ಟಾಯ್ಲೆಟ್‌ನಲ್ಲಿ 'ಪಾಕಿಸ್ತಾನ ಜೈ-ಕನ್ನಡಿಗರು ಸೂ... ಮಕ್ಕಳು' ಎಂದು ಬರೆದ ಕಿಡಿಗೇಡಿಗಳು
ರಾಮನಗರ ಜಿಲ್ಲೆಯಲ್ಲಿ ಪಾಕಿಸ್ತಾನದ ಪರ ಬರಹ ಪತ್ತೆಯಾಗಿವೆ. ಅಲ್ಲದೆ ಕನ್ನಡಿಗರ ಬಗ್ಗೆಯೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬರೆಯಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಿಡದಿಯಲ್ಲಿರುವ ಖಾಸಗಿ ಕಂಪನಿಯ ಟಾಯ್ಲೆಟ್‌ನಲ್ಲಿ "ಪಾಕಿಸ್ತಾನ ಜೈ" ಎಂದು ಬರೆಯಲಾಗಿದೆ. ಇದು ಟೊಯೋಟಾ ಬುಶೋಕುನಲ್ಲಿ ನಡೆದಿದ್ದು ಎನ್ನಲಾಗಿದೆ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಹೇಳಲಾಗುತ್ತಿದೆ.
ಇಂತಹ ದೇಶದ್ರೋಹದ ಕೆಲಸ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದು ಕನ್ನಡಪರ ಸಂಘಟನೆಗಳು ಕೂಡ ಸ್ಥಳಕ್ಕೆ ಧಾವಿಸಿ ಬೃಹತ್ ಪ್ರತಿಭಟನೆ ನಡೆಸಿವೆ. ಇನ್ನು ಈ ದೇಶದ್ರೋಹದ ಕೃತ್ಯ ಮಾಡಿರುವ ವಿಚಾರವಾಗಿ ತಮ್ಮ ಸಿಬ್ಬಂದಿಗೆ ಕಂಪನಿಯು ಎಚ್ಚರಿಕೆಯ ಸುತ್ತೋಲೆ ಕೂಡ ಹೊರಡಿಸಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದೆ.

ಕಂಪನಿಯ ಟಾಯ್ಲೆಟ್ ಗೋಡೆ ಮೇಲೆ ಪಾಕಿಸ್ತಾನ ಜೈ, ಕನ್ನಡಿಗರು ಸೂ* ಮಕ್ಕಳು ಎಂಬ ಬರಹ ಕಂಡುಬಂದಿದೆ. ಬಿಡಿದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದನ್ನು ಬರೆದಿದ್ದು ಯಾರು ಎಂದು ಇಲ್ಲಿವರೆಗೆ ತಿಳಿದುಬಂದಿಲ್ಲ. ಶನಿವಾರ ಈ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿ ತನ್ನ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದೆ.
ಕಿಡಿಗೇಡಿ ಇಲ್ಲಿನ ಶೌಚಾಲಯಗಳಲ್ಲಿ ಪಾಕಿಸ್ತಾನ ಜೈ ಎಂದು ಬರೆದಿದ್ದಾರೆ. ಈ ರೀತಿಯ ಬರವಣಿಗೆಗಳು ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸಿದೆ. ಅಲ್ಲದೆ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೂ ಕಾರಣವಾಗಿದೆ. ಈ ರೀತಿಯ ಬರಹಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ "ದೇಶದ್ರೋಹಿ" ಅಪರಾಧದಡಿ ಗುರುತಿಸಲಾಗುತ್ತೆ. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವವರೆಗೂ ನಾವು ಸುಮ್ಮನಿರುವುದಿಲ್ಲ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಕಿಡಿಗೇಡಿಗಳ ಪತ್ತೆಗೆ ಬೆರಳಚ್ಚು ಹಾಗೂ ಬರವಣಿಗೆ ತಜ್ಞರನ್ನು ಕೂಡ ಕರೆಸಲಾಗುತ್ತಿದೆ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವವರೆಗೂ ಸಂಸ್ಥೆಯು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸುತ್ತೋಲೆಯಲ್ಲಿ ಹೇಳಿದೆ.
ಕನ್ನಡಪರ ಸಂಘಟನೆಗಳು ಈ ಘಟನೆ ಖಂಡಿಸಿ ಪ್ರತಿಭಟನೆ ಕೂಡ ನಡೆಸಿದ್ದು, ಇಂತಹ ದೇಶವಿರೋಧಿ ಕೆಲಸ ಮಾಡಿರುವವರನ್ನು ಕೂಡಲೇ ಪತ್ತೆ ಹಚ್ಚಿ ಗಂಭೀರ ಪ್ರಕರಣ ದಾಖಲು ಮಾಡಬೇಕು. ಈ ಕೆಲಸ ಮಾಡಿದವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿವೆ. ಈ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಳೆದ ವರ್ಷ ಕೂಡ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಅಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಚುನಾವಣಾ ಪ್ರಚಾರದ ವೇಳೆ ಪಾಕಿಸ್ತಾನ್ ಕೀ ಜೈ ಎಂದು ಘೋಷಣೆ ಕೂಗಿದ್ದ ಆರೋಪ ಕೇಳಿಬಂದಿತ್ತು. ಆಗ ಜೆಡಿಎಸ್-ಕಾಂಗ್ರೆಸ್ ಕಾಯಕರ್ತರ ಕಿತ್ತಾಟವೂ ಕಾರಣವಾಗಿತ್ತು. ಇದೀಗ ಅಂತದ್ದೇ ಪ್ರಕರಣ ಮತ್ತೆ ಮರುಕಳಿಸಿದೆ.












Click it and Unblock the Notifications