ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣದಲ್ಲಿ 'ಶನಿಮಹಾತ್ಮನ' ಎತ್ತಂಗಡಿಗೆ ಮುಂದಾದ ಅಧಿಕಾರಿಗಳು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 30: ಫುಟ್ ಪಾತ್ ಮೇಲಿದ್ದ ಶನಿ ದೇವಾಲಯ ತೆರವಿಗೆ ಮುಂದಾದ ಚನ್ನಪಟ್ಟಣ ಅಧಿಕಾರಿಗಳ ನಡೆಗೆ ವ್ಯಾಪಾರಿಗಳು ತಡೆ ಹಾಕಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಚನ್ನಪಟ್ಟಣದ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ಶನಿಮಹಾತ್ಮ ದೇವಾಲಯವನ್ನು ತಾಲ್ಲೂಕು ಆಡಳಿತ ತೆರವುಗೊಳಿಸಲು ಮುಂದಾಗಿತ್ತು, ಈ ವಿಚಾರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮಬೆಂಗಳೂರಲ್ಲಿರುವ 150 ವರ್ಷದ ಆಂಜನೇಯ ದೇವಾಲಯ ನೆಲಸಮ

ಶನಿಮಹಾತ್ಮ ದೇವಸ್ಥಾನವನ್ನು ತಹಶೀಲ್ದಾರ್ ಸುದರ್ಶನ್, ನಗರಸಭೆ ಸಿಬ್ಬಂದಿಗಳೊಂದಿಗೆ ತೆರವುಗೊಳಿಸಲು ಮುಂದಾದರು. ದೇವಸ್ಥಾನ ತೆರವಿಗೆ ಅಧಿಕಾರಿಗಳು JCB ಯಂತ್ರ ಬಳಸಿಕೊಂಡು ತೆರವುಗೊಳಿಸಲು ಮುಂದಾದಾಗ, ತಹಶೀಲ್ದಾರ್ ಸುದರ್ಶನ್ ಹಾಗೂ ಜನರ ನಡುವೆ ಕೆಲಕಾಲ ವಾಕ್ಸಮರ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Tahsildar Tried To Demolish Shani Mahatma Temple In Channapatna

ಬೀದಿ ಬದಿಯ ವ್ಯಾಪಾರಿಗಳು ಫುಟ್ ಪಾತ್ ಮೇಲೆಯೇ ಶನಿ ದೇವರ ಪುಟ್ಟ ದೇವಾಲಯವನ್ನು ನಿರ್ಮಾಣ ಮಾಡಿಕೊಂಡು ಪೂಜೆ ನಡೆಸಿಕೊಂಡು ಬರುತ್ತಿದ್ದರು. ಯಾವುದೇ ಮಾಹಿತಿ ಕೊಡದೇ ಅಧಿಕಾರಿಗಳು ಏಕಾಏಕಿ ಬಂದು ದೇವಸ್ಥಾನ ತೆರವುಗೊಳಿಸಲು ಮುಂದಾದರು.

Tahsildar Tried To Demolish Shani Mahatma Temple In Channapatna

ಹೊಸೂರು ರಸ್ತೆಯಲ್ಲಿ ಭಜರಂಗಿ ದೇಗುಲ ನೆಲಸಮ, ಯಾರು ಹೊಣೆ?ಹೊಸೂರು ರಸ್ತೆಯಲ್ಲಿ ಭಜರಂಗಿ ದೇಗುಲ ನೆಲಸಮ, ಯಾರು ಹೊಣೆ?

ತೆರವಿಗೆ ಮುಂದಾದ ತಹಶೀಲ್ದಾರ್ ನಡೆಗೆ ಸ್ಥಳೀಯ ಜನರು ಹಾಗೂ ಫುಟ್ ಪಾತ್ ವ್ಯಾಪಾರಿಗಳು ಫುಲ್ ಗರಂ ಆಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ದೇವಸ್ಥಾನ ತೆರವು ಕಾರ್ಯವನ್ನ ಅಧಿಕಾರಿಗಳು ಕೈ ಬಿಟ್ಟರು.

English summary
Channapatna Tahsildar tried to demolish shani mahatma temple which was on Footpath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X