National Highway: ರಾಮನಗರ ಜಿಲ್ಲೆ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್ ವೇ
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೇ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಸ್ತಾಪಿಸಲಾದ ರಾಮನಗರ ಜಿಲ್ಲೆ ಮೇಲೆ ಹಾದುಹೋಗುವ ಪ್ರಮುಖ ಎನ್‌ಎಚ್‌ಗಳು ಯಾವುವು ಹಾಗೂ ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವು ತಿಂಗಳು ಹಿಂದೆಯಷ್ಟೇ 6 ತಾಲ್ಲೂಕುಗಳನ್ನೂ ಬೆಂಗಳೂರಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಸ್ತಾಪ ಮಾಡಿದ್ದರು. ಇವುಗಳನ್ನೆಲ್ಲ ಒಂದು ಸೆಕ್ಟರ್ ಆಗಿ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಪಟ್ಟಿಯಲ್ಲಿ ರಾಮನಗರ ಕೂಡ ಇದೆ. ಈ ಮಾರ್ಗದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್ ವೇ ಕೂಡ ಹಾದುಹೋಗಿದೆ.

ರಾಮನಗರದ ಮೇಲೆ ಹಾದುಹೋಗುವ ಹೆದ್ದಾರಿಗಳು
* ರಾಷ್ಟ್ರೀಯ ಹೆದ್ದಾರಿ 275: ಇದು ಕರ್ನಾಟಕದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದ್ದು, ಬೆಂಗಳೂರು ನಗರ - ರಾಮನಗರ - ಮಂಡ್ಯ - ಮೈಸೂರು - ಕೊಡಗು ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮೂಲಕ ಹಾದು ಹೋಗುತ್ತದೆ. ಈ ಮೂಲಕ ಬೆಂಗಳೂರು ನಗರದಿಂದ ಮೈಸೂರು ಮೂಲಕ ಪಶ್ಚಿಮ ಕರಾವಳಿ ಭಾಗದವರೆಗೆ ವ್ಯಾಪಿಸಿದೆ. ಒಟ್ಟಾರೆ, ಇದು ರಾಜ್ಯದ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ.
ಪ್ರಯೋಜನಗಳು
* ಬೆಂಗಳೂರು-ಮೈಸೂರು-ಮಂಗಳೂರು ನಡುವಿನ ಪ್ರಯಾಣ ಸಮಯ ಕಡಿಮೆಯಾಗುತ್ತದೆ
* ದಕ್ಷಿಣ ಒಳನಾಡು ಕೆಲ ಜಿಲ್ಲೆಗಳು ಹಾಗೂ ಕರಾವಳಿ ಭಾಗಗಳ ನಡುವೆ ಸಂಪರ್ಕ ಸೇತುವೆಯಾಗಿದೆ.
* ಕೃಷಿ ಉತ್ಪನ್ನಗಳು, ಕೈಗಾರಿಕಾ ಸರಕುಗಳ ಸಾಗಣೆ ಸುಲಭ
* ಪ್ರವಾಸೋದ್ಯಮ ಅಭಿವೃದ್ಧಿ: ಮೈಸೂರು, ಕೊಡಗು, ಕರಾವಳಿ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲು ಪ್ರಮುಖ ಪಾತ್ರವಹಿಸುತ್ತದೆ.
* ಹೋಟೆಲ್, ರೆಸಾರ್ಟ್, ಟ್ರಾವೆಲ್ ಉದ್ಯಮಗಳಿಗೆ ಲಾಭ
* ಹೊಸ ಉದ್ಯೋಗಾವಕಾಶಗಳ ಸೃಷ್ಟಿ
* ರಾಷ್ಟ್ರೀಯ ಹೆದ್ದಾರಿ-948 ಕರ್ನಾಟಕದ ರಾಮನಗರ - ಕನಕಪುರ ಹಾಗೂ ತಮಿಳುನಾಡಿದ ಸತ್ಯಮಂಗಲಂ - ಕೋಯಮತ್ತೂರು ಮಾರ್ಗದ ಮೂಲಕ ಹಾದು ಹೋಗುತ್ತದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದ್ದಾಗಿದೆ. ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗುವ ಕಾರಣ ನಿಯಂತ್ರಿತ ಸಂಚಾರವಿದೆ.
ಕರ್ನಾಟಕದಲ್ಲಿ ಯಾವೆಲ್ಲಾ ಭಾಗಗಳಲ್ಲಿ ಹಾದುಹೋಗುತ್ತದೆ?
* ಬೆಂಗಳೂರು ನಗರ
* ರಾಮನಗರ
* ಚಾಮರಾಜನಗರ
ರಾಮನಗರ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್ ವೇ
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲೇ ಹಾದು ಹೋಗುತ್ತದೆ. ವೇಗ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಿದೆ. ಈ ಕಾರಣಗಳಿಂದ ರಾಮನಗರ ಬೆಂಗಳೂರು-ಮೈಸೂರು ಕಾರಿಡಾರ್‌ನ ಪ್ರಮುಖ ರಸ್ತೆ ಸಂಪರ್ಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾದ ಆರಂಭದಲ್ಲಿ ಟೋಲ್ ವಿಚಾರವಾಗಿ ಅಲ್ಲಿನ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಗ್ವಾದಗಳೇ ನಡೆದವು. ಅದೇನೇ ಇರಲಿ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣ ಆದಾಗಿನಿಂದ ಪ್ರಯಾಣ ಸಮಯ ಕಡಿಮೆಯಾಗಿದ್ದು, ವಾಹನ ಸವಾರರಿಗೆ ನೆಮ್ಮದಿ ತಂದಿದೆ. ಆದರೆ, ಟೋಲ್ ಶುಲ್ಕದ ವಿಚಾರದಲ್ಲಿ ಮಾತ್ರ ಆಗಾಗ ಸಣ್ಣಪುಟ್ಟ ವಾಗ್ವಾದಗಳು ನಡೆಯುತ್ತಲಿರುತ್ತವೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್ ವೇನಿಂದ ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿವೆ. ಪ್ರಮುಖವಾಗಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಹೆದ್ದಾರಿ ಪಕ್ಕದ ಭೂಮಿಗೆ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಲಿದೆ. ಭೂ ಮಾಲೀಕರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications