ಚಲುವರಾಯಸ್ವಾಮಿ ಅವರನ್ನು ಸುಮ್.. ಸುಮ್ನೆ ಟಾರ್ಗೆಟ್ ಮಾಡ್ತಾರೆ: ರಾಮನಗರ ಶಾಸಕ
ರಾಮನಗರ, ಆಗಸ್ಟ್, 07: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳ ಪತ್ರ ವಿಚಾರವಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದು, ಇದು ಸತ್ಯಕ್ಕೆ ದೂರವಾರ ವಿಚಾರವಾಗಿದೆ. ಚಲುವರಾಯಸ್ವಾಮಿ ಅವರು ಉತ್ತಮ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಅವರಿಗೆ ಆತರಹದ ರಾಜಕರಣದ ಅವಶ್ಯಕತೆ ಇಲ್ಲ. ವಿನಾಕಾರಣ ಯಾರೋ ಆರೋಪ ಮಾಡಿದ್ದಾರೆ. ಹಿಂದೆಯೂ ಸಹ ಕಂಡಕ್ಟರ್ ಒಬ್ಬರ ಆತ್ಮಹತ್ಯೆ ವಿಚಾರವಾಗಿ ಕೂಡ ವಿಧಾನಸಭೆಯಲ್ಲಿ ಅವರ ವಿರುದ್ಧ ಮಾತನಾಡಿದ್ದರು. ನಾವು ನಮಗೆ ಬೇಕಾದವರಿಗೆ ಟ್ರಾನ್ಸ್‌ಫರ್‌ಗೆ ಲೆಟರ್ ಕೊಡುತ್ತೇವೆ. ಆದರೆ ಅದೊಂದೇ ವಿಚಾರವನ್ನ ಇಟ್ಟುಕೊಂಡು ಸದನದಲ್ಲಿ ಹೇಗೆ ಅವರ ಮೇಲೆ ಮುಗಿಬಿದ್ದರು ನೀವೆ ನೋಡಿದ್ದೀರಿ ಎಂದರು.

ಈಗ ಬಂದಿರುವ ಆರೋಪವು ಸುಳ್ಳು. ಯಾರು ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನಿಮಗೂ ಗೊತ್ತಿದೆ.ಅಧಿಕಾರ ಸಿಗಲಿಲ್ಲ ಅಂತಾ ಹೀಗೆಲ್ಲ ಮಾಡೋದು ಶೋಭೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳದೆ ಶಾಸಕ ಇಕ್ಬಾಲ್ ಹುಸೇನ್ ಆರೋಪಿಸಿದರು.
ನಾನು ಯಾರ ಹೆಸರನ್ನು ಹೇಳುವುದಿಲ್ಲ. ಅಧಿಕಾರಿಗಳು ಪತ್ರ ಬರಿದಿದ್ದರಾ? ಅಥವಾ ಯಾರಾದರೂ ಬರೆಸಿದ್ದರಾ? ಎಂಬುದು ತನಿಖೆ ಆದ ಮೇಲೆ ಸತ್ಯಾಸತ್ಯೆತೆ ಏನೆಂದು ಗೊತ್ತಾಗಲಿದೆ ಎಂದು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.












Click it and Unblock the Notifications