• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ: ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ

|
   Ramanagara By-elections 2018 : ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕೈ ಸೇರಿದ ಬಗ್ಗೆ ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ

   ಬಿಜೆಪಿ ಮುಖಂಡರು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಕಾರಣ ನೀಡಿ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಸಮ್ಮುಖದಲ್ಲಿ ಎಲ್ಲಿಂದ ಬಂದಿದ್ದರೋ ಮತ್ತೆ ಅಲ್ಲಿಗೆ ಹೋಗಿ ಸೇರಿದ್ದಾರೆ. ಬಂದು ಹೋಗುವ ಮುನ್ನ, ಬಿಜೆಪಿಗೆ ಭಾರೀ ಮುಜುಗರ ತಂದೊಡ್ಡಿ ಹೋಗಿದ್ದಾರೆ.

   ಒಂದು ವಾರದ ಮುನ್ನವೇ ಚಂದ್ರಶೇಖರ್ ಪಕ್ಷ ತೊರೆಯುವ ಬಗ್ಗೆ ಅನುಮಾನವಿತ್ತು ಎನ್ನುವ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿದ್ದಾರೆ. ಸುಳಿವಿದ್ದರೂ ಅವರ ಮನವೊಲಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ರಾ? ಚಂದ್ರಶೇಖರ್ ಪರವಾಗಿ ಪ್ರಚಾರ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಇಲ್ಲಿ ಮುಠಾಳರನ್ನಾಗಿ ಮಾಡಲಾಯಿತಾ?

   ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ

   ಚುನಾವಣಾ ಕಣದಿಂದ ಮಗ ಹಿಂದಕ್ಕೆ ಸರಿದಿರುವುದು ಅಸಹ್ಯಕರ ತೀರ್ಮಾನ, ಇದರಿಂದ ಹೇಸಿಗೆಯಾಗುತ್ತಿದೆ ಎಂದು ರಾಮನಗರದ ಪ್ರಭಾವಿ ಮುಖಂಡ ಮತ್ತು ಎಂಎಲ್ಸಿ ಸಿ ಎಂ ಲಿಂಗಪ್ಪ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪರಿಪರಿಯಾಗಿ ಹೇಳಿದರೂ ಕೇಳದೇ ಬಿಜೆಪಿ ಸೇರಿಕೊಂಡ ಎಂದು ಲಿಂಗಪ್ಪ ಮಗ ಚಂದ್ರಶೇಖರ್ ವಿರುದ್ದ ಕಿಡಿಕಾರಿದ್ದಾರೆ.

   ಬಿಜೆಪಿಯ ಮುಖಂಡರಲ್ಲಿ ಗೊಂದಲವಿದೆ ಎನ್ನುವ ವಿಚಾರವನ್ನು ಪಕ್ಷ ಸೇರುವ ಮುನ್ನವೇ ಅರಿತಿದ್ದರೂ ಅಭ್ಯರ್ಥಿಯಾಗಿ ಒಪ್ಪಿಕೊಂಡು, ಚುನಾವಣೆಗೆ 48ಗಂಟೆಯ ಮುನ್ನ ಹಿಂದಕ್ಕೆ ಸರಿದಿದ್ದು ಯಾಕೆ ಎನ್ನುವ ಆಕ್ರೋಶ ರಾಮನಗರದ ಬಿಜೆಪಿ ಕಾರ್ಯಕರ್ತರು ಹೊರಹಾಕುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಮಾಡಿಕೊಂಡ ಸಿಟ್ಟಿನ ಲಾಭವನ್ನೂ ಬಿಜೆಪಿ ಪಡೆಯಬಹುದಾಗಿತ್ತು ಎನ್ನುವ ಲೆಕ್ಕಾಚಾರವನ್ನು ಕಾರ್ಯಕರ್ತರು ಹೊಂದಿದ್ದರು.

   ರಾಮನಗರದಲ್ಲಿ ರಾಜ್ಯ ಬಿಜೆಪಿ ಮುಖಂಡರೇ 'ಬಿಜೆಪಿಯನ್ನು ಬಕ್ರಾ' ಮಾಡಿದ್ರಾ?

   ಬಿಜೆಪಿ ನಾಯಕರು ಪ್ರಚಾರಕ್ಕೆ ಬರಲಿ, ಬಿಡಲಿ, ಕಣದಲ್ಲಿದ್ದೇನೆ, ಸೋಲೋ ಗೆಲುವೋ ಹೋರಾಡುತ್ತೇನೆ. ಅದು ಬಿಟ್ಟು ಈ ರೀತಿ ಶರಣಾಗತಿಯಾಗುವುದು ರಣಹೇಡಿಗಳು ಮಾಡುವ ಕೆಲಸ ಎನ್ನುವ ಆಕ್ರೋಶ ಸಾಮಾಜಿಕ ತಾಣದಲ್ಲಿ ವ್ಯಕ್ತವಾಗುತ್ತಿದೆ. ಕೆಲವೊಂದು ಸ್ಯಾಂಪಲ್, ಮುಂದೆ ಓದಿ..

   RSS ಅಭ್ಯರ್ಥಿಯನ್ನು ಹಾಕಿದ್ರೆ ತನ್ನ ಕೊನೆ ಉಸಿರಿರುವ ತನಕ ಹೋರಾಡ್ತಿದ್ದ

   RSS ಅಭ್ಯರ್ಥಿಯನ್ನು ಹಾಕಿದ್ರೆ ತನ್ನ ಕೊನೆ ಉಸಿರಿರುವ ತನಕ ಹೋರಾಡ್ತಿದ್ದ

   ಇಂತವರನ್ನು ಕರ್ಕೊಂಡ್ ಬಂದು ಟಿಕೆಟ್ ಕೊಟ್ರೆ ಬಿಜೆಪಿಗೆ ಇದೇ ಗತಿ .ಒಬ್ಬ ನಿಷ್ಠಾವಂತ RSS ಅಭ್ಯರ್ಥಿಯನ್ನು ಹಾಕಿದ್ರೆ ತನ್ನ ಕೊನೆ ಉಸಿರಿರುವ ತನಕ ಹೋರಾಡ್ತಿದ್ದ. ಹೇಡಿಯಂತೆ ಕಣದಿಂದ ಓಡಿಹೋಗುತ್ತಿರಲಿಲ್ಲ. ಅಥವಾ ತನ್ನನ್ನು ತಾನು ಮಾರಿಕೊಳ್ತಿರಲಿಲ್ಲ. ಯಡಿಯೂರಪ್ಪಜೀಗೆ ಒಂದು ಅನುಭವ ಆಗಬೇಕಾಗಿತ್ತು ಹೊರಗಿನಿಂದ ಬಂದವರಿಗೆ ಸಲಿಗೆ ಕೊಡಬಾರದು ಎನ್ನುವುದು ನನ್ನ ಅನಿಸಿಕೆ - ಫೇಸ್ ಬುಕ್ ಪೋಸ್ಟ್.

   ಫೇಕು ಬಿಜೆಪಿ ನಾಯಕರಿಗೂ ಶೇಮ್.. ಶೇಮ್

   ಫೇಕು ಬಿಜೆಪಿ ನಾಯಕರಿಗೂ ಶೇಮ್.. ಶೇಮ್

   ಹೊಂದಾಣಿಕೆ ರಾಜಕೀಯಕ್ಕೆ ನಾಚಿಕೆಯಾಗಬೇಕು, ಫೇಕು ಬಿಜೆಪಿ ನಾಯಕರಿಗೂ ಶೇಮ್.. ಅಮಿತ್ ಶಾ ಅವರೇ ಇಂತಹ ಫೇಕು ಬಿಜೆಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಬರೆಲಾಗಿರುವ ಟ್ವೀಟ್. ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಅವರ ಫೋಟೋಗೆ 'ಭಾವಪೂರ್ಣ ಶ್ರದ್ದಾಂಜಲಿ' ಎನ್ನುವ ಫೋಟೋ ಹಾಕಿ ಆಕ್ರೋಶ ವ್ಯಕ್ತ ಪಡಿಸುತ್ತಿರುವುದು.

   ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

   ನಿಷ್ಠಾವಂತ ಕಾರ್ಯಕರ್ತರಿಗೆ‌ ರಾಮನಗರದಲ್ಲಿ‌ ಟಿಕೆಟ್ ಕೊಟ್ಟಿದ್ದರೆ‌, ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲ

   ನಿಷ್ಠಾವಂತ ಕಾರ್ಯಕರ್ತರಿಗೆ‌ ರಾಮನಗರದಲ್ಲಿ‌ ಟಿಕೆಟ್ ಕೊಟ್ಟಿದ್ದರೆ‌, ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲ

   ಕರ್ನಾಟಕದ ಬಿಜೆಪಿಯ ಮಹೋದಯರೆ, ಅವರಿವರ ಕೈ ಕಾಲು ಹಿಡಿಯುವ ಬದಲು ನಿಷ್ಠಾವಂತ ಕಾರ್ಯಕರ್ತರಿಗೆ‌ ರಾಮನಗರದಲ್ಲಿ‌ ಟಿಕೆಟ್ ಕೊಟ್ಟಿದ್ದರೆ‌, ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲ. ನಿಮ್ಮಂತಹ ನಾಯಕರನ್ನು ನಂಬಿ ಕೆಟ್ಟ ಬಿಜೆಪಿ ಕಾರ್ಯಕರ್ತರು. ಸಾಕು ಮಾಡಿ ನಿಮ್ಮ ನಾಟಕವನ್ನ.. .. ಯಾವುದೇ ಪಕ್ಷವಿರಲಿ ಚುನಾವಣೆಯಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಇಲ್ಲ ಎಂದರೆ ಹೀಗೆ ಆಗುವುದು. - ಫೇಸ್ ಬುಕ್ ಪೋಸ್ಟ್

   ಗೌರವ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಗುಲಾಮ

   ಗೌರವ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಗುಲಾಮ

   ಗೆಲ್ಲುವ ಅಭ್ಯರ್ಥಿ ಎಂದು ಯಡಿಯೂರಪ್ಪನವರು ಟಿಕೆಟ್ ಕೊಟ್ರೆ ಆ ಗೌರವ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಗುಲಾಮ ಅವನು. ಅವನ ಭವಿಷ್ಯ ಅವನೇ ಹಾಳು ಮಾಡಿಕೊಂಡ!! ಇನ್ನೂ ಇವನಿಗೆ ಯಾವ ಪಕ್ಷದಲ್ಲಿಯೂ ನಾಲ್ಕಾಣೆ ಬೆಲೆ ಇರೋಲ್ಲ... Bjp ಅವರಿಗೇ ಇದು ಆಗಬೇಕಾಗಿದ್ದೇ ಒಬ್ಬ ನಿಷ್ಟಾವಂತ ಕಾರ್ಯಕರ್ತರಗೇ ಟಿಕೆಟ್ ಕೊಡೋದು ಬಿಟ್ಟು ಯಾರೋ ಗಂಜಿ ಗಿರಾಕಿಗೇ ಕೊಟ್ಟು ಸಾಯ್ತಾರೇ tuu ನಿಮ್ ಜನ್ಮಕ್ಕೇ... - ಫೇಸ್ ಬುಕ್ ಪೋಸ್ಟ್

   ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!

   ಡಿಕೆಶಿ, ಟೀಮ್ ಸೇರಿ ರಾತ್ರೋ ರಾತ್ರಿ ನಾಯಿಗೆ ಬಿಸ್ಕೇಟ್ ಹಾಕಿ ತಮ್ಮ ಒಡಲಿನಲ್ಲಿ ಇಟ್ಕೊಂಡಿದ್ದಾರೆ

   ಡಿಕೆಶಿ, ಟೀಮ್ ಸೇರಿ ರಾತ್ರೋ ರಾತ್ರಿ ನಾಯಿಗೆ ಬಿಸ್ಕೇಟ್ ಹಾಕಿ ತಮ್ಮ ಒಡಲಿನಲ್ಲಿ ಇಟ್ಕೊಂಡಿದ್ದಾರೆ

   ಆಘಾತ ಆಗಿಲ್ಲ ಬದಲಿಗೆ ಅನಿತಾಗೆ ಸೋಲಿನ ಭೀತಿ ಶುರುವಾಗಿ ಡಿಕೆಶಿ ಮತ್ತು ಟೀಮ್ ಸೇರಿ ರಾತ್ರೋ ರಾತ್ರಿ ನಾಯಿಗೆ ಬಿಸ್ಕೇಟ್ ಹಾಕಿ ತಮ್ಮ ಒಡಲಿನಲ್ಲಿ ಇಟ್ಕೊಂಡಿದ್ದಾರೆ. Bjp ಪಕ್ಷದಲ್ಲಿ ಯಾರು ಅಭ್ಯರ್ಥಿಗಳೇ ಇಲ್ವಾ ಇರುವ ಕಾರ್ಯ ಕರ್ತನ್ನು ಸರಿಯಾಗಿ ನಡೆಸಿಕೊಳ್ಳಲು ಆಗದೆ ಆಪರೇಷನ್ ಕಮಲ ಮಾಡಿ ಅವಮಾನ ಮಾಡಿಸಿಕೊಂಡು ಅಷ್ಟೇ ಈಗಲಾದರೂ ಬುದ್ದಿ ಬರಲಿ bjp ಧುರೀಣರಿಗೆ.

   English summary
   Ramanagara BJP candidate Chandrasekhar withdrawn from the fray, blaming party leaders not responding his call and not coming for campaign. Social Media response on this incident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X