ಪರಮೇಶ್ವರ್ ಮೇಲೆ ಕೆಂಡಾಮಂಡಲವಾದ ರಾಮನಗರ ಕಾಂಗ್ರೆಸ್ ನಾಯಕರು
ರಾಮನಗರ, ಜೂನ್ 05: ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಪರಮೇಶ್ವರ್ ಆಡಿರುವ ಮಾತುಗಳು ರಾಮನಗರ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ.
ಉಪಮುಖ್ಯಮಂತ್ರಿ ಪರಮೇಶ್ವರ್ ಮೇಲೆ ಇದೇ ವಿಷಯಕ್ಕೆ ಹರಿಹಾಯ್ದಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಅವರು, 'ಪರಮೇಶ್ವರ್ ಅವರು ರಾಮನಗರವನ್ನು ಮಾರಲು ಹೊರಟಿದ್ದಾರೆ' ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಷ ಉಣ್ಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಮೇಶ್ವರ್ ಅವರು ಕಾಂಗ್ರೆಸ್ ಅನ್ನು ದಿವಾಳಿ ಎಬ್ಬಿಸುವಲ್ಲಿ ನಿರತರಾಗಿದ್ದು ಅವರಿಗೆ ಉಪಮುಖ್ಯಮಂತ್ರಿ ಆಗಿದ್ದೇ ತೃಪ್ತಿ ತಂದಿದೆಯಂತೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಆಗಬೇಕು ಎಂಬ ಗುರಿಯೇ ಇಲ್ಲ ಅವರಿಗೆ' ಎಂದು ಟೀಕಿಸಿದರು.
ಡಿಕೆ ಶಿವಕುಮಾರ್ ಅವರಿಗೆ ಮಂತ್ರಿ ಸ್ಥಾನ ನಿರಾಕರಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಗುಟುರು ಹಾಕಿದ ಅವರು, 'ಆದರೂ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆಶಿ ಯಿಂದ ತಪ್ಪಿಸಲು ಒಳ ಸಂಚು ನಡೆಯುತ್ತಿದೆ' ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿರುವ ರಾಮನಗರದಲ್ಲಿ ಉಪ-ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಪರಮೇಶ್ವರ್ ಅವರು ಹೇಳಿದ್ದರು.












Click it and Unblock the Notifications