• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ ಶಿಕ್ಷಕಿಗೆ ಮಾನಸಿಕ ಹಿಂಸೆ; ಸಿಆರ್ ಪಿ ಅಮಾನತು

By ರಾಮನಗರ ಪ್ರತಿನಿಧಿ
|

ರಾಮನಗರ, ಮೇ 28: ಶಿಕ್ಷಕಿಯೊಬ್ಬರಿಗೆ ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಟೌನ್ ಸಿಆರ್ ಪಿ (ಸಮೂಹ ಸಂಪನ್ಮೂಲ) ವ್ಯಕ್ತಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ನಗರದ ರಾಯರದೊಡ್ಡಿ ಟೌನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸುಕನ್ಯಾ ಶೆಟ್ಟಿ ಕೊಟ್ಟ ದೂರಿನ ಮೇರೆಗೆ ಟೌನ್ ಕ್ಲಸ್ಟರ್ ಸಿಆರ್ ಪಿ ಕುಮಾರ್ ವಿರುದ್ಧ ಅಮಾನತು ಆದೇಶವನ್ನು ಹೊರಡಿಸಲಾಗಿದೆ.

   ತಾಯಿಯಾದ ನಂತರ ಸ್ಕಿನ್ ಸೌಂದರ್ಯ ಕಾಪಾಡುವುದು ಹೇಗೆ? | Oneindia Kannada

   ಕರ್ತವ್ಯದ ಮೇಲೆ ಶಾಲೆಗೆ ಬಂದರೆ ಕುಮಾರ್ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದರು.‌ ಪಾಠ ಮಾಡಲು ಬಿಡದೆ ಗಂಟೆಗಟ್ಟಲೆ ಅನವಶ್ಯಕವಾಗಿ ಮಾತನಾಡಿಸುತ್ತಿದ್ದರು. ನನ್ನ ವೈಯಕ್ತಿಕ ಮೊಬೈಲ್ ನಂಬರ್ ಪಡೆದು ರಜೆ ದಿನಗಳಲ್ಲಿ ಕರೆ ಮಾಡುತ್ತಿದ್ದರು. ರಜೆ ದಿನಗಳಲ್ಲಿ ಕರೆ ಮಾಡುತ್ತಿದ್ದ ವಿಚಾರ ನಮ್ಮ ಕುಟುಂಬಕ್ಕೆ ತಿಳಿದು ಈ ಬಗ್ಗೆ ನನ್ನ ಸಹೋದರ ಕುಮಾರ್ ಗೆ ಎಚ್ಚರಿಸಿದ್ದರು. ಅಷ್ಟಕ್ಕೂ ಸುಮ್ಮನಾಗದೆ ಪದೇ ಪದೇ ಶಾಲೆಗೆ ಬಂದು ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ.

    ದಾವಣಗೆರೆಯಲ್ಲಿ ಗ್ರಾ.ಪಂ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ದಾವಣಗೆರೆಯಲ್ಲಿ ಗ್ರಾ.ಪಂ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ

   ಶಿಕ್ಷಕಿಯ ದೂರಿನ ಆಧಾರದ ಮೇರೆಗೆ ಪ್ರಾಥಮಿಕ ತನಿಖೆ ಮಾಡಿ ವಿಚಾರಣೆ ಕಾಯ್ದಿರಿಸಿ ಸಿಆರ್ ಪಿ ಅಮಾನತು ಶಿಕ್ಷೆ ಜಾರಿ ಮಾಡಲಾಗಿದೆ.

   English summary
   Town crp suspended for harassing teacher in ramanagar
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X