ಮಾಗಡಿಯ ಹಾಲಶೆಟ್ಟಿಹಳ್ಳಿಯಲ್ಲಿ ನವವಿವಾಹಿತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ
ಮಾಗಡಿ (ರಾಮನಗರ), ಆಗಸ್ಟ್ 21: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ಮಚ್ಚಿನಿಂದ ಕೊಚ್ಚಿ, ನವ ವಿವಾಹಿತೆಯನ್ನು ಕೊಲೆ ಮಾಡಲಾಗಿದೆ. ಬುಧವಾರ ಸಂಜೆ ಹುಡುಗನ ಪೋಷಕರು ಮನೆಗೆ ಬಂದಾಗ ಕೊಲೆ ಪ್ರಕರಣವು ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದಷ್ಟೇ ಈಕೆ ಮದುವೆ ಆಗಿತ್ತು.
ಪೂರ್ಣಿಮಾ ಕೊಲೆಯಾದ ಮಹಿಳೆ. ಆಕೆಯ ಪತಿ ನಾಗರಾಜ್ ಈ ಘಟನೆ ಬಳಿಕ ನಾಪತ್ತೆ ಆಗಿದ್ದು, ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರು ತಿಂಗಳ ಹಿಂದಷ್ಟೇ ಪೂರ್ಣಿಮಾ- ನಾಗರಾಜ್ ವಿವಾಹ ಆಗಿತ್ತು. ಈಗ ಪೂರ್ಣಿಮಾ ಅವರನ್ನು ನಾಗರಾಜ್ ಕೊಲೆ ಮಾಡಿದ್ದೇ ಆದರೆ ಯಾವ ಕಾರಣಕ್ಕಾಗಿ ಎಂಬುದು ತಿಳಿದು ಬಂದಿಲ್ಲ.

ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ಣಿಮಾ ಸಂಬಂಧಿಕರ ರೋದನ ಎಂಥವರ ಮನ ಕಲುಕುವಂತಿದೆ. ಮಗಳು ಗಂಡನ ಮನೆಯಲ್ಲಿ ಸುಖವಾಗಿರುವ ಕನಸು ಕಂಡು, ಮದುವೆ ಮಾಡಿಕೊಟ್ಟ ಆರು ತಿಂಗಳಲ್ಲೇ ಕೊಲೆ ಆಗಿರುವುದು ದಿಗ್ಭ್ರಮೆ ಉಂಟು ಮಾಡಿದೆ. ಕೊಲೆಯಾದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications