ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಫೇಸ್ ಬುಕ್ ವಾರ್ ಶುರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ. 5: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ರಂಗೇರಿದೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮೊದಲ ಸುತ್ತಿನ ಮಾತಿನ ಸಮರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಡೆದಿದೆ.

ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಮಾಸುವ ಮುನ್ನವೇ ಎರಡನೇ ಸುತ್ತಿನ ಫೇಸ್ ಬುಕ್ ಸಮರ ಶುರುವಾಗಿದೆ.
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಗಿಮಿಕ್ ಪಾಲಿಟಿಕ್ಸ್ ಗೆ ಮುಂದಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜು ಅರೋಪಿಸಿದ್ದಾರೆ.

ನನ್ನ ಎದುರಾಳಿ ಜೆಡಿಎಸ್ ಪಕ್ಷ, ಅದನ್ನು ಸೋಲಿಸುವುದೇ ಗುರಿ: ಬಾಲಕೃಷ್ಣನನ್ನ ಎದುರಾಳಿ ಜೆಡಿಎಸ್ ಪಕ್ಷ, ಅದನ್ನು ಸೋಲಿಸುವುದೇ ಗುರಿ: ಬಾಲಕೃಷ್ಣ

 ಕ್ರಮಸಂಖ್ಯೆ ಬದಲಾವಣೆ

ಕ್ರಮಸಂಖ್ಯೆ ಬದಲಾವಣೆ

ಮಾಗಡಿ ವಿಧಾನಸಭಾ ಚುನಾವಣೆಯ ಬ್ಯಾಲೇಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಕ್ರಮ ಸಂಖ್ಯೆ 2. ಆದರೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಚುನಾವಣಾ ಕ್ರಮಸಂಖ್ಯೆ 3 ಎಂದು ಬದಲಿಸಿ ಕರಪತ್ರ ಹಂಚಿಕೆ ಮಾಡುವ ಮೂಲಕ ಗಿಮಿಕ್ ರಾಜಕೀಯ ನಡೆಸುತ್ತಿದ್ದಾರೆ ಎಂದು ಮಂಜು ಅರೋಪಿಸಿದ್ದಾರೆ.

 ತಪ್ಪಾಗಿ ಕರಪತ್ರ ಹಂಚಿಕೆ

ತಪ್ಪಾಗಿ ಕರಪತ್ರ ಹಂಚಿಕೆ

ಮಾಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಬ್ಯಾಲೆಟ್ ಪತ್ರದಲ್ಲಿ ಕರಪತ್ರ ಕ್ರಮವಾಗಿ ಎಚ್.ಸಿ.ಬಾಲಕೃಷ್ಣ ಕ್ರಮಸಂಖ್ಯೆ 01 , ಎ.ಮಂಜು ಕ್ರಮಸಂಖ್ಯೆ 02 ಎಂದು ಮುದ್ರಣಗೊಂಡಿದೆ. ಆದರೆ ಬಾಲಕೃಷ್ಣರಿಂದ ಎ.ಮಂಜು ಕ್ರಮಸಂಖ್ಯೆಯನ್ನ 03, ಎಂದು ಬದಲಿಸಿ ಕರಪತ್ರಗಳನ್ನು ಬಾಲಕೃಷ್ಣ ಬೆಂಬಲಿಗರು ಕ್ಷೇತ್ರದ ತುಂಬೆಲ್ಲ ಹಂಚಿದ್ದಾರೆ.

 ಬಾಲಕೃಷ್ಣ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟರ್

ಬಾಲಕೃಷ್ಣ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟರ್

ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿ ಬಿಟ್ಟಿದ್ದಾರೆ. ಬಾಲಕೃಷ್ಣರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಪೋಸ್ಟರ್ ಗಳನ್ನು ನೋಡಿದ ಜೆಡಿಎಸ್ ಅಭ್ಯರ್ಥಿ ಎ.ಮಂಜು ಬೆಂಬಲಿಗರಿಂದ ಬಾಲಕೃಷ್ಣ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟರ್ ಗಳನ್ನು ಹರಿಬಿಟ್ಟಿದ್ದಾರೆ.

 ಬಾಲಕೃಷ್ಣ ಕ್ರಿಮಿನಲ್

ಬಾಲಕೃಷ್ಣ ಕ್ರಿಮಿನಲ್

ಬಾಲಕೃಷ್ಣ ಗಿಮಿಕ್ ರಾಜಕಾರಣಿ. ಅವರೊಬ್ಬ ಕ್ರಿಮಿನಲ್. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಬಾಲಕೃಷ್ಣ ಅದೇನೂ ನಮಗೆ ಗೊತ್ತಿಲ್ಲ. ತಪ್ಪಿದ್ದರೆ ಸರಿ ಮಾಡಿಕೊಳ್ಳುತ್ತೇವೆ. ಚುನಾವಣಾಧಿಕಾರಿ ಹೇಳಿದ ಕ್ರಮ ಸಂಖ್ಯೆ ನಮೂದಿಸಿದ್ದೇವೆ ಅಷ್ಟೇ ಎನ್ನುತ್ತಾರೆ.

English summary
Karnataka assembly elections 2018: Politics in the Magadi Assembly constituency day by day developed. The first round speech war between Congress and JDS followers took place at the social networking site Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X