• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರದರ್ ನಾನೂ ರೈತ: ಟ್ರ್ಯಾಕ್ಟರ್ ಚಾಲನೆ ಮಾಡಿದ ಮಾಜಿ ಸಿಎಂ ಎಚ್ಡಿಕೆ

By ರಾಮನಗರ ಪ್ರತಿನಿಧಿ
|

ರಾಮನಗರ, ಜೂನ್, 2: ಬ್ರದರ್, ನಾನೂ ರೈತ. ನಾನು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ. ಈ ಹಿಂದೆ ಹೊಲ ಉಳುಮೆ ಮಾಡುತ್ತಿದ್ದೆ ಇತ್ತೀಚಿಗೆ ಮರೆತಿದ್ದೇನೆ ಅಷ್ಟೇ ಎನ್ನುತ್ತಾ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ರ್ಯಾಕ್ಟರ್ ಚಾಲನೆ ಮಾಡಿದರು.

   ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿ ಟ್ರ್ಯಾಕ್ಟರ್ ಹೇಗೆ ಓಡಿಸಿದ್ರು ನೋಡಿ | Kumaranna Driving Tractor

   ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಉದ್ಘಾಟಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಸ್ವತಃ ತಾವೇ ಟ್ರ್ಯಾಕ್ಟರ್ ಓಡಿಸಿದರು.

   ಸಿ.ಪಿ ಯೋಗೇಶ್ವರ್ ಎಂಎಲ್ಸಿ ಆಗಬೇಕು: ಡಿಸಿಎಂ ಅಶ್ವಥ್ ನಾರಾಯಣ್ಸಿ.ಪಿ ಯೋಗೇಶ್ವರ್ ಎಂಎಲ್ಸಿ ಆಗಬೇಕು: ಡಿಸಿಎಂ ಅಶ್ವಥ್ ನಾರಾಯಣ್

   ನಂತರ ಮಾತನಾಡಿದ ಮಾಜಿ ಸಿಎಂ, ನಾನು ಯಾರ ಋಣದಲ್ಲೂ ಸಿಎಂ ಆಗಿರಲಿಲ್ಲ. ಅವರೆ ನನ್ನ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಅಂತಾ ಕೇಳಿಕೊಂಡಿದ್ದರು. ಕೆಲ ನಾಯಕರು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೊರಟ್ಟಿದ್ದಾರೆ ಎಂದು ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದರು.

   ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಕೆಲವರು ಬಾರಿ ಬೆಂಬಲ ಕೊಟ್ಟಿದ್ದರು. ಯಾರಿಂದ ಅಧಿಕಾರ ಕಳೆದುಕೊಂಡೆ ಅನ್ನೋದು ನನಗೆ ಗೊತ್ತು. ಕೆಲವರು ಕುಮಾರಸ್ವಾಮಿ ಅವರನ್ನು ಉಳಿಸಿದ್ದೇ ನಾವು ಅಂತಾ ಪ್ರಚಾರ ಪಡೆದುಕೊಂಡಿದ್ದಾರೆ ಅಂತಾನು ಗೊತ್ತು, ಇದೀಗ ನಮ್ಮ ಪಕ್ಷ ಮುಗಿಸುತ್ತೇವೆ ಎಂದು ಕೆಲವರು ಹೊರಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ಹೆಸರೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

   ಬಿಜೆಪಿಯವರೇ ಸರ್ಕಾರ ಬೀಳಿಸುತ್ತಾರೆ ಎಂದ ಡಿ.ಕೆ. ಸುರೇಶ್ಬಿಜೆಪಿಯವರೇ ಸರ್ಕಾರ ಬೀಳಿಸುತ್ತಾರೆ ಎಂದ ಡಿ.ಕೆ. ಸುರೇಶ್

   ನನ್ನದು ಒಂದು ಸಣ್ಣ ಪಕ್ಷ, ರೈತರ ಪಕ್ಷ. ಈ ಪಕ್ಷವನ್ನು ದಿವಾಳಿ ಮಾಡಿ ಇನ್ಯಾರಿಗೊ ಅಧಿಕಾರ ಕೊಡಲು ಓಡಾಡಬೇಕಾ. ರಾಜ್ಯದಲ್ಲಿ ಯಾವ ಮೈತ್ರಿಯು ಇಲ್ಲ, ರಾಜ್ಯದಲ್ಲಿ ಮೈತ್ರಿ ಎಲ್ಲಿದೆ? ಎಂದು ಮರು ಪ್ರಶ್ನಿಸಿದರು.

   ರಾಜ್ಯಸಭೆ ಚುನಾವಣೆ ಬಗ್ಗೆ ಯಾವುದೇ ಪಕ್ಷದಿಂದ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಸಹ ತೀರ್ಮಾನ ಮಾಡಿಲ್ಲ. ಅವರು ಜನರ ಮಧ್ಯೆ ಹೋಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಯಾವತ್ತೂ ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ ಎಂದು ಚನ್ನಪಟ್ಟಣದಲ್ಲಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.

   ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿರುವ ಯಂತ್ರಧಾರೆ ಕಾರ್ಯಕ್ರಮದ ಸಂದರ್ಭದಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

   English summary
   Former CM HD Kumaraswamy, who inaugurated a Agriculture equipment rental center in Sunnaghatta village of Channapattana taluk in Ramanagara district, drove the tractor by himself.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X