯನ್ ಮತ್ತು ಸದಸ್ಯರು ಕಂಪನಿಯ ಆವರಣದ ಹೊರಗೆ ಕುಳಿತು ಕಂಪನಿಯ ವಿರುದ್ಧ ಘೋಷಣೆ ಕೂಗುತ್ತಾ ಮುಷ್ಕರ ಮುಂದುವರೆಸಿದ್ದಾರೆ. ಈ ವಿವೇಚನ ರಹಿತ ಮತ್ತು ಕಂಪನಿಯ ನಿಯಮಗಳ ಉಲ್ಲಂಘನೆಯ ಮಾಡಿದ ಟಿಕೆಎಂ 39 ಸದಸ್ಯರನ್ನು ಕಂಪನಿಯ ಶಿಸ್ತಿನ ನಿಯಮಗಳಿಗೆ ಅನುಸಾರವಾಗಿ 'ಅಮಾನತುಗೊಳಿಸಿ ವಿಚಾರಣೆ' ಅಡಿಯಲ್ಲಿ ಇರಿಸಲು ನಿರ್ಧರಿಸಿದೆ.

ನೌಕರರ ಸಂಘದ ನಡುವಿನ ಸಂಧಾನ ಸಭೆ

ನೌಕರರ ಸಂಘದ ನಡುವಿನ ಸಂಧಾನ ಸಭೆ

ಅಸ್ತಿತ್ವದಲ್ಲಿರುವ ಸೇವಾ ನಿಯಮಗಳ ಪ್ರಕಾರ ಮತ್ತು ನೈಸರ್ಗಿಕ ನ್ಯಾಯದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು, ವಿಚಾರಣೆಯ ಪ್ರಕ್ರಿಯೆಯಲ್ಲಿ ಈ ನೌಕರರಿಗೆ ಅವರ ಮುಗ್ಧತೆಯನ್ನು ಸಾಬೀತುಪಡಿಸಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಒದಗಿಸಲಾಗುತ್ತದೆ.

ಟಿಕೆಎಂ ನಿರ್ವಹಣೆ ಮತ್ತು ನೌಕರರ ಸಂಘದ ನಡುವಿನ ಸಂಧಾನ ಸಭೆ ಸೇರಿದಂತೆ ಸಂಬಂಧಿತ ಮಧ್ಯಸ್ಥಗಾರರೊಂದಿಗೆ ಸಂವಹನ ಮತ್ತು ಸಂವಾದ ನಡೆಯುತ್ತಿದೆ, ಇದರಿಂದಾಗಿ ಸುರಕ್ಷತೆಯ ವಾತಾವರಣದಲ್ಲಿ, ಅದರ ಸ್ಥಾವರದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

English summary
Bidadi Toyota Kirloskar Company has announced the suspension of 39 Protest busy employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X