ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: 1,000ಕ್ಕೂ ಅಧಿಕ ಮರಗಳನ್ನು ಬೆಳೆಸಿದ ಅರೆಹಳ್ಳಿ ನಿಂಗಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್‌, 31; ಕೂಲಿ ಮಾಡುತ್ತಲೇ ಕಳೆದ 20 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಮರ ಬೆಳೆಸಿದ ಸಾಲು ಮರದ ನಿಂಗಣ್ಣನಿಗೆ ಈ ಭಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ರಾಮನಗರ ತಾಲೂಕಿನ ಅರೆಹಳ್ಳಿ ಗ್ರಾಮದ ನಿಂಗಣ್ಣ ತುಂಡು ಭೂಮಿ ಇಲ್ಲದೇ ಮರ ಬೆಳಸುತ್ತಾ ನಿಸ್ವಾರ್ಥ ಪರಿಸರ ಸೇವೆ ಸಲ್ಲಿಸಿದ್ದದು. ಹೀಗೆ ನಿಂಗಣ್ಣನ ನಿಸ್ವಾರ್ಥ ಪರಿಸರ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನ‌ದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಮೊದಲ ಬಾರಿ 5 ಲಕ್ಷ ರೂಪಾಯಿ ನಗದು 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಸಾಲು ಮರದ ನಿಂಗಣ್ಣ ಅವರನ್ನು ಗೌರವಿಸಲಿದ್ದಾರೆ‌. ಸಾಲು ಮರದ ನಿಂಗಣ್ಣ ಕಿಡ್ನಿ ಮತ್ತು ಮೂತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ತನ್ನ ಆನಾರೋಗ್ಯದ ನಡುವೆಯು ಅವರಲ್ಲಿನ ಪರಿಸರ ಕಾಳಜಿ ಮಾತ್ರ ಇನ್ನು ಬತ್ತಿಲ್ಲ. ಇಂದಿಗೂ ಮರಗಿಡಗಳ ಪೋಷಣೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

Kannada Rajyotsava Award 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ, 67 ಗಣ್ಯ ಪಟ್ಟಿ ಇಲ್ಲಿದೆKannada Rajyotsava Award 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ, 67 ಗಣ್ಯ ಪಟ್ಟಿ ಇಲ್ಲಿದೆ

 ನಿಂಗಣ್ಣನಿಗೆ ಅಭಿನಂದನೆಗಳ ಮಹಾಪೂರ

ನಿಂಗಣ್ಣನಿಗೆ ಅಭಿನಂದನೆಗಳ ಮಹಾಪೂರ

ಇನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಲುಮರದ ನಿಂಗಣ್ಣ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕಷ್ಟಗಳ ಸುಳಿಯಲಿ ಹುಟ್ಟಿ, ಒಂದು ತುಂಡು ಭೂಮಿ ಇಲ್ಲದೇ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರೂ ಕೂಡ ಇನ್ನೊಬ್ಬರ ಬಳಿ ಕೈಚಾಚದೆ ನಿಸ್ವಾರ್ಥ ಜೀವನ ನಡೆಸುತ್ತಿರುವ ನಿಂಗಣ್ಣ ನಮ್ಮೆಲ್ಲರಿಗೂ ಮಾದರಿ ಆಗಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಇಳಿ ವಯಸ್ಸಿನಲ್ಲಿ ನೀಡಿರುವುದು ಶ್ಲಾಘನೀಯವಾಗಿದೆ. ಈ ನಿಮ್ಮ ಪರಿಸರ ಪ್ರಮೇಕ್ಕೆ ದೇವರು ಇನ್ನಷ್ಟು ಆರೋಗ್ಯ ದಯಪಾಲಿಸಲಿ ಎಂದು ನೂರಾರು ಜನ ಪರಿಸರ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಿಲ್ಲಿ ಹಾರೈಸಿದ್ದಾರೆ

 1,000ಕ್ಕೂ ಅಧಿಕ ಮರಗಳನ್ನು ನೆಟ್ಟ ನಿಂಗಣ್ಣ

1,000ಕ್ಕೂ ಅಧಿಕ ಮರಗಳನ್ನು ನೆಟ್ಟ ನಿಂಗಣ್ಣ

ತಾಲೂಕಿನ ಅರೆಹಳ್ಳಿ ಗ್ರಾಮದ ನಿಂಗಣ್ಣ ರಸ್ತೆಯ ಎರಡು ಬದಿಗಳಲ್ಲಿ 1,000ಕ್ಕೂ ಅಧಿಕ ಮರಗಳನ್ನು ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಕೂನಮುದ್ದನಹಳ್ಳಿಯ ಕೋಡಿಬಸವೇಶ್ವರ ದೇವಾಲಯದ ಆವರಣದಲ್ಲಿನ ಗುಂಡುತೋಪು ಮರಗಳಿಲ್ಲದೆ ಬಣಗುಡುತ್ತಿತ್ತು. ಇದನ್ನು ಕಂಡ ನಿಂಗಣ್ಣ ಅರಣ್ಯ ಇಲಾಖೆಯ ನರ್ಸರಿಯಿಂದ ಸುಮಾರು 300 ಗಿಡಗಳನ್ನು ತಂದು ನೆಟ್ಟು ಪೋಷಿಸಿದ್ದರು. ಈ ಮೂಲಕ ಪ್ರಾರಂಭವಾದ ನಿಂಗಣ್ಣನ ಪರಿಸರ ಪ್ರೇಮ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಬೇಸಿಗೆಯ ಬಿಸಿಲಿನಲ್ಲೂ ತನ್ನ ಮನೆ ಕೆಲಸ, ಕೂಲಿ ಕೆಲಸ ಬಿಟ್ಟು, ಹೆಂಡತಿ ಮಕ್ಕಳ ಜೊತೆ ಸೇರಿ ಇಲ್ಲಿನ ಗಿಡಗಳಿಗೆ ಹತ್ತಿರದ ಕೆರೆ ಹಾಗೂ ಬಾವಿಯಿಂದ ನೀರು ಹಾಯಿಸಿದ್ದಾರೆ. ಹೀಗೆ ಗಿಡಗಳನ್ನು ತನ್ನ ಮಕ್ಕಳಂತೆ ಪೋಷಿಸಿದ್ದರು. ನಿಂಗಣ್ಣನ ಶ್ರಮದ ಫಲವಾಗಿ ಅಂದು ನೆಟ್ಟ 300 ಗಿಡಗಳಲ್ಲಿ ಸುಮಾರು 250 ಗಿಡಗಳು ಇಂದು ಹೆಮ್ಮರವಾಗಿವೆ. ಇಡೀ ಗುಂಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ.

 ನಿಂಗಣ್ಣನ ಪರಿಸರ ಕಾಳಜಿ ಗುರುತಿಸಿದ್ದ ಇಲಾಖೆ

ನಿಂಗಣ್ಣನ ಪರಿಸರ ಕಾಳಜಿ ಗುರುತಿಸಿದ್ದ ಇಲಾಖೆ

ನಿಂಗಣ್ಣನ ಪರಿಸರ ಪ್ರೇಮ ಹಾಗೂ ಬರಡಾಗಿದ್ದ ಗುಂಡು ತೋಪಿನ ಮರಗಳ ಸಂರಕ್ಷಣೆ ಶ್ರಮವನ್ನು ಅರಣ್ಯ ಇಲಾಖೆಯವರು ಗಮನಿಸಿದ್ದರು. ಆಗಿನಿಂದ ಬಿಳಗುಂಬ ಗ್ರಾಮದಿಂದ ಕೂನಮುದ್ದನಹಳ್ಳಿ ಗ್ರಾಮದ ನಡುವೆ ಸುಮಾರು 3 ಕಿಲೋ ಮೀಟರ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 680ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಹೊಣೆ ನಿಂಗಣ್ಣನಿಗೆ ನೀಡಿದ್ದರು. ನಿಂಗಣ್ಣ ಅಂದಿನಿಂದ ಇಂದಿನವರೆಗೂ ರಸ್ತೆಯ ಎರಡು ಬದಿಯಲ್ಲಿ ಗಿಡಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಅವರ ಶ್ರಮ ಮತ್ತು ಪರಿಸರದ ಮೇಲಿನ ಕಾಳಜಿಯನ್ನು ಕಂಡ ಅರಣ್ಯ ಇಲಾಖೆಯವರು ಮತ್ತು ಗ್ರಾಮಸ್ಥರು ಸಾಲುಮರದ ನಿಂಗಣ್ಣ ಎಂದು ಕರೆದಿದ್ದಾರೆ.

 20 ವರ್ಷಗಳಿಂದ ನಿಸ್ವಾರ್ಥ ಪರಿಸರ ಸೇವೆ

20 ವರ್ಷಗಳಿಂದ ನಿಸ್ವಾರ್ಥ ಪರಿಸರ ಸೇವೆ

ಕಳೆದ 20 ವರ್ಷಗಳಿಂದ ಮರ ಬೆಳೆಸುವ ಮೂಲಕ ಪರಿಸರ ಕಾಯಕದಲ್ಲಿ ತೊಡಗಿರುವ ಸಾಲು ಮರದ ನಿಂಗಣ್ಣನನ್ನು ಜಿಲ್ಲಾಡಳಿತ ಗುರುತಿಸುವ ಕೆಲಸವನ್ನು ಮಾಡಿಲ್ಲ. ಆದರೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಹರಸಿ ಬಂದಿದ್ದರೂ ಕೂಡ ನಿಗಣ್ಣನಿಂಗೆ ಇನ್ನು ಸರ್ಕಾರದ ತುಂಡು ಭೂಮಿ ಸಿಕ್ಕಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೇ ಮರಗಳನ್ನು ಬೆಳಿಸಿದ ಹಿನ್ನೆಲೆ ಹಲವಾರು ಪ್ರಶಸ್ತಿಗಳು, ನೂರಾರು ಸನ್ಮಾನಗಳು ನಮ್ಮನ್ನು ಹರಸಿ ಬಂದಿವೆ. ಆದರೆ ಅವುಗಳಿಂದ ನಮ್ಮ ಬದುಕಿಗೆ ಯಾವುದೇ ಭದ್ರತೆ ಇಲ್ಲ. 'ನನಗೆ ಹಾಗೂ ಹೆಂಡತಿಗೆ ವಯಸ್ಸಾಗಿದೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಜೀವನ ನಿರ್ವಹಣೆಗಾಗಿ 4 ಹೆಕ್ಟೇರ್‌ ಸರ್ಕಾರಿ ಜಮೀನನ್ನು ನಮಗೆ ಮಂಜೂರು ಮಾಡಿಕೊಡಬೇಕು' ಎಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸೇರಿದಂತೆ ಹಲವರಿಗೆ ಮನವಿ ಮಾಡಿದ್ದೇನೆ ಎಂದು ನಿಂಗಣ್ಣ ಹೇಳಿತ್ತಿದ್ದಾರೆ.

ಮನವಿಗೆ ಸ್ಪಂದಿಸಿ ಹಲವರು ನಿಂಗಣ್ಣನಿಗೆ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಅದರೆ ನಾಲ್ಕೈದು ವರ್ಷ ಕಳೆದರೂ ಜಿಲ್ಲಾಡಳಿತ ನಿಂಗಣ್ಣನಿಗೆ ಜಮೀನು ನೀಡುವಲ್ಲಿ ವಿಫಲವಾಗಿದೆ. ಜೀವನದ ಅಂತಿಮ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಸರ್ಕಾರ ನಮ್ಮ ನೆರವಿಗೆ ದಾವಿಸಬೇಕು ಎನ್ನುವ ನೋವಿನಲ್ಲಿದ್ದ ಸಾಲು ಮರದ ನಿಂಗಣ್ಣ ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿರುವುದು ಸಂತಸ ತಂದಿದೆ ಎಂದು ಅಲ್ಲಿ ಸ್ಥಳೀಯರು ಹೇಳುತ್ತಿದ್ದಾರೆ.

English summary
Arehalli of ramanagara taluk Ninganna who planted more than 1000 trees in 20 years, announced Kannada Rajyotsava award 2022 by Karnataka government. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X