ನಿತ್ಯಾನಂದ ಸ್ವಾಮಿ ಮಾಜಿ ಕಾರ್‌ ಚಾಲಕ ಲೆನಿನ್‌ ಕೋರ್ಟ್‌ಗೆ ಹಾಜರು

ರಾಮನಗರ, ಆಗಸ್ಟ್ 9: ಬಿಡದಿ ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ವಿಚಾರಣೆ ಕೈಗೆತ್ತಿಗೊಂಡ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ದೂರುದಾರ ಲೆನಿನ್ ಕುರುಪ್ಪನ್ ಸುದೀರ್ಘ ವಿಚಾರಣೆ ನಡೆಸಿತು.

ಬುಧವಾರ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಸಿಒಡಿ ಅಧಿಕಾರಿಗಳೊಂದಿಗೆ ರಾಮನಗರ ನ್ಯಾಯಾಲಯಕ್ಕೆ ಹಾಜರಾಗಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಇನ್ ಕ್ಯಾಮರಾ ಪ್ರೊಸಿಡಿಂಗ್ ನಡೆಸಿ ಲೆನಿನ್ ಹೇಳಿಕೆ ದಾಖಲಿಸಿಕೊಂಡರು.

ಇನ್ನು ಆರತಿರಾವ್ ಅತ್ಯಾಚಾರದ ಅಪ್ರಕರಣದ ಪ್ರಮುಖ ಆರೋಪಿ ನಿತ್ಯಾನಂದ 3ನೇ ಆರೋಪಿ ಗೋಪಾಲಶೀಲಂ ರೆಡ್ಡಿ ಹಾಗೂ 5ನೇ ಆರೋಪಿ ರಾಗಿಣಿ ವಿಚಾರಣೆಗೆ ಗೈರಾಗಿದ್ದರು, ಧನಶೇಖರನ್ ಮತ್ತು ಜಮುನಾ ರಾಣಿ ಮಾತ್ರ ವಿಚಾರಣೆ ವೇಳೆ ಹಾಜರಾಗಿದ್ದರು.

Nityanand swami farmer driver Lenin attends to court

ಪ್ರಕರಣವನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಕೂಡ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ವಿಚಾರಣೆಗೆ ಹಿನ್ನಡೆ ಉಂಟುಮಾಡುತ್ತಿದ್ದಾರೆಂದು ಸರ್ಕಾರಿ ಪರ ವಕೀಲ ವಡವಡಗಿ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಮುಂದಿನ ವಿಚಾರಣೆಗೆ ಆರೋಪಿಗಳು ತಪ್ಪಿಸಿಕೊಳ್ಳದಂತೆ ಹಾಜರಾಗಲು ತಾಕೀತು ಮಾಡಿದ್ದಾರೆ.

ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಸೆಷನ್‌ನಲ್ಲೂ ಲೆನಿನ್ ಕುರುಪ್ಪನ್ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ಇದೇ ತಿಂಗಳ 16ಕ್ಕೆ ವಿಚಾರಣೆ ಮುಂದೂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+